ಪುಟ:ಮಿಂಚು.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

6❍

ಐ.ಜಿ.ಪಿ, ಹೇಳಿದರು 
“ನಿಮ್ಮ ಸಲಹೆ ಕೇಳೋಣಾಂತ ಕರೆದೆ, ದೊರೆ.”
“ನಾನಾಗಿಯೇ, ಈ ಮೊದಲೇ, ಬರಬೇಕಾಗಿತ್ತು,” ಎಂದ ಗುಪ್ತ ಚಾರ ದಳದ
ಮುಖ್ಯಸ್ಥ.
 “ಪೋಲೀಸರು ನೊಣ ಹೊಡೀತಿದ್ದಾರೆ, ನಿಮ್ಮವರಿಗೆ ಮಾತ್ರ ತುರಿಸೋಕೆ

ಪುರಸೊತ್ತಿಲ್ಲ."

  “ಒಂದು ರೀತಿಯಿಂದ ನೀವು ಹೇಳೋದು ಸರಿ. ಈಗ ನಾಟಕದ ಹೊಸ ಅಂಕ
ಶುರುವಾಗಿದೆ." 
 “ನನ್ನ ಆವಸ್ಥೆ ಕೇಳಿ, ಸಿ.ಎಂ. ಎಂಟು ಜನ ಭಿನ್ನಮತೀಯರ ಹೆಸರು ಹೇಳಿ
ದ್ವಾರೆ, ಹಳೇ ದಾಖಲೆಗಳನ್ನೆಲ್ಲ ಶೋಧಿಸಿ ಅವರ ಮೇಲೆ ಕೇಸ್ ದಾಖಲ್ಮಾಡಿ
ಅವರೆಲ್ಲ ಕಂಬಿ ಎಣಿಸೋ ಹಾಗೆ ಮಾಡ್ಬೇಕಂತೆ. ಇದರ ಮಧ್ಯೆ ವಿಶ್ವಂಭರ-"
 “ಗೊತ್ತು. ರಾಜಕೀಯದಲ್ಲಿ ಪೋಲೀಸರು ತಟಸ್ಥ ಪಾತ್ರ ವಹಿಸಬೇಕೂಂತ ಸೂಕ್ಷ್ಮ
ಎಚ್ಚರಿಕೆ ನೀಡಿದ್ದಾನೆ." 
    “ನಮಗಂತೂ ತಂತಿ ಕಸರತ್ತೆ ಯಾವಾಗಲೂ !”
    “ದಾಖಲೆಗಳನ್ನ ನೋಡಿಸಿದಿರಾ ?"  
    “ವಿದ್ಯಾರ್ಥಿ ದೆಶೆಯಲ್ಲಿ ಟೈಂ ಪೀಸು ಲಪಟಾಯಿಸಿದ್ದು, ರಾತ್ರಿ, ಕಬ್ಬನ್ ಪಾರ್ಕಿ
ನಲ್ಲಿ ಕಾರು ನಿಲ್ಲಿಸಿ ತಲೆ ಹಿಡುಕನ ಜತೆ ಮಾತನಾಡಿದ್ದು , ಕೆಲಸದ ಹುಡುಗಿ ಕಳವು ಮಾಡಿದಳೂಂತ ಸುಳ್ಳು ಕಂಪ್ಲೇಂಟು ಕೊಟ್ಟದ್ದು, ಓವರ್ ಸ್ಪೀಡಿಂಗ್, ಶಾಸಕರ ಭವನಕ್ಕೆ 

ಮ್ಹలు ತರಿಸಿದ್ದು (ಇಬ್ಬರು). ಶಾಲೆ ನಡೆಸುತ್ತಿರೋ ಒಬ್ಬನಿಂದ ಸ್ಟಾಫಿಗೆ ಅರ್ಧ ಸಂಬಳ ಪಾವತಿ. ಒಬ್ಬಳು ಟೀಚರನ್ನು ಶಾಲೆಯ ಅಧ್ಯಕ್ಷ ತನ್ನ ಮನೆಗೆ

ಕರೆಸಿದ್ದು."
    “ನನ್ನ ಡಯರಿಗಳಲ್ಲಿ ಇನ್ನೂ ಹೆಚ್ಚು ಸಾರಸ್ಯದ ಮಾಹಿತಿಗಳು ಸಿಗ್ತವೆ. ಕಳವು
ಕೊಲೆ ಆರೋಪ !"
   “ನಿಮ್ಮದು ಗೋಪ್ಯ, ದಾಖಲೆ ಅಂತ ಪರಿಗಣಿಸೋದಕ್ಕಾಗೋದಿಲ್ಲ, What
a pity !" *
   “ಅಲ್ವೆ, ಈ ಶಾಸಕರೆಲ್ಲ ಮುಖ್ಯಮಂತ್ರಿ ಬೆಂಬಲಿಗರು !" 
“ನಿನ್ನೆ ಸಂಜೆಗತ್ತಲಲ್ಲಿ ಮಿಸೆಸ್ ರಾಜ್ಯಪಾಲರಿಗೂ ಮುಖ್ಯಮಂತ್ರಿಗೂ ವಿರಸ
ಆಯ್ತು."