ಪುಟ:ಮಿಂಚು.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

156

ಮಿಂಚು

ಪತ್ರಿಕೆಗಳಲ್ಲಿ ಪ್ರಕಟವಾಗುವ ಹಾಗೆ ಮಾಡ್ತೇನೆ. ಸಂದರ್ಶನಕ್ಕೆ ಭಕ್ತಾದಿಗಳು ಭಾರಿ
ಸಂಖ್ಯೆಯಲ್ಲಿ ಜಮಾಯಿಸ್ತಾರೆ. ಕೃಷ್ಣಾಜಿನ, ರತ್ನಗಂಬಳಿ, ಪೀಠೋಪಕರಣ-
ಮಠಕ್ಕೆ ಅದೇನೇನು ಬೇಕೊ ಪಟ್ಟಿಮಾಡಿ ಇವರ ಕೈಗೆ ಕೊಡಿ, ದವಸಧಾನ್ಯ,
ಹಾಲು, ಜೇನು ಎಲ್ಲದರ ಪೂರೈಕೆಗೂ ಇವರು ಏರ್ಪಾಟು ಮಾಡ್ತಾರೆ. ತಿಳಿಯಿತಾ
ಪರಶುರಾಮ್ ? ನಮಸ್ಕಾರ, ಮಠಕ್ಕೆ ಬಂದಾಗ ಭೇಟಿಯಾಗೋಣ.”
ಮರಿಸ್ವಾಮಿ ಮೌನವಾಗಿ ನಮಸ್ಕರಿಸಿದ ಮುಖ್ಯಮಂತ್ರಿಯ ಔದಾರ್ಯಕ್ಕೆ
ಪ್ರತಿಯಾಗಿ ಏನು ಹೇಳಬೇಕೊ ತೋಚಲಿಲ್ಲ. ಧರ್ಮಮಠದ ಬಗ್ಗೆ ಸೌದಾಮಿನಿಯ
ಒಲವು ಪರಶುರಾಮನಿಗೆ ತಿಳಿದಿತ್ತು. ಆಜ್ಞಪ್ತನಾಗದೆ ಇದ್ದರೂ ಮರಿಸ್ವಾಮಿ
ಯನ್ನೂ ಹೊರಗೆ ನಿಂತಿದ್ದ ಚಾಕರನನ್ನೂ ಕಾರಿನಲ್ಲಿ ಮಠಕ್ಕೆ ಕೊಟ್ಟು ಕಳುಹಿದ.
ಕಾರಿನಿಂದಿಳಿದ ಮೇಲೆ ಚಾಕರ “ನನಗೆ ಮುಖ್ಯಮಂತ್ರಿಯೋರು ನೋಡೋಕೆ
ಸಿಗಲೇ ಇಲ್ಲ” ಎಂದ.
"ಇನ್ನೆರಡು ವಾರಗಳಲ್ಲಿ ಇಲ್ಲಿಗೆ ದಯಮಾಡಿಸ್ತಾರೆ” ಎಂದು ಸಂತೈಸಿದ
ಮರಿಸ್ವಾಮಿ, ಹಿತ್ತಿಲ ಬಾಗಿಲಲ್ಲಿ, ಹಿಂದಿನ ದಿನ ಉಳಿದದ್ದು ದೊರೆಯಿತು, ಕಸಬರಿಕೆ
ಹಿಡಿದು ಚಾಕರ ಗುಡಿಸತೊಡಗಿದ. ಹನ್ನೊಂದು ಗಂಟೆಗೆ ತೋಟಗಾರಿಕೆ ಇಲಾಖೆ
ಮುಖ್ಯಸ್ಥನೂ ಪರಶುರಾಮನೂ ಬಂದರು, ಮುಖ್ಯಮಂತ್ರಿ ಕಳಿಸಿದವರು ಎಂದು
ಮಠದ ಚಾಕರನಿಗೆ ಗೌರವ, ಅವರಿಬ್ಬರೂ ಸ್ವಾಮೀಜಿಯೊಡನೆ ಮಾತನಾಡಿದರು.
ತಮಗೆ ಬೇಕಾದ ಮಾಹಿತಿಯನ್ನೆಲ್ಲ ಟಿಪ್ಪಣಿ ಮಾಡಿದರು, (ಮರಿಸ್ವಾಮಿ ಮಠಕ್ಕೆ
ಹೊಟ್ಟೆಪಾಡಿಗೆ ಬೇಕಾದ ಸಾಮಗ್ರಿಗಳ ಪಟ್ಟಿಯನ್ನು ಪರಶುರಾಮನ ಕೈಯಲ್ಲಿಟ್ಟ,
ಸಂಜೆ ನಾಲ್ಕು ಗಂಟೆಗೆ ನಾಲ್ಕು ಲಾರಿಗಳಲ್ಲಿ ಪುಷ್ಪೋದ್ಯಾನವೇ ಬಂದಿಳಿ
ಯಿತು. ತಜ್ಞ ಮಾಲಿಗಳು ಕುಂಡಗಳಲ್ಲಿದ್ದ ಹೂಗಿಡ-ಬಳ್ಳಿಗಳಿಗೆ ವಿಶಿಷ್ಟ ಆಕಾರ
ನೀಡಿದರು. ಮಠದ ಚಾಕರ ಮೂಕನಾದ. ಇನ್ನೂ ಹತ್ತು ದಿವಸದ ಕೆಲಸ ಐತೆ”
ಎಂದು ಬಂದಿದ್ದ ಮಾಲಿಗಳಲೊಬ್ಬ ನುಡಿದಾಗ ಇವನು ಬಾಯಿತೆರೆದು, “ಔದಾ?”
ಎಂದು ನುಡಿದು, ಮತ್ತೆ ಬಾಯಿ ಮುಚ್ಚಿದ, ಬೇರೊಂದು ಲಾರಿ ಪೀಠೋಪಕರಣ
ಗಳನ್ನು ತಂದಿತು. ಟೆಂಪೋಗಾಡಿ ದವಸ ಧಾನ್ಯ ಇತ್ಯಾದಿಗಳನ್ನು ತಂದು ಇಳಿಸಿತು.
ಹಿಂದಿನ ಸ್ವಾಮೀಜಿ ಉತ್ಕಲಕ್ಕೆ ಹೋದೊಡನೆ ಆಗ ಇದ್ದ ಅಡುಗೆಯವನು
ಯಾವುದೋ ಹೋಟೆಲಿನಲ್ಲಿ ಉದ್ಯೋಗಿಯಾದ. ಈಗ ಮರಿಸ್ವಾಮಿಯೇ ಅಡುಗೆಯ
ಹೊಣೆ ಹೊತ್ತಿದ್ದ. ಇಲ್ಲಿನ ವ್ಯವಹಾರಕ್ಕೆ ನಳರಾಯ ಬೇಕೇ ಬೇಕು ಎನಿಸಿತು
ಸ್ವಾಮೀಜಿಗೆ ದಿನಸು ತಂದೊಪ್ಪಿಸಿದವನು ಒಳ್ಳೆಯ ಬಾಣಸಿಗನನ್ನು ಗೊತ್ತು ಮಾಡಿ
ಕೊಡ್ತೇನೆ ಎಂದ. ರಾತ್ರಿಯ ಊಟ ಮುಗಿಸಿ, ಭೀಮಾಚಾರ್ ಎಂಬವನು ಬಂದು
ಹಾಜರಾದ. ದೊಡ್ಡ ಸ್ವಾಮೀಜಿಗೆ ಉದ್ದಂಡ ಪ್ರಣಾಮ ಮಾಡಿದ. “ನಾನು
ನಾಳೆ ಬೆಳಗ್ಗಿನಿಂದ ಚಾರ್ಚ್ ತಗೊಳ್ತನೆ” ಎಂದ.
ಮಾರನೆಯ ಬೆಳಗ್ಗೆ ತೋಟಗಾರಿಕೆ ಮುಖ್ಯಸ್ಥ ಉದ್ಯಾನ ತಜ್ಞೆಯೊಡನೆ