ಪುಟ:ಮಿಂಚು.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

155

ಫುಪ್ಪುಸಕ್ಕೆ ತುಂಬಿಕೊಳ್ಳುತ್ತಿದ್ದ ಸೌದಾಮಿನಿ ಇತ್ತ ಬಂದಾಗ ಕಾವಿಯನ್ನು ಕಂಡಳು.
ಹಜಾರಕ್ಕೆ ಬಂದು “ಯಾರು ?” ಎಂದಳು,
ಮರಿಸ್ವಾಮಿ ಕುಳಿತಲ್ಲಿಂದಲೇ “ಮುಖ್ಯಮಂತ್ರಿಯವರನ್ನು ಕಾಣಬೇಕಾಗಿತ್ತು,”
ಎಂದ.
“ನಾನೇ ಮುಖ್ಯಮಂತ್ರಿ, ಏನಾಗಬೇಕು ?"
ಎದ್ದು ನಿಂತು ಮರಿಸ್ವಾಮಿ ಕೈಜೋಡಿಸಿದ, ಓಡಿ ಬಂದ ಪರಶುರಾಮನೂ
ಅಲ್ಲಿ ನಿಂತ. ಅಷ್ಟರಲ್ಲಿ ಫೋನ್ ಟ್ರಿಣ್‌ಗುಟ್ಟಿತು,
ಪರಶುರಾಮ ರಿಸೀವರನ್ನೆತ್ತಿ “ಸಿಎಂ, ರ ಗೃಹಕಾರ್ಯಾಲಯ” ಎಂದ.
“ಮಾತಾಜಿ, ದಿಲ್ಲಿಯಿಂದ,” ಎಂದೂ ಹೇಳಿದ.
"ಒಂದು ನಿಮಿಷ” ಎಂದು ಮರಿಸ್ವಾಮಿಗೆ ಹೇಳಿ ಸೌದಾಮಿನಿ ಫೋನಿನ ಬಳಿ
ಬಂದಳು.
ಆ ಕೊನೆಯಲ್ಲಿದ್ದುದು ನಕುಲದೇವ್.
"ಯೋಗಾಸನ ಆಯ್ತಾ ಮಿನಿ ?”
“ಆಯ್ತು, ಅಣ್ಣ.”
"ಟರ್ಬೈನ್ ವ್ಯವಹಾರದ್ದು ಏರ್ಪಾಟಾಗಿದೆ. ಆ ಸಂಸ್ಥೆಯ ಏಜೆಂಟ್ ಇಲ್ಲಿ
ದಾನೆ. ರಂಗಧಾಮ್ ಮತ್ತು ನಿಗಮದ ಅಧ್ಯಕ್ಷ ಪ್ರವಾಸ ಹೊರಡಬಹುದು. ಇಲ್ಲಿಗೆ
ಬಂದು ನನ್ನನ್ನು ಕಾಣಲಿ.”
"ಸರಿ.”
“ಶುಭಕಾಮನೆ.”
“ಧನ್ಯವಾದ."
ಕಲ್ಯಾಣನಗರದ ಧರ್ಮಮಠ ಈಗ ತಬ್ಬಲಿಯಲ್ಲ, ಚೆನ್ನೈಯಿಂದ ಸ್ವಾಮೀಜಿ
ಬಂದಿದ್ದಾರೆ ಎಂದು ಸೌದಾಮಿನಿ ಸಂತುಷ್ಟಳಾದಳು.
“ಸ್ವಾಮೀಜಿಗೆ ನಮ್ಮ ಪ್ರಣಾಮ ತಿಳಿಸಬೇಕು. ಇನ್ನು ಒಂದೆರಡು ವಾರಗಳಲ್ಲಿ
ಬಂದು ಕಾಣ್ತೀವೆ. ನಮಗೆ ನೆನಪಿರುವ ಪ್ರಕಾರ ಮಠದ ಸುತ್ತಲೂ ಉದ್ಯಾನವಿಲ್ಲ.
ದಂತೇಶ್ವರಿಯ ಪೂಜೆಗೆ ಹೂ ಕೂಡ ಇಲ್ಲ.”
“ಹೌದು.”
“ಸರಕಾರದ ತೋಟಗಾರಿಕೆ ಇಲಾಖೆಯ ಮುಖ್ಯಸ್ಥ ಇವತ್ತೇ ಬಂದು
ಸ್ವಾಮೀಜಿಯನ್ನು ಭೇಟಿಯಾಗ್ತಾರೆ. ಅವರ ಜತೆ ಇವರು, ನಮ್ಮ ಆಪ್ತ ಕಾರ್ಯದರ್ಶಿ,
ಬಾರ್ತಾರೆ. ಸ್ವಾಮೀಜಿ ನಿರ್ದೇಶ ನೀಡಲಿ. ಎರಡು ಮೂರು ದಿವಸಗಳಲ್ಲಿ ಮಠಕ್ಕೆ
ಪತ್ರ-ಪುಷ್ಟ ಕಳೆ ಬರ್ತದೆ. ಒಬ್ಬ ಮಾಲಿ ನಿತ್ಯವೂ ಬಂದು ಆರೈಕೆ ಮಾಡ್ತಾನೆ
ಗಾರೆ ಚೌಕಟ್ಟಿನ ತಾವರೆ ಕೊಳ, ಕಾರಂಜಿ, ಮಲ್ಲಿಗೆ ಚಪ್ಪರ ಸಂಪಿಗೆ-ಪಾರಿಜಾತ
ಗಿಡಗಳು, ರಸ್ತೆಗೆ ಕಾಣಿಸದಂತೆ ಹಸುರು ಪ್ರಾಕಾರ. ಸ್ವಾಮಿಜಿ ಬಂದಿರುವ ಸುದ್ದಿ