ಪುಟ:ಮಿಂಚು.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

180 ಮಿಂಚು “ಸರಿಯಪ್ಪ, ನೀವೇನೂ ಚಿಂತಿಸ್ಬೇಡಿ. ನಾಳೆ ಮಾತಾಡೋಣ," ಎ೦ದು

ಹೇಳಿ ರಾಜ್ಯಪಾಲರು ಒಳಕ್ಕೆ ನಡೆದೇ ಬಿಟ್ಟರು:
               *             *                *
     ತನ್ನ ನಿವಾಸದಲ್ಲಿ ಆ ರಾತ್ರೆ ಬೇಸರದ ಊಟ ಮುಗಿಸಿ, “ಫೋನಿನ ತಂಟೆಗೆ
ಹೋಗ್ವೇಡ" ಎಂದು ಪರಶುರಾಮನಿಗೆ ಸೌದಾಮಿನಿ ನಿರ್ದೆಶವೀಯುತ್ತಿದ್ದಂತೆ,
ಒಂದು ಅಂಬಾಸಡ್ ಕಾರು ಬಂತು. ಇಳಿದು ಧಡಧಡನೆ ಮೆಟ್ಟಲೇರಿದ ವ್ಯಕ್ತಿಯನ್ನು
ಆಂಗರಕ್ಷಕರಾದ ರಮ್ ಧನ್-ಬೋಲಾನಾಥ್ ತಡೆದರು. ಬಂದವರು ನಾಯಕ್.
ಪರಶುರಾಮ ಮುಖ್ಯಮಂತ್ರಿಯ ಕಡೆ ನೋಡಿದ. “ಬರಲಿ" ಎಂದಳು ಸೌದಾಮಿನಿ,
     ಇಲ್ಲಿಂದಲೇ ಹೊರದಬ್ಬಲೆ ? ಒಳಗೆ ಕರೆದು ಮಾತನಾಡಿಸಲೆ? ನಿಮಿಷದ 

ನಿರ್ಧಾರ.

      "ಒಳಗೆ ಬನ್ನಿ ಪ್ರತಿಪಕ್ಷದ ನಾಯಕರೆ, ಆರೋಪಗಳ ಪಟ್ಟಿ ಗೋಡೆಗೆ ಅಂಟಿ

ಸೋಣ ಅಂತ ಬಂದಿರಾ ?”

     "ಪುಟ್ಬಾ!" -
    “ಏನಂದಿರಿ? ಕುಡಿದ ಅಮಲಿನಲ್ಲಿದೀರಾ ?”
    “ಆರೋಪದ ಪಟ್ಟಿ  ವಾಪಸು ತಗೋತೀನಿ, ಒಂದೇ ಶರತ, ಒಳಗಿನ
ಕೊಠಡಿಗೆ ನಡಿ.'
       “ನಾಲಿಗೆ ಬಿಗಿ ಹಿಡೀರಿ.”
       ಉದ್ವೇಗದಿಂದ ವಕ್ಷಸ್ಥಲ ಏರಿಳಿಯುತ್ತಿತ್ತು. ಒಮ್ಮೆಲೆ ನಾಯಕ ಅವಳನ್ನು

ಹಿಡಿದ.

  " ಬಾರೇ!"
    ಮುಖ್ಯಮಂತ್ರಿಯ ಕರೆ ಕೇಳಿಸಿತು :
   “ರಾಮಧನ್, ಬೋಲಾನಾಥ್ !” 
    ಅವರು ಮಾತಾಜಿಯ ಕಡೆಗೆ ಧಾವಿಸಿದರು. (ನಾಯಕರಾಗಲೇ ಸೌದಾಮಿನಿಯ
ತೋಳನ್ನು ಬಿಟ್ಟಿದ್ದರು.)

“ಇವರನ್ನು ಗೌರವದಿಂದ ಅವರ ಕಾರಿನಲ್ಲಿ ಕೂಡ್ರಿಸಿ." “ಹ್ಲ. ಮಾತಾಜಿ, ಬನ್ರಿ ಸಾಹೇಬರೇ,” ಎಂದರು ಅಂಗರಕ್ಷಕರು.