ಪುಟ:ಮಿಂಚು.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

166

ಮಿಂಚು

ಗ್ರೀನ್ ರೂಮಿನಲ್ಲಿ ಕೊನೆಯ ಒಪ್ಪ ಮುಗಿಯಿತು, ಪಕ್ಕವಾದ್ಯ ಸ್ಥಳೀಯ
ನಿಷ್ಣಾತರ ಹೊಣೆ, ರಾಮರಾಜು ಅವರನ್ನು ಕಲೆ ಹಾಕಿದ್ದ. ರಿಹರ್ಸಲ್‌ನಲ್ಲಿ
ಪ್ರತಿಷ್ಠಾನದ ಕಲಾವಿದರು ತೃಪ್ತರಾಗಿದ್ದರು.
ನೀಳ ಮುಳ್ಳುಗಳು ಓಡುತ್ತಿವೆ. ನಿಮಿಷ-ಮಿನಿಟು. ಗುಸುಗುಸು ಸದ್ದಾಯಿತು.
ರಂಗಸ್ಥಲದಲ್ಲಿ ಎಲ್ಲೂ ಅವಿತುಕೊಂಡಿದ್ದ ಸಿರಿಕಂಠ ಧ್ವನಿವರ್ಧಕಗಳ ಮೂಲಕ
ಹೇಳಿತು :
“ಮಾನ್ಯ ರಾಜ್ಯಪಾಲರೂ ಮಾನ್ಯ ಮುಖ್ಯಮಂತ್ರಿಯೂ ಆಗಮಿಸುತ್ತಿದ್ದಾರೆ.
ಸಭಿಕರು ಚಪ್ಪಾಳೆ ತಟ್ಟಬೇಕಾಗಿ ಕೋರಿಕೆ,”
ಸದ್ಯಃ ಎದ್ದು ನಿಲ್ಲಬೇಕು ಎಂದು ಪ್ರಾರ್ಥಿಸಲಿಲ್ಲವಲ್ಲ ! ಪ್ರಚಂಡ ಕರತಾಡನ
ವಾಯಿತು.
ಸೌದಾಮಿನಿಯ ಜತ ಮೃದುಲಾಬೆನ್, ರಾಜ್ಯಪಾಲರೊಂದಿಗೆ ಅವರ ಪತ್ನಿ,
ವಿ.ಐ.ಪಿ. ಪೀಠಗಳು ಭರ್ತಿಯಾದುವು, ಬಾಗಿಲುಗಳನ್ನು ಮುಚ್ಚಿದರು. ಹೊರಗೆ
ಇನ್ನು ಪೋಲೀಸರ ಡ್ಯೂಟಿ.
ಮೃದುಲಾ ಅಂದಿದ್ದಳು ; 'ಲೀಲಾಲೋಲ ಕೃಷ್ಣ' ಐದು ಮಿನಿಟು ವಿರಾಮ
“ಕಾಮ ದಹನ', ಎರಡನೇ ರೂಪಕದಲ್ಲಿ ಕಾಮದೇವ ಪುನಃ ಜೀವ ತಳೆಯುವ ದೃಶ್ಯ
ಅಂತಿಮವಾಗಿ ಬರೋದಕ್ಕೆ ಮುಂಚೆ ಮಾನ್ಯ ಅತಿಥಿಗಳ ಭಾಷಣ ಇತ್ಯಾದಿ,
ಧನಂಜಯ ಮೊದಲ ಸಾಲಿನಲ್ಲೇ ಇದ್ದ. ಉಡುಗೊರೆ ಪೆಟ್ಟಿಗೆಗಳನ್ನು ಆತನ
ಎದುರಲ್ಲೇ ಕೆಳಗೆ ಜೋಡಿಸಲಾಗಿತ್ತು. ದಟ್ಟ ಜನಸಂದಣಿಯಲ್ಲಿ, ಎಲ್ಲರೂ ಸಂಪನ್ನರೇ
ಆದರೂ ಅಚಾತುರ್ಯ ಅಸಂಭವವಲ್ಲ ಎಂಬುದನ್ನು ಆತ ತಿಳಿದಿದ್ದ. ಅವನ
ಪತ್ನಿಯೂ ಮೂವರು ಮಕ್ಕಳೂ ಆತನ ಎಡಕ್ಕೆ ಅದೇ ಸಾಲಿನಲ್ಲಿ ಕುಳಿತಿದ್ದರು.
ಕಾಮದೇವನ ಪಾತ್ರಧಾರಿ ನರ್ತಕ ತಂಡದ ಮುಖ್ಯಸ್ಥ -ತೆರೆಯ ಹಿಂದೆಯೇ
ಬೆನಕನಿಗೆ ಅಡ್ಡ ಬಿದ್ದ. ನಾಲ್ವೇ ಸಾಲುಗಳ ಸ್ತುತಿ, ಸಂಸ್ಕೃತದಲ್ಲಿ, ಹಿಮ್ಮೇಳ ಹಸು
ರಾಯಿತು. ಕೊಳಲು ಅಗ್ರಗಾಮಿ, ಜತೆ ಉಸಿರಾಟ ಇತರ ವಾದ್ಯಗಳಿಂದ, ಗಾಯಿಕ
ನಂದಗೋಕುಲದ ಬಣ್ಣನೆಗೆ ತೊಡಗಿದಳು. ತೆರೆ ಸರಿಯಿತು.
ತಂಡದ ಇನ್ನೊಬ್ಬ ನೃತ್ಯ ಪ್ರವೀಣ ಮುದ್ದುಕೃಷ್ಣ ತುಂಟ ಕೃಷ್ಣ ಕಳ್ಳ ಕೃಷ್ಣ
(ಬೆಣ್ಣೆ, ಸೀರೆ) ಎಲ್ಲವೂ. ಅವನು ರಂಗಸ್ಥಲದ ಮಧ್ಯಕ್ಕೆ ಬಂದ. ಸುತ್ತಲೂ
ಗೋಪಿಕಾ ಸ್ತ್ರೀಯರು (ಹತ್ತರ ಸಂಖ್ಯೆಯೊಳಗೆ). ವೃತ್ತಾಕಾರವಾಗಿ ಚಲನೆ (ರಿಂಗಾ
ರಿಂಗಾ ರೋಜೆಸ್, ಪಾಕೆಟ್ ಫುಲ್ ಆಫ್ ಪೋಜೆಸ್) ವಿವಿಧ ಬಣ್ಣಗಳಲ್ಲಿ ಬೆಳಕೂ
ಲಾಸ್ಯವಾಡಿತು.
(ಗೋಕುಲದ ಬಣ್ಣನೆ ಆದಿಶೇಷನಿಗೂ ಅಸದಳ ಎಂದ ಮೇಲೆ ಈ ಯಾಸನಿಂದ
ಆದಾತಾ ?)
ಕೃಷ್ಣನ ಲೀಲೆಗಳು ಮುಗಿಯಲು ಐವತ್ತು ಮಿನಿಟು ತಗಲಿತು, ಚಪ್ಪಾಳೆಯೋ