ಪುಟ:ಮಿಂಚು.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

161

“ನನಗೆಲ್ಲಿಯ ಮದುವೆ? ನಾನು ಹೋದರೆ ಮಾಜಿಯ ಸೇವೆಗೆ ಯಾರಿದ್ದಾರೆ?
ಅಲ್ಲದೆ, ಈಗ ನನಗೂ ಪಾರ್ಟಿದೆ. ಡ್ಯಾನ್ಸ್ ಹೇಳ್ಕೊಟ್ಟಿದ್ದಾರೆ.”
“ನನ್ನ ಜುಮ್ಕಿ."
“ನಾನು ಇಲ್ಲೇ ಇರಲಾ, ಬಹೆನ್‍‍‍‍‍‍ಜಿ ? ನೀವು ಕೇಳಿದರೆ ದೀದಿಜಿ ಒಪ್ಪಲೂ
ಬಹುದು."
"ಅವರ ಸೇವೆಗೆ ?”
“ಬೇರೆ ಯಾರಾದರೂ ಬರ್ತೇರೆ.”
“ಪಾಪ ! ಮುದ್ದು. ನಿನಗೆ ಒಬ್ಬ ಗಂಡನನ್ನು ಹುಡುಕಲೇಬೇಕು.”
“ಅಂಥ ಮದುವೆ ಇದ್ದರೆ ನೀವು ವಿಮಾನದಲ್ಲಿ ಬಂದೇ ಬರ್ತೀರಿ ಅಲ್ಲವಾ ?"
“ಬರ್ತೇನೆ, ಜುಮ್ಕಿ. ನಿನ್ನ ಮಾಜಿಯ ಸ್ನಾನ ಆಯ್ತೇನೋ, ನೋಡು.
ಬಟ್ಟೆ ಗಿಟ್ಟೆ ತಗೊಂಡು ಹೋಗಿ ಕೊಡು.”
“ಹೂಂ... ಮಾತಾಜಿ ಅಂತ ನಿಮ್ಮನ್ನ ಕರೀಬೇಕು ಅಲ್ವಾ ? ಕಾರ್ಯದರ್ಶಿ
ಯವರು ಹಾಗೇಂತ ನಿಮ್ಮನ್ನ ಕರೆಯೋದು ಕೇಳ್ದೆ."
“ಅವನಿಗೆ ಮದುವೆಯಾಗಿದೆ. ಸ್ನಾನದ ಮನೆ ಕಡೆ ಗಮನ ಇಡು. ನೀರು
ಸುರೀತಾ ಇದ್ರೆ ಕರೆದದ್ದೂ ಕೇಳಿಸೋದಿಲ್ಲ."
“ಹೂಂ ಮಾತಾಜಿ, ನನಗೊಂದು ಕಥೆ ನೆನಪಾಗ್ತದೆ, ಏಳು ಸುತ್ತಿನ ಕೋಟೆ.
ಅದರೊಳಗೊಬ್ಬ ರಾಜಕುಮಾರಿ, ಸುಂದರಿ, ನಿಮ್ಮ ಹಾಗೆ."
ಸಂತೋಷವನ್ನು ತೋರ್ಪಡಿಸದೆ ಸೌದಾಮಿನಿ ಹುದುಗಿಯ ಕೆನ್ನೆ ಚಿವುಟಿ
ಅಂದಳು :
“ನೀನು ಶುದ್ಧ ತಲೆಹರಟೆ. ಹೋಗು ಸ್ನಾನದ ಮನೆ ಹತ್ತಿರ ಇರು."
....ಮೃದುಲಾಬೆನ್‍‍‍‍‍‍‍‍‍‍‍ಗೆ ಸೌದಾಮಿನಿ_ಚಿಪ್ಪನ್ನು ತೆರೆದು ನೋಡುವ ಆಸೆ, ಊಟದ
ವೇಳೆಯಲ್ಲಿ ಅವಕಾಶ ಸಿಗಲಿಲ್ಲ. ಮುಖ್ಯಮಂತ್ರಿಯ ಮಿತಾಹಾರ ಸೇವನೆಯನ್ನು
ಅವಳು ಗಮನಿಸಿದಳು. ತಾನೂ ಆ ಮೇಲ್ಪಂಗ್ತಿಯನ್ನು ಅನುಸರಿಸಬೇಕು ಅನಿಸಿತು.
...ಜುಮ್ಕಿ ನಿದ್ದೆ ಹೋದಳು. ಪರಶುರಾಮ ಮನೆಗೆ ತೆರಳಿದ, ಉರಿಯುವ
ದೀಪಗಳ ಸಂಖ್ಯೆ ಕಮ್ಮಿಯಾಯಿತು. ನೆಳಲುಬೆಳಕುಗಳ ಮಧ್ಯೆ ಕಾವಲಿನವರ ಅಸ್ಪಷ್ಟ
ಚಲನೆ ಕಾಣಿಸುತ್ತಿತು. ಅವರ ಬೀಡಿ ಸಿಗರೇಟುಗಳು ಮಿಣುಕುಹುಳಗಳಾದುವು.
ಅತಿಥಿಗಳ ಕೊಠಡಿಗೆ ಹೋಗುವ ದಾರಿಯಲ್ಲಿ ಆಳೆತ್ತರದ ಕಪ್ಪುಬಿಳಿ ಚಿತ್ರ
ಎದುರು ಗೋಡೆಯ ಮೇಲಿತ್ತು, ಪ್ಯಾಂಟು ಶರಟು, ಟೆನ್ನಿಸ್ ರಾಕೆಟ್.
ಮೃದುಲಾ ಉದ್ಧರಿಸಿದಳು ;
“ವಿನೋದ ಒಮ್ಮೆ 'ಟೈಮ್ಸ್'ನ ಒಂದು ಪ್ರತಿ ತಂದಿದ್ದ. ಅದರಲ್ಲಿ ಈ ಚಿತ್ರ
ಇತ್ತು.”

11