ಪುಟ:ಮಿಂಚು.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 179

   “ಆಖೈರು ತೀರ್ಮಾನ ಕೇಂದ್ರ ಮಂತ್ರಿಮಂಡಲದ್ದು, ರಾಷ್ಟ್ರಪಕ್ಷದ ಪ್ರಮುಖ

ெರದ್ದು."

     “ಈ ಮೂರ್ಖರಿಗೆ ಅದು ಗೊತ್ತಿಲ್ಲ ಅಂತೀರ?"
     “ಗೊತ್ತಿದ್ದರೇನು? ಪಟಾಕಿ ಹಾರಿಸೋದರ ಮೇಲೆ ಪ್ರತಿಬಂಧಕಾಜ್ಞೆ
ಇಲ್ವಲ್ಲ!”
    “ವಿಶ್ವಂಭರರಾಗಲೀ ಅವರ ಮಿತ್ರರಾಗಲೀ ನಾಯಕ ಪಾರ್ಟಿಯ ಮನವಿಗೆ 

ಬೆಲೆ ಕೊಟ್ಟಿಲ್ಲ, ಅವರದು ಬೇರೆ ವಿಧಾನ, ಬಹಳ ಯೋಚಿಸಿ ದಾಳ ಸರಿಸ್ತಾರೆ,

'ಮುಖ್ಯಮಂತ್ರಿದು ಟೆನ್ನಿಸ್, ನಮ್ಮದು ಚೆಸ್' ಅನ್ತಾರಂತೆ, ನಿಮ್ಮ ಮೇಲೆ ವಿಶ್ವಾಸ 

ಇಲ್ಲಂತ ರುಜುವಾತು ಮಾಡ್ತಾರಂತೆ."

      “ವಿಶ್ವಂಭರನ ಮುಂಡ ಮೋಚ್ತು, ಅವನು ವಕೀಲಿ ಓದಿದಾನೇಂತ ಕೇಳಿದೀನಿ.”
      “ಜತೆಗೆ ರಾಜಕೀಯ ವಿಜ್ಞಾನದಲ್ಲಿ ಎಂ.ಎ.ಪದವೀಧರ,”
      “ಬಹಳ ಅಂದರೆ ಕಾನೂನು ಮತ್ತು ಶಾಸಕಾಂಗ ವ್ಯವಹಾರಗಳ ಮಂತ್ರಿ ಸ್ಥಾನ 

ಕೊಡಬಹುದು." . -

     “ಮುಖ್ಯಮಂತ್ರಿ ಸಂಪುಟ ಬದಲಾವಣೆ ಬಗ್ಗೆ ಯೋಚಿಸ್ತಿದಾರೆ ಅಂತ ವದಂತಿ

ಹಬ್ಬಿಸಿದರೆ ಈ ಬಂಡಾಯದ ಕಿತಾಪತಿ ಠುಸ್ಸಾಗಬಹುದು.”

    “ಒಳ್ಳೆ ಸಲಹೆ. ನಿಮಗೆ ಶಾಸಕ ಮಿತ್ರರು ಇದ್ದೇ ಇರ್ತಾರೆ. ಅವರ ಮೂಲಕ
ಈ ಬುರುಡೆ ಉರುಲಳೀಸಿ," 
  “ಆಗಲಿ, ಮಾತಾಜಿ,"
          *            *                 *
    ರಾಜ್ಯಪಾಲರು ತಮ್ಮ ಭವನದ ಉದ್ಯಾನದಲ್ಲಿ ವಾಯುಸೇವನೆ ನಡೆಸುತ್ತಿದ್ದ
ಸಂಜೆ ಹೊತ್ತು, ಕತ್ತಲಿನ ಛಾಯೆ ಹಬ್ಬಿ ದೀಪಗಳು ಬೆಳಗಿದಂತೆ ಸೌದಾಮಿನಿಯ
ಕಾರು ಒಳಗೆ ಬಂತು. ಇಳಿದ ಸೌದಾಮಿನಿಯನ್ನು ನೋಡಿ ರಾಜ್ಯಪಾಲರು ಆತ್ಮೀಯ
ನಗೆ ಬೀರಿದರು. ಜತೆಯಾಗಿ ಇಬ್ಬರೂ ನೂರು ಹೆಜ್ಜೆ ನಡೆದರು :
   ಒಳಗಿನಿಂದ ರಾಜಭವನದ ಚಾಕರ ಬoದು ರಾಜ್ಯಪಾಲರಿಗೆ ನಿವೇದಿಸಿದ :
    "ಮೆಮ್ಸಾಬ್ ತಮ್ಮನ್ನು ಕರೀತಿದ್ದಾರೆ. ಈ ಕ್ಷಣವೆ ಬರಬೇಕಂತೆ,”
    “ಚೀಫ್ ಮಿನಿಸ್ಟರ್ ಬಂದಿದ್ದಾರೇಂತ ಹೇಳು. (ಸೌದಾಮಿನಿಯ ಕಡೆ ತಿರುಗಿ)
ನೋಡಿದಿರಾ ನಿಮ್ಮ ರಾಜ್ಯಪಾಲರಿಗೆ ಇರೋ ಸ್ವಾತಂತ್ರ್ಯ  ?  "
    “ಅರ್ಥಮಡಿಕೊಂಡೆ," ಎಂದಳು ಸೌದಾಮಿನಿ.
    ಇನ್ನೂ ಹತ್ತು ಹೆಜ್ಜೆ ನಡೆಯುವುದರೊಳಗೆ ಚಾಕರ ಮತ್ತೆ ಬಂದ.
   “ಈ ಹೊತ್ತಿನಲ್ಲಿ ರಾಜಕಾರ್ಯ ಬೇಡ-ಚೀಫ್ ಮಿನಿಸ್ಟರು ನಾಳೆ ಹಗಲು

ಬರಲಿ--ಅಂದ್ರು, ಮೆಮ್ಸಾಬ್,"