ಪುಟ:ಮಿಂಚು.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

13

“ನಿನ್ನ ತಲೆ. ನನ್ನ ಪಾಪೆಯ ಮೇಲೆ ಲೆನ್ಸ್ ಇದೆ. ಅದು ಹಾಕಿಕೊಂಡರೆ ಕನ್ನಡಕ ಬೇಕಾಗೋದಿಲ್ಲ. ರಾತ್ರೆ ತೆಗೆದಿಡ್ಬೇಕು.”
“ಅದಕ್ಕೆ ವಿಶ್ರಾಂತಿ. ರಾತ್ರಿ ಅದರ ಅಗತ್ಯವೂ ಇರೋದಿಲ್ಲ. ಅಲ್ವ ಬೆನ್?”
“ಅದು ಯಾವುದಕ್ಕೂ ಅದರದೇ ಧ್ಯಾನವಂತೆ...”
“ಹೋಗಿ, ಮೃದುಲಾಜಿ.”
ಮೂಲೆಯತ್ತ ಬೊಟ್ಟು ಮಾಡಿ ಮನೆಯೊಡತಿ ಅಂದಳು :
“ಅದು ರೆಕಾರ್ಡ್ ಪ್ಲೇಯರ್, ನೂರಾರು ರೆಕಾರ್ಡ್‌ಗಳಿವೆ. ಲತಾದ್ದು ಜಾಸ್ತಿ, ಪೇರಿಸಿ ಇಟ್ಟು ಚಾಲೂ ಮಾಡಿದರೆ ಒಂದರ ಅನಂತರ ಒಂದಾಗಿ ಹಾಡು ಬರ್ತಾನೆ ಇರ್ತದೆ.”
“ನನ್ನ ಆಶ್ರಮದಲ್ಲಿ ಇದು ಒಂದು ದಿನ ಬಾಳೋದಿಲ್ಲ.”
“ಅದು ನಿಜ ಅನ್ನು.”
ತನ್ನ ಆಶ್ರಮದ ಮೇಲೆ ಗುಜರಾಥಿನ ಛಾಯೆ ಬಿದ್ದಾಗಲೆಲ್ಲ ಪುಟ್ಟವ್ವನಿಗೆ ಪೂರ್ಣ ಎಚ್ಚರ, ಮುಚ್ಚಿಡಬೇಕಾದ ಎಷ್ಟೊಂದು ಛಿದ್ರಗಳಿವೆ ತನ್ನಲ್ಲಿ ! ಇವ ಳಾದರೋ ತನ್ನ ನೂರಾರು ಛಿದ್ರಗಳನ್ನು ಎಷ್ಟೊಂದು ಸೊಗಸಾಗಿ ಮುಚ್ಚಿಕೊಂಡಿ ದ್ದಾಳೆ. ತನಗೀಗ ಶನಿದೆಸೆ ಇದ್ದೀತು. ಪವಾಡ ಪುರುಷರನ್ನು ಮೃದುಲಾಬೆನ್ ಬಹಳ ಬಲ್ಲಳು. ಯಾರಾದರೊಬ್ಬರನ್ನು ತಾನು ನೋಡುವುದೇ ಸರಿ.
ಕಾಫಿ ಬಂತು.
ಚೆನ್ನಾಗಿದೆ.... ನಿನ್ನ ಹೆಸರೇನು ?”
ಹುಡುಗಿಯ ಬದಲು ಒಡತಿ ಉತ್ತರಿಸಿದಳು :
“ನಾನು ಜುಮ್ಮಿ ಅಂತ ಕರೀತೇನೆ.”
"ದಿಲ್ಲಿಯಲ್ಲಿ ಟೆಲಿವಿಷನ್ ಶುರು ಮಾಡಿದಾರಂತಲ್ಲ.”
"ಕಳೆದ ಸಲ ಹೋದಾಗ ನೋಡಿದ್ದೆ. 'ದೇವದಾಸ' ಹಾಕಿದ್ರು.”
“ದೇವದಾಸ ? ಹಳೇದು ?”
“ಆದರೇನಾಯ್ತು ? ಮನೇಲೆ ಕೂಡ್ಕೊಂಡು ನೋಡಬಹುದಲ್ಲ ?”
“ಮುಂಬಯಿ-ಕಲ್ಯಾಣನಗರಕ್ಕೆಲ್ಲ ಬರೋಕೆ ಇನ್ನೆಷ್ಟು ವರ್ಷ ಬೇಕೊ?”
“ನಮ್ಮದು ಬಡದೇಶ ಪುಟ್ಟಾ, ಈ ವ್ಯವಸ್ಥೆಗೆ ಭಾರೀ ದುಡ್ಡು ಅಗತ್ಯ. ವಿದೇಶೀ ಸಾಲ ಪಡೀದೆ ಆಗೋ ಕೆಲಸವೇ ಅಲ್ಲ ಇದು.”
“ಬೆನ್, ಇಲ್ಲಿ ಒಂದರ ಕೊರತೆ ಇದೆ ಅನ್ನಿಸುತ್ತೆ."
ಹಿರಿಯವಳ ಹುಬ್ಬುಗಳು ಮೇಲೇರಿದುವು.
"ಫೋನ್.”
“ವೇಯಿಟಿಂಗ್ ಲಿಸ್ಟಿನಲ್ಲಿದೀನಿ. ಕಮಿಟಿ ಸದಸ್ಯರಿಗೆ ಹೇಳಿ ಆಗಿದೆ. ಒಬ್ಬರು ಮೇಯರ್, ಇನ್ನೊಬ್ಬರು ಎಂ. ಪಿ. ಬೇಗನೆ ಆದೀತು. ಸದ್ಯಕ್ಕಂತೂ ಎದುರು