ಪುಟ:ಮಿಂಚು.pdf/೧೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


176 ಮಿಂಚು

   “ಪ್ರಜಾಪಕ್ಷ ರಾಷ್ಟ್ರಪತಿಗೆ ಮಾತಾಜಿ ಮೇಲಿನ ಆರೋಪಗಳ ಪಟ್ಟಿ ಸಲ್ಲಿಸ್ತ     ದಂತೆ.”
   “ಎಷ್ಟು ಆರೋಪಗಳು ?” 
   “ಅದು ತಿಳೀದು."
   “ನೂರು ಇಲ್ಲವಾದ್ದರಿಂದ ನೂರ ಒಂದನೇದು ಊಹೂಂ.ಆದ್ದರಿಂದ ಶಿಶು 

ಪಾಲವಧೆ ಆಗೋದಿಲ್ಲ !"

   “ಜ್ಯೋತಿಷಿ ವಿಷ್ಣುಮೂರ್ತಿ ಮನೆ ಮುಂದೆ ಈಗ ರಾಜಕಾರಣಿಗಳ ಕ್ಕೂ.    ಶಾಸಕರು, ಶಾಸಕರಲ್ಲದವರು, ಎಲ್ಲ ಬಗೆಯವರು.” 
   “ಅವರದೊಂದು ಪಟ್ಟಿ ಬೇಕು.”
   “ಆ ಕೆಲಸಕ್ಕೋಸ್ಕರ ನಮ್ಮವರನ್ನ ಬಿಡ್ತೀನಿ.”
   “ಇವತ್ತಿಗೆ ಇಷ್ಟು  ಸಾಲದಾ? ನಾಳೆ ಮತ್ತೆ ಬನ್ನಿ. ಪ್ರತಿ ದಿನ ಬೆಳಗ್ಗೆ.

ನಮಸ್ಕಾರ."

   ಗುಪ್ತಚಾರದಳದ ಮುಖ್ಯಸ್ಥ ಹೋದೊಡನೆ, ಇಂಟರ್ ಕಾಮ್ ನಲ್ಲಿ ಸೌದಾ

ಮಿನಿ ಪರಶುರಾಮನನ್ನು ಕರೆದಳು.

   “ಸಾರಿಡಾನ್ ಮತ್ತು ನೀರು,”
   ಆತ ತಂದೊಡನೆ ನೀರಿನ ನೆರವಿನಿಂದ ಮಾತ್ರೆಯನ್ನು ಒಳಕ್ಕೆ ತಳ್ಳಿದಳು.
   “ಡಾಕ್ಟರನ್ನು ಕರೀಲಾ ?”
   “ನನಗೇನೂ ಆಗಿಲ್ಲ.ಆ ಮುಖ್ಯಸ್ಥ ಬೇಕೂಫ ಯಾವುದೋ ಜಾಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಇಷ್ಟು ಹೊತ್ತು ಕಥೆ  ಹೇಳಿ, 'ನನ್ನನ್ನು ಕಾಪಾಡಿ' ಅಂತ ಗೋಗರೆದ.”


        *        *        * 


   ಚಿತ್ರಾವತಿಯಿಂದ ಫೋನ್.
   “ಪರಶುರಾಮ್, ಸಿ ಎಂ ಲೈನ್ ಮೇಲೆ ಸಿಗ್ತಾರಾ ?”
   “ತಾಳಿ, ನೋಡ್ತೇನೆ.”
   ಸೌದಾಮಿನಿ ರಿಸೀವರ್ ಎತ್ತಿಕೊಂಡಳು:
   “ನಮಸ್ತೆ ಮಾತಾಜಿ,  ಹೆರಿಗೆ ಆಯ್ತು, ಗಂಡು ಮಗು,"
   “ಪಟ್ಟಕ್ಕೆ ವಾರಸುದಾರ ಬಂದ ಹಾಗಾಯ್ತು.  ಹೆಸರು ಏನಿಡಬೇಕೂಂತ ಮಾಡಿದೀರಾ ?"
   "ಆಶೀರ್ವಾದ."
   "ಅದು ಎದ್ದೇ ಇದೆ.'