ಪುಟ:ಮಿಂಚು.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

182 ಮಿಂಚು “ಹೌದೆ? ಹೇಳೀಪಾ, ಡಯರೀಲಿರ್ಲ್ಲಿ.” “ಎನವಸರ ? ಹೇಳ್ತೀನಿ." - “ಅನಂತರ, ರಾತ್ರೆ ಪ್ರತಿಪಕ್ಷದ ಮುಖಂಡನನ್ನು ಮುಖ್ಯಮಂತ್ರಿ

ತಮ್ಮ ನಿವಾಸ ದಿಂದ ಹೊರಗೆ ದಬ್ಬಿಸಿದ್ದು....."

“ನಿಜವೇ ?! ಏನಾದರೂ ಮಾಡಿದನೋ ?' “ನಿಮಗೇನು ಪ್ರಯೋಜನ ? ಆತ ಹಿಟ್ ಲಿಸ್ಟಿನಲ್ಲಿ ಇಲ್ಲ.” “నిಮ್ಮ ಸಲಹೆ ಏನು ? - "ನಿಮಗೆ ತಿಳಿಯದ್ದೆ ಸಾರ್ ? ಇಬ್ಬರು ಮೂವರನ್ನು ಸ್ಟೇಷನ್ನಿಗೆ ಕರೆಸಿ.

ಸಾಕು. ಮುಖ್ಯಮಂತ್ರಿದು ಈಗ ಅರಗಿನ ಮನೆ. ನಾವೆಲ್ಲ ಹುಷಾರಾಗಿರ್ಬೇಕು."

“ವಿಶ್ವಂಭರನ ಸೌದಾ-ದಸ್ತಾವೇಜು ತಯಾರಾಯ್ತೆ?” - . “ಬಿಸಿದೋಸೆಯ ಹಾಗೆ ಖರ್ಚಾಗ್ತಿದೆ. ಒಂದು ಸೆಟ್ಟಿಗೆ ಐವತ್ತು ರೂಪಾಯಿ ಮುದ್ರಿತ ಬೆಲೆ: ಸಿಗೋದಿಲ್ಲ, ಕಾಳಸಂತೇಲಿ ಮೂರು ಪಟ್ಟು.” “ನಾನು ಪುಸ್ತಕ ಗಿಸ್ತಕ ಕೊಂಡವನಲ್ಲ, ಮಾರುವವರ ಅಂಗಡಿ ಮೇಲೆ ಧಾಳಿ

ನಡೆಸಿ, ಒಂದು ಪ್ರತಿ ಪಡೀತೇನೆ." -

“ಅಧ್ಯಕ್ಷತೆ ಖಾಲಿ ಇರೋ ನಿಗಮಗಳು ಯಾವುವು ಅಂತ ತಮಗೆ ತಿಳಿಸೋದಕ್ಕೆ ಮುಖ್ಯ ಕಾಯದರ್ಶಿ ಚೌಗುಲೆಗೆ ಸೂಚನೆ ಹೋಗಿದೆಯಂತೆ.” “ಮಾತಾಜಿ ಪರವಾಗಿಲ್ಲ. ಅಧ್ಯಕ್ಷತೆ, ಕಾರು, ಬಂಗಲೆ, ಸಂಬಳ, ಗಿಂಬಳ.... ಮಾತಾಜಿ ಭಂಡಾರದಲ್ಲಿ ನಗದು ಎಷ್ಟಿದೆಯೊ ? ” “ నిಖರವಾಗಿ ಹೆಳೋದು ಕಷ್ಟ." - “ನಿಷ್ಠೇನ ಕೊಂಡುಕೋ ಬಹುದು, ನೋಡಿ. ವಿಶ್ವಂಭರನದು ಬರಿ ಮಾತಿನ

ಬಡಾಯಿ ಆದರೆ ಪ್ರಯೋಜನವಿಲ್ಲ."

“ಹಾಗೇನಿಲ್ಲ. ಅವನ ಗುಂಪಿನಲ್ಲೂ ನಿಧಿ ಸಂಗ್ರಹ ಸಮರ್ಥರು ಇದ್ದಾರೆ. ವಾಗ್ವಾನಗಳನ್ನು ಮಾಡಿದರಾಯ್ತು." “ಮಾತಾಜಿಯ ಪಾಲಿಗೆ ಈ ನಾಟಕ ದುಃಖಾಂತವಾಗುತ್ತೊ ? ಸುಖಾಂತ

ವಾಗುತ್ತೊ ?” 

“ಅದು ದಿಲ್ಲೀಶ್ವರರನ್ನು ಅವಲಂಬಿಸಿದೆ." “ಅಂತೂ ಇಬ್ಬರು ಮೂವರಿಗೆ ನಾನು ಆತಿಥ್ಯ ನೀಡಲೇಬೇಕು. ಇವತ್ತು

ರತ್ರೆ ಹಿಡಕೊಂಡು ಬರ್ತೀನಿ."
           *               *                 *

ರಾಜ್ಯಪಾಲರು ಪೈಪ್ ಚೀಪಿದರು, ಚೀಪಿದರು. ಅದರಲ್ಲಿ ತಂಬಾಕು ಇರಲಿಲ್ಲ. ಬರಲಿಲ್ಲವಲ್ಲ ಈ ಮಾತಾಜಿ? ತಮ್ಮ ಆಪ್ತ ಕಾರ್ಯದರ್ಶಿಯನ್ನು ಕರೆದು ಹೇಳಿದರು: