ಪುಟ:ಮಿಂಚು.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

20

ಮಿಂಚು

ಛಾಯಾಚಿತ್ರಕಾರರು ಕಾರ್‍ಯಕ್ರಮದ ಆರಂಭದಿಂದ ಅಂತ್ಯದವರೆಗೂ ಸೇವಾ
ನಿರತರಾಗಿದ್ದರು.
ಜನ ಬಂದುದು ವ್ಯವಸ್ಥಿತವಾಗಿ, ಚೆದರಿದ್ದೂ ಹಾಗೆಯೇ. ಬಯಲಿನ ಒಂದು
ಮೂಲೆಯಲ್ಲಿದ್ದುವು ರಂಗಸ್ವಾಮಿ ಮತ್ತು ನಾಯಕರ ಕಾರುಗಳು.
ನಾಯಕ್ ಕೇಳಿದರು :
“ಹೋದ ಶತಮಾನದಲ್ಲಿ ಪುಟ್ಟವ್ವನ್ನ ಕರಕೊಂಡ್ಬಂದಾಗ ಏನು ಹೇಳಿದ್ದಿರಿ?”
“ಮರೆತಿದ್ದೇನೆ.”
ಇವಳು ಗುಜರಾಥಿ ಸಮಾಜ ಸೇವಿಕೆಯ ಶಿಷ್ಯೆ ಅಂತ ಹೇಳಿರ್‍ಲಿಲ್ವಾ ?”
“ನಿಮ್ಮ ಜ್ಞಾಪಕ ಶಕ್ತಿಗೆ ಮೆಚ್ಚಿದೆ.”
“ಆ ಮೃದುಲಾ ಅಮ್ಮನೇ ಗುರು. ಏನಂತೀರಾ ?”
“ಆದರೆ ಪುಟ್ಟನ ಹೊಸ ಯೌವನ ?”
“ಅದೆಲ್ಲ ಔಷಧಿ ಪ್ರಭಾವ. ಒಮ್ಮೆ ನನ್ನ ಕೈಗೆ ಸಿಗಲಿ.....”
“ಅದು ಹುತ್ತ, ದುಡುಕ್ಷೇಡಿ ನಾಯಕ್. ನ್ಯಾಯಸ್ಥಾನಕ್ಕೆಳೆದು ಬುದ್ಧಿ
ಕಲಿಸೋದೆ ಸರಿ.”
... ನಿವಾಸದಲ್ಲಿ ಮುಖ್ಯಮಂತ್ರಿಯ ಖಾಸಾ ಕೊಠಡಿಯಲ್ಲಿದ್ದಾಗ ಮೃದುಲಾ
ಕೇಳಿದಳು :
ಕರಂಡಕದ ಕೆತ್ತನೆ ಕೆಲಸ ಎಷ್ಟು ಸೂಕ್ಷ್ಮ ! ಇದರೊಳಗೆ ಏನಿದೆಯೋ ?”
“ತೆರೀರಿ.”
ಮೃದುಲಾ ಮುಚ್ಚಳವನ್ನೆತ್ತಿದಳು : ಒಂದು ಚೀಟಿ :
'ಗುರುದಕ್ಷಿಣೆ, ಶಿಷ್ಠೆಯಿಂದ.' ಜತೆಯಲ್ಲೊಂದು ಅಂಟಿಸದೇ ಇದ್ದ ಲಕೋಟೆ,
ಅದನ್ನೂ ತೆರೆದಳು. ಮೃದುಲಾಬೆನ್ ಹೆಸರಿಗೆ ಹತ್ತು ಲಕ್ಷಕ್ಕೊಂದು ಸರಕಾರೀ ಚೆಕ್ಕು.
“ಮಿನಿ ! ನನ್ನ ಚಿನ್ನ ! ಏನಿದು ?”
“ಆಕ್ಷೇಪಗಳಿಗೆ ಅಪೀಲಿಗೆ ಅವಕಾಶವಿಲ್ಲ.”
“ಧರ್ಮೇಂದರ್‌ಬಾಬಾರಲ್ಲಿಗೆ ಸದ್ಯಕ್ಕೆ ಹೋಗೋದಿಲ್ಲ, ಅಲ್ಲವೆ ?”
“ಈ ಹಣ ಪ್ರತಿಷ್ಠಾನಕ್ಕೋ ? ಅಲ್ಲ..."
“ನಿಮ್ಮೊಬ್ಬರ ಹೆಸರೇ ಬರೆದಿದ್ದೇನೆ. ಪ್ರತಿಷ್ಠಾನದ ಕೆಲಸ ಖಂಡಿತ ನಡೆಯುತ್ತೆ,
ಕರುಣಾನಿಗೆ ತರಬೇತಿ ಕೊಡಿ,” :
"ಅವಳಿಗೆ ವಿನೋದನ ಮೇಲೆ ಕಣ್ಣು.”
“ಮಾಡ್ಕೊಳ್ಳಿ ಬಿಡಿ, ವಿವಾಹಿತೆಯರು ಪ್ರತಿಷ್ಠಾನದ ಪಟ್ಟಕ್ಕೆ ಬರಬಾರ
ದೂಂತ ಇದೆಯೇನು ?”
“ಸರಿ.”
“ಮೊದಲು ನಿಮ್ಮ ನೆಲೆ ಭದ್ರ ಮಾಡ್ಕೊಳ್ಳಿ. ಆಮೇಲೆ ಸೇವಾಕಾರ್ಯ