ಪುಟ:ಮಿಂಚು.pdf/೧೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಮಿಂಚು 177

  “ಅಲ್ಲ, ಹೆಸರು ಆಶೀರ್ವಾದ ಅಂತ.”
  “ಗುಡ್,  ಸಪ್ತರ್ಷಿ ಮಂಡಲಕ್ಕೆ ಇಲ್ಲಿ ಶಾಪ ಇಡ್ತಿದ್ದಾರೆ. ನೀವು ತೊಟ್ಟಿಲು

ತೂಗ್ತಾ ಅಲ್ಲಿ ಇರ್ಬೇಡಿ. ಇವತ್ತೇ ಹೊರಟು ಬನ್ನಿ."

  ಸಂಜೆ ಸೌದಾಮಿನಿ ಧರ್ಮಮಠಕ್ಕೆ ಹೋಗಿ ಪ್ರವಚನ ನಿರತರಾಗಿದ್ದ ಸ್ವಾಮಿಾಜಿ

ಗಾಗಿ ಕಾದು ಕುಳಿತಳು. ಮುಖ್ಯಮಂತ್ರಿಯ ಕಾರು ಬಂದುದನ್ನು ದೂರದಿಂದಲೇ ಕಂಡಿದ್ದ ಸ್ವಾಮಿಜಿ ಪ್ರವಚನ ಮೊಟಕುಗೊಳಿಸಿ ಮಠದತ್ತ ಹೆಜ್ಜೆ ಇಟ್ಟರು.

  ಮಾನಸಿಕ ಪರಿತಾಪ ಮುಖದ ಮೇಲೆ ಮುದ್ರೆ ಮೂಡಿಸಿತು, 
  ಪಕ್ಷದೊಳಗೆ ಬಂಡಾಯದ ಪ್ರಯತ್ನಗಳಾಗುತ್ತಿವೆ ಎಂದು ಸೌದಾಮಿನಿ ಅಳಲು

ತೋಡಿಕೊಂಡಳು,

  “ವೃಥಾ ಚಿಂತಿಸಬೇಡಿ, ನಾನು ಇವತ್ತೇ ವೈರಿನಾಶಕ್ಕಾಗಿ  ಹೋಮಮಾಡ್ತೇವೆ. 

ನೀವು ರಾತ್ರಿ ಬಾಬಾಜಿಯನ್ನು ಸ್ಮರಿಸಿ ಒಂದು ಗಂಟೆ ಧ್ಯಾನ ನಿರತರಾಗಿ,"

  “ಧನಂಜಯರ ಮೂಲಕ ಬೆಳಗಿನ ಜಾವ ಒಂದೆರಡು ಸೂಟ್ಕೇಸ್  ಕಳಿಸ್ತೆನೆ,"
  “ಆಗಲಿ, ಜೋಪಾನ ಮಾಡ್ತೇವೆ.”
  “ಬಾಬಾಜಿಗೆ ಫೋನ್ ಮಾಡಿ, ಸ್ವಲ್ಪ ನೋಡ್ಕೊಳ್ಳೋದಕ್ಕೆ ನಕುಲದೇವ್-ಜಿಗೆ

ತಿಳಿಸೋದಕ್ಕೆ ಹೇಳ್ತೀರಾ ?”

  ಹೇಳ್ತೀವಿ."
  “ಬಾಬಾಜಿಯ ದರ್ಶನಕ್ಕೆ ತಾವು ಯಾವಾಗ ಹೋಗ್ತೀರಾ ?” 
  “ಮುಂದಿನ ತಿಂಗಳು ಹೋಗೋಣಾಂತ ಇದೀವಿ," 
  “ಆಗ, ಬಾಬಾಜಿಗೆ ಮುಟ್ಟಿಸೋದಕ್ಕೆ ಒಂದು ದೊಡ್ಡ ಕಾಣಿಕೆ ಕೊಡ್ತೇನೆ," 
  "ಆಗಲಿ, ದಂತೇಶ್ವರಿಯ ಅನುಗ್ರಹ ನಿಮ್ಮ ಮೇಲಿರಲಿ,"
  ...ಮಾತಾಜಿಯ ಆದೇಶವನ್ನು ಧನಂಜಯ ಪಾಲಿಸಿದ.    ಸ್ವಾಮೀಜಿ

ಹೋಮದ ಬಳಿಕ ನಿದ್ದೆ ಹೋಗಿದ್ದರೂ ಮತ್ತೆ ಉಷಃಕಾಲದಲ್ಲೆ ಎದ್ದಿದ್ದರು; ಪ್ರಸಾದವನ್ನಿತ್ತು, “ಇದನ್ನು ಮುಖ್ಯಮಂತ್ರಿಗೆ ತಲಪಿಸಿ" ಎ೦ದರು,

  ಧನಂಜಯ ಸೌದಾಮಿನಿಯ ನಿವಾಸಕ್ಕೆ ಬಂದಾಗ ಆಕೆ ಯೋಗಾವಸ್ಥೆ ಯಲ್ಲಿ 

ದ್ದಳು, ಪರಶುರಾಮ ಬಂದು ಧನಂಜಯನ ಜತೆಯಲ್ಲಿ ಕುಳಿತ, ಮಾತಾಜಿ ಯೋಗಾಸನಗಳನ್ನು ಹೇಗೆ ಮಾಡ್ತಾರ ? ಪರಶುರಾಮನನ್ನು ಕೇಳಿದ :

  "ನೋಡಬಹುದೊ ?"
  “ಯೋಗಾಸನ ಮುಗಿಸಿ ಮೇಲಂಗಿ ಹಾಕಿಕೊಂಡು ಬರ್ತಾರೆ,  ಆಗ ನೋಡಿ,"
  ಆಗ ನೋಡಿದ, ಮಠದಿಂದ ತಂದ ಪ್ರಸಾದವನ್ನಿತ್ತ. ಅದನ್ನು ಸೌದಾಮಿನಿ ಭಕ್ತಿಯಿಂದ ಸ್ವೀಕರಿಸಿದಳು,
  “ಹೊತ್ತಲ್ಲದ ಹೊತ್ತು ನಿಮಗೆ ತೊಂದರೆ ಕೊಟ್ಟೆ."
  12