ಪುಟ:ಮಿಂಚು.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 169 ನಿರಂತರವಾಗಿ ಸಾಗಲಿ. ನಿಮಗೆ ಭಾರತರತ್ನ ಬಿರುದು ಕೊಡಿಸೋದಕ್ಕೆ ಪ್ರಯತ್ನಿಸ್ತೀನಿ."

  "ಅದಕ್ಕೆ ಎಷ್ಟು ಲಕ್ಷ ಖರ್ಚಾಗಬಹುದು ?" 
  "ತೋಬಾ ತೋಬಾ! ಬಿಡ್ತು ಅನ್ನಿ. ಅದು ದಿಲ್ಲಿ ಮರ್ಜೀನ ಅವಲಂಬಿ ಸಿರ್ತದೆ. ನಾನು ನಿಮಗೆ ಹೇಳಲೇಬಾರದಿತ್ತು. ಮರ್ತು ಬಿಡಿ." 
  “ಅದೇನು ಮಾಡ್ತಿಯೊ ಮಾಡು. ನಾನು ಮರೆತೇ ಬಿಟ್ಟೆ."
            *          *            *
  ಪ್ರತಿಷ್ಠಾನ ಕಲಾತಂಡ ಮರಳುವ ಪೂರ್ವಾಹ್ನ ನಗರದ, ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳ ಸಂದರ್ಶನ, ಜತೆಗೊಬ್ಬ ಛಾಯಾಚಿತ್ರಗಾರ. ರಾಮರಾಜುಗೆ ತಂಡದ ಒಬ್ಬಳು ಬಹಳ ಮೆಚ್ಚುಗೆಯಾಗಿದ್ದಳು. ಬಸ್ಸಿನಿಂದ ಇಳಿಯುವಾಗ ಹತ್ತುವಾಗ ಅವಳಿಗೇ ಅಂಟಿಕೊಂಡಿರುತ್ತಿದ್ದ. ಉದ್ಯಾನದಲ್ಲಿದ್ದಾಗ ಸಮಯ ಸಾಧಿಸಿ ಅವಳಿಗೊಂದು ಪುಟ್ಟ ಪ್ಯಾಕೆಟ್ ಕೊಟ್ಟ. "ಶ್ರೀಗಂಧದೆಣ್ಣೆ" ಎಂದ. "ಪ್ರಿಯತಮ ನೀಡುವ ಸೆಂಟ್" ಎಂದು ಮಾತು ಸೇರಿಸಿದ.
  "ಸ್ವಲ್ಪ ಹೊತ್ತು ಒಟ್ಟಿಗಿರೋಣವಾ ?" ಎಂದು ಕೇಳಿದ,
  "ಎಲ್ಲಿ?"
 "ತಲೆನೋವು_ಶಾಸಕರಭವನಕ್ಕೆ ಹೋಗ್ತೇನೆ, అನ್ನಿ, అల్లి ವೈದ್ಯರಿದ್ದಾರೆ.

ಅಲ್ಲಿ_"

 ತಂಡದ ಮುಖ್ಯಸ್ಥ_ಶಿವ ಪಾತ್ರಧಾರಿ_ಹದ್ದಾಗಿ ಹತ್ತಿರ ಹಾರಾಡಿದ.
 "ಮಿಸ್ಟರ್ ರಾಮಾರಾಜು, ಮುಖ್ಯಮಂತ್ರಿ ನಿವಾಸದಲ್ಲಿ ಭೋಜನ      ಅಲ್ಲವಾ?"
 "ಇನ್ನೂ ಟೈಮಿದೆ." 
 "ಗೊತ್ತು. ಕಲಾ, ಮೈಥಿಲಿಗೆ ತಲೆನೋವಂತೆ. ಅವಳ ಜತೆ ಇರು."
 "ಹ್ಞ ಹ್ಞ." 
 ಅವನು ಬಸ್ಸಿನತ್ತ ತೆರಳಿದೊಡನೆ ಕಲಾ ರಾಮರಾಜುಗೆ ಅಂದಳು:
 "ರಾಜು. ಮುಂಬಯಿಗೆ ಬನ್ನಿ, ಅಲ್ಲಿ ಭೇಟಿಯಾಗೋಣ. ಬೈ-ಬೈ." 
 "ಬೈ-ಬೈ," (ಕ್ಷೀಣ ಸ್ವರ.) ಆ ಹಣೆಗಣ್ಣನ ಟೊಂಕ ಮುರಿಯಬೇಕು ಎನ್ನುವ ಸಿಟ್ಟು.
 ....ಗೃಹ ಕಾರ್ಯಾಲಯದಲ್ಲಿ ಸಂಜೆಯ ವರೆಗೆ ಪರಶುರಾಮನಿಗೆ ಬಿಡುವಿಲ್ಲದ ಚಟುವಟಿಕೆ. ಮುಖ್ಯ ಕಾರ್ಯದರ್ಶಿ ಚೌಗುಲೆ ಬಂದು ಹೋದರು, ಕೆಲ ಮಂತ್ರಿಗಳು ತಮ್ಮ ಇಲಾಖೆಯಲ್ಲಿ ಅಧಿಕಾರಿಗಳ ದಿಢೀರ್ ವರ್ಗಾವಣೆಗೆ ಆಗ್ರಹಿಸಿದ್ದರು. ವಿದೇಶ ಯಾತ್ರೆಯಲ್ಲಿದ್ದ ರಂಗಧಾಮ್‍ಗೆ ಫೋನ್‍ಮಾಡಿ "ಪತ್ರಗಳಲ್ಲಿ ಏನೂ ಬರೀಬೇಡಿ”