ಪುಟ:ಮಿಂಚು.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

170 ಮಿಂಚು ಎಂದು ಎಚ್ಚರಿಸಬೇಕಾಗಿತ್ತು. "ವರ್ಗಾವಣೆ ವಿಷಯ ನಿಮಗೇ ಬಿಟ್ಟಿದ್ದೀನಿ. ಸರಿ ತೋರಿದರೆ ಯೆಸ್. ತಪ್ಪೆಂದಾದರೆ ನೋ. ರಂಗಧಾಮ್ ಎಲ್ಲಿದಾರೇಂತ ವಿಚಾರಿಸಿ ನೀವೇ ಒಂದು ಸಲ ಫೋನ್ ಮಾಡಿಬಿಡಿ."

  “ಮುಖ್ಯಮಂತ್ರಿಯವರು ಇವತು ಚೇಂಬರಿಗೆ ಬರೋದಿಲ್ಲ.” ಎಂದು ಎಷ್ಟು ಖಡಾಖಂಡಿತವಾಗಿ ಹೇಳಿದರೂ ಕೆಲ ಕುಳುಗಳು ಬಾಗಿಲು ಕಾಯಲು ಬಂದರು.ಅವರು ಪೋಲಿಸರಿಂದ "ಗಾಡಿಬಿಡಿ" ಅನ್ನಿಸಿಕೊಳ್ಳಬೇಕಾಯಿತು. 
  ಫೋನ್ ಕರೆಗಳಿಗೆ ವಿರಾಮವಿರಲಿಲ್ಲ. ಒಂದು ಕರೆ ಪರಶುರಾಮನನ್ನು ಸ್ವಲ್ಪ ಗೊಂದಲಕ್ಕೀಡುಮಾಡಿತು.
  ಈತ "ಮುಖ್ಯಮಂತ್ರಿ ಗೃಹಕಾರ್ಯಲಯ" ಎ೦ದೊಡನೆ, “ಯಾರು ಪರಶು ರಾಮ್‍ನಾ?" ಎಂದಿತು ಧ್ವని ಆಕಡೆಯಿ೦ದ.
  "ಯಾರು ನೀವು?"
  "ಪ್ರತಿ ಪಕ್ಷದ ಮುಖಂಡ. ಆ ಗುಜರಾಥಿ ಹೆಂಗಸು ಹೋದ್ಲಾ ?"
  "ಅವರು ಯಾರೂಂತ ಗೊತ್ತಾಗ್ಲಿಲ್ವೆ?"
  "ಗೊತ್ತಾಗುತ್ತೆ. ಗೊತ್ತಾಗುತ್ತೆ.”
  ಮಾತಾಜಿಯ ಸನ್ನಿಧಿಗೆ ತೆರಳಿ, ಸಂಭಾಷಣೆಯನ್ನು ಅವಳ ಕಿವಿಯಲ್ಲಿ ಉಸುರಿದ. ಸೌದಾಮಿನಿಯ ಮುಖ ಕಪ್ಪಿಟ್ಟಿತು. ಆಪ್ತ ಕಾರ್ಯದರ್ಶಿಯ ಗಮನಕ್ಕೆ ಬರಬಾರದೆ೦ದು, ತನ್ನ ತುಟಿಗಳ ಮೇಲೆ ನಗೆ ಅರಳಿಸಿದಳು.
  ಆಲ್ಬಮುಗಳ ರಾಶಿಯೇ ಅಲ್ಲಿತ್ತು. ಸೌದಾಮಿನಿಯ ವೈಭವದ ಚಿತ್ರರಾಶಿ.  "ಇದು ಯಾರು? ಇದು ಯಾರು ?" ಎಂದು ಕೇಳಿ ಮೈದುಲಾ ಬೇಸತ್ತಳು. ಉತ್ತರ ಕೊಟ್ಟು ಮಾತಾಜಿ ಬಳಲಿದಳು.
  ಬಯಲಲ್ಲಿ ಬೆಳಗ್ಗೆಯೇ ಷಾಮಿಯಾನ ಎದ್ದಿತ್ತು. ಟೇಬ್‍ಲ್ ಮೇಜುಗಳನ್ನು ಹೊತ್ತು ಲಾರಿ ಬಂತು. ಸಿದ್ಧ ಅಡುಗೆಯ ವ್ಯಾನ್ ಹಾಜರಿ ಹಾಕಿತು. ಕಲಾ ತಂಡವನ್ನು ಒಯ್ದಿದ್ದ ಕೋಚ್ ಕೂಡ ಬಂತು.
 "ಎಲ್ಲ ಚೆನ್ನಾಗಿ ಆಯ್ತು" ಎಂದು ರಾಮರಾಜು ಬಂದು ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ.
 "ನಿಮ್ಮದು ಸುಂದರ ನಗರ" ಎಂದಳು ಕರುಣಾಬೆನ್,
 "ಚಟುವಟಿಕೆ ಸಾಲದು. ಪಿಂಚಣಿದಾರರ ಸ್ವರ್ಗ_ಅಂತ ಮೊನ್ನೆ ಮೊನ್ನೆ ವರೆಗೂ ಈ ಊರನ್ನೂ ಕರೀತಿದ್ರು, ನಮಗೆ ಹೆಚ್ಚು ಹೆಚ್ಚಾಗಿ ಬೇಕಾದ್ದು ಕಲೆ ಮತ್ತು ಕೈಗಾರಿಕೋದ್ಯಮ," ಎಂದಳು ಸೌದಾಮಿನಿ.
 ಆತ್ಮೀಯ ಭೋಜನಕ್ಕೆ ಹಿಮ್ಮೇಳವಾಯಿತು ಮೀರಾಭಜನ್.
 "ಎಲಾ!" ಎಂದು ಉದ್ಗರಿಸಿದಳು ಮೈದುಲಾ.
 ಮಾತಾಜಿ ಅಂದಲು :