ಪುಟ:ಮಿಂಚು.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 183 ಮಿಂಚು “ರಾಜ್ಯಪಾಲರು ಕಾಯ್ತಿದಾರೆಂತ ಸಿಎಂ ಗೆ ಫೋನ್ ಮಾಡು.”

ಮುಖ್ಯಮಂತ್ರಿ  ಕಾರ್ಯ ಸೌಧದಿಂದ ಹೊರಟಿದ್ದಾರೆ ಎಂದು ಬಂತು ಉತ್ತರ. 

ಆಗಮನವಾಯಿತು, ರಾಜ್ಯಪಾಲರು ಎದ್ದು ನಿಂತು ಕೈಕುಲುಕಿದರು. “ಎನು ತಗೊಳ್ತೀರಿ?"

“ನೀವು ನನ್ನ ವೈರಿಯಾದರೆ ವಿಷ ಕೊಡಿ ; ಸ್ನೇಹಿತನಾದರೆ ಅಮೃತ ಇರಲಿ.”
“ನನ್ನಲ್ಲಿ ಎರಡೂ ಇಲ್ಲ." 
“ಹಾಗಾದರೆ ಏನೂ ಬೇಡ."
“ನಿನ್ನೆ ಸಂಜೆ ಏನೋ ಹೇಳಲು ಬಂದಿರಿ, ಅಲ್ಲವ?”
“ಅಂಥಾದ್ದೇನೂ  ఇల్ల. ನಮ್ಮ ಶಾಸನಸಭಾ ಪಕ್ಷದಲ್ಲಿ ಅಪಶ್ರುತಿ ಇದೆ ಅಂತ ಯಾವನಾದರೂ ಮುಟಾಳ ಬಂದು ಚಾಡಿ ಹೇಳಿದರೆ, ನೀವದಕ್ಕೆ ಗಮನ ಕೊಡ 

ಬಾರದೂಂತ ತಿಳಿಸೋದಕ್ಕೆ ಬಂದೆ.” “ಸಾಮಾನ್ಯವಾಗಿ ಭಿನ್ನಮತೀಯರ ಗುಂಪು ಎల్ల ರಾಜ್ಯಗಳಲ್ಲೂ ఇದೆ, ದಿಲ್ಲಿ

ಅದಕ್ಕೆ ಹೆಚ್ಚಿನ ಮಹತ್ವ ಕೊಡೋದಿಲ್ಲ." 

“ವರದಿ ಬರೆಯುವಾಗ ಈಗ ಹೇಳಿದ್ದನ್ನು ಮರೀಬೇಡಿ."

“ಪ್ರಜಾಪಕ್ಷದ ಆರೋಪಪಟ್ಟಿಗೆ ಒಂದು ನಯಾಪೈಸೆ ಬೆಲೆಯೂ ಇಲ್ಲ. ಅವರು
ತಂದುಕೊಟ್ಟರೆ ಸುಮ್ಮನೆ ರಾಷಸ್ಟ್ರಪತಿಗೆ ಒಂದು ಪ್ರತಿ ಪೋಸ್ಟ್ ಮಾಡ್ತೇನೆ. ಅಲ್ಲಿಗೆ ನನ್ನ ಕೆಲಸ ಆಯ್ತು, ನನ್ನಿಂದ ನಿಮಗೆ ಬೇರೇನಾದರೂ ಸಹಾಯ ಆಗ್ವೇಕೆ?” 
“ಸಭಾಧ್ಯಕ್ಷ ಲಕ್ಷ್ಮೀಪತಿಯನ್ನು ಮುಂದಿಟ್ಕೊಂಡು ವಿಶ್ವಂಭರ ಆಟ ಅಡ್ತಿ

ದ್ದಾನೆ. ಅವರಿಬ್ಬರನ್ನೂ ಕರೆಸಿ ಒಂದಿಷ್ಟು ಬುದ್ದಿ ಹೇಳ್ತೀರಾ ?” “ವಿಶ್ವಂಭರರಿಗೆ ಹನ್ನೆರಡು ಗಂಟೆಗೆ ಟೈಮ್ ಕೊಟ್ಟಿದೆ, ಸಂತೋಷದಿಂದ

ಮಾತಾಡ್ತೇನೆ." 

“ವಿಶ್ವಂಭರನಿಗೆ ಯೋಗ್ಯತೆ ಇದೆ. ಮುಂದೆ ಆತನಿಗೆ ಸಂಪುಟ್ಟದಲ್ಲಿ ಸ್ಥಾನ

ಕೊಡೋದಕ್ಕೆ ನಾನು ಸಿದ್ದ.”

“ಈ ವಿಷಯ ಅವರಿಗೆ ಹೇಳ್ತೀನಿ.” “ಬರಲಾ ಹಾಗಾದರೆ?" ಎಂದು ಹೇಳಿ, ಸೌದಾಮಿನಿ ಏಳುತ್ತಿದ್ದಂತೆ, ರಾಜ್ಯ ಪಲರೆಂದರು “ನಿನ್ನೆ ನಿಮಗೆ ಬೇಸರವಾಯ್ತೇನೊ? ನನ್ನ ಮಿಸೆಸ್ ನಿಮಗೆ ಗೊತ್ತಲ್ಲ....” "ಗೊತ್ತು,ಗೊತ್ತು." ಕಾರನ್ನು ಏರುತ್ತಿದ್ದಂತೆ ಸೌದಾಮಿನಿಗೆ ರಾಜಭವನದ ಒಂದು ಕಿಟಿಕಿಯಲ್ಲಿ ರಾಜ್ಯಪಾಲರ ಪತ್ನಿಯ ಮುಖ ಕಂಡಂತಾಯಿತು. 'ಥುತ್ತೆರಿ!' ಎನ್ನುವ ಪದ ಮುಖ್ಯಮಂತ್ರಿಯ ನಾಲಗೆಯ ಮೇಲೆ ಆಡಿತು.

               *                 *                    *