ಪುಟ:ಮಿಂಚು.pdf/೧೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


173 ಮಿಂಚು

  “ಎಲ್ಲಿಯ ತೊಂದರೆ, ಮಾತಾಜಿ ? ಇದು ಸೇವೆ, ಕರ್ತವ್ಯ,”

ಪರಶುರಾಮನೆಂದ ;

  “ರಾತ್ರೆ ಹೇಳಿದ್ರು,   ಇವರದೊಂದು ಸಣ್ಣ ಸಮಸ್ಯೆ ಇದೆ.” 
  "ಏನು?" 
  “ಈ ವರ್ಷ ಆದ್ಮೇಲೆ ರೇಷ್ಮೆ ಗುತ್ತಿಗೆ ಮುಂದುವರಿಸೋದಿಲ್ಲಾಂತ ಇಲಾಖೆ 

ಮಂತ್ರಿ ಹೇಳಿದರಂತೆ ನಿಗಮದ ಅಧ್ಯಕ್ಷರ ಜತೆ.”

  “ಅಷ್ಟೆ ತಾನೆ?  ಆರ್ಡರು  ತನ್ನಿ, ಅದನ್ನು ಮೂರು ವರ್ಷಗಳ ಗುತ್ತಿಗೆ 

ಮಾಡೀನಿ. ಮುಖ್ಯ ಕಾರ್ಯದರ್ಶಿ ಎಂಡೋರ್ಸ್ ಮಾಡಿ ಸಹಿ ಹಾಕ್ತಾರೆ."

  ಇನ್ನೂ ಸ್ವಲ್ಪ ಹೊತ್ತು ಅಲ್ಲಿರಲು ಧನಂಜಯ ಸಿದ್ಧನಿದ್ದ,  ಆದರೆ ಮುಖ್ಯ 

ಮಂತ್ರಿ ಸ್ನಾನಕ್ಕೆ ಹೋದಳು.ತನ್ನ ಮನೆಯ ಕಡೆಗೆಸ್ವಂತದ ಫಿಯೆಟನ್ನು ಸಾಹುಕಾರ ಓಡಿಸಿದ. ಸೂಟ್ಕೇಸ್ಗಳಲ್ಲಿ ಎಷ್ಟು ಇದ್ದಿರಬಹುದು ? 'ಆ ವಿಷಯ ನಿನಗೆ ಯಾಕೊ? ನಿನ್ನದನ್ನು ನೋಡ್ಕೊಂಡು ತೆಪ್ಪಗಿರು,' ಎಂದು ತನ್ನನ್ನೇ ಗದರಿಸಿ, ಸುಮ್ಮನಾದ.

  ಸ್ವಲ್ಪ ಹೊತ್ತಿನಲ್ಲೆ ಗುಪ್ತಚಾರ  ದಳದ ಮುಖ್ಯಸ್ಥ  ಬಂದ,  ಯಾಕೋ

ಬಂದಿಲ್ಲದಲ್ಲ_ಫೋನ್ ಮಾಡೋದು ವಾಸಿ ಎಂದು ಸೌದಾಮಿನಿ ಯೋಚಿಸು ತ್ತಿದ್ದಾಗಲೆ,

  “ನಿನ್ನೆ ನೀವು ಬರಲಿಲ್ಲ." 
  “ಮೊನ್ನೆ ರಾತ್ರಿ ಇಡೀ ಡ್ಯೂಟಿ ಮೇಲಿದ್ದೆ.”
  “ಏಳೋದು ತಡವಾಯ್ತು ಅನ್ನಿ."
  “ಹ , ಅದಕ್ಕಿಂತಲೂ ಮುಖ್ಯ ಸಹಾಯಕರ ವರದಿಗಳು ಬಂದಿರಲಿಲ್ಲ. ನಿನ್ನೆ 

ಎಲ್ಲಾ ಅದನ್ನು ಪರಿಶೀಲಿಸಿದೆ, ಬೆಳಗ್ಗೆ ಬರ ಹೇಳಿದ್ದಿರಿ. ಹೀಗಾಗಿ,"

  ಕಾಫ಼ಿ ಬಂತು,
  “ತಗೊಳ್ಳಿ, ನನ್ನದೂ ಆಗಿಲ್ಲ."
  ಅಧಿಕಾರಿ ತನ್ನ ಕಪ್ಪನ್ನು ಬೇಗನೆ ಬರಿದುಗೊಳಿಸಿದೆ.  ಸೌದಾಮಿನಿ  ತಾನು 

ನಿಧಾನವಾಗಿ ಹೀರುತ್ತ ಮುಖ್ಯಸ್ಥನ ಮಾತಿಗೆ ಕಿವಿಗೊಟ್ಟಳು.

  “ಪ್ರಜಾಪಕ್ಷದ ಮನವಿ ರಾಷ್ಟ್ರಪತಿಗೆ ಹೋಗಿದೆ. ಕಾನೂನು ಶಿಸ್ತು  ಮುರಿದು

ಬಿದ್ದಿದೆಯಂತೆ.”

  “ಎಲ್ಲಿ? ಗೋಳಿಬಾರಾಯ್ತು ? ನಿಮಗೆ ಗೊತ್ತಿರಬೇಕಲ್ಲ ?” 
  “ಸುಮ್ಮನೆ ಹೇಳೋದಕ್ಕೇನು?"
  “ಇವರು ಹೇಳಿದ ಮಾತ್ರಕ್ಕೆ  ಆಗಿ  ಹೋಯ್ತು ? ರಾಜ್ಯಪಾಲರ  ವರದಿ

ಆಧಾರದ ಮೇಲಲ್ಲವೆ ರಾಜ್ಯದ ವಿರುದ್ಧ ಕ್ರಮ ತಗೊಳ್ಳೋದು ?"