ಪುಟ:ಮಿಂಚು.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

184 ಮಿಂಚು

     ವಿಶ್ವಂಭರ ರಾಜ್ಯಪಾಲರಲ್ಲಿಗೆ ಲಕ್ಷ್ಮೀಪತಯ್ಯನನ್ನೂ ಕರೆದುಕೊಂಡು ಬಂದಿದ್ದ.
 ವಿಧಾನಸಭಾಪತಿಯಾಗಿ ಲಕ್ಷ್ಮೀಪತಯ್ಯ ರಾಜ್ಯಪಾಲರಿಗೆ ಹೆಚ್ಚು ಪರಿಚಿತ. ವಿಶ್ವಂ
 ಭರನ ಮುಖ ಪರಿಚಯವಷ್ಟೇ ರಾಜ್ಯಪಾಲರಿಗಿತ್ತು. 
     "ಅನುಮತಿ ಇಲ್ಲದೆಯೇ ಸ್ಟೀರ್‍ರನ್ನು ಕರತಂದಿದ್ದೇನೆ" ಎಂದ ವಿಶ್ವಂಭರ,
     ರಾಜ್ಯಪಾಲರೆಂದರು :
     "ನೀವು ಮಾಡಿದ್ದು ಕ್ರಮಬದ್ಧ ವಾಗಿದೇಂತ ರೂಲಿಂಗ್ ಕೊಡ್ವೇನೆ.”
     ಎಲ್ಲರೂ ನಕ್ಕರು.
     ವಿಶ್ವಂಭರ ದೂರು ಕೊಟ್ಟ.
     "ನನ್ನ ಕ್ಷೇತ್ರಕ್ಕೆ ರಾಜ್ಯಪಾಲರು ಬಂದೇ ಇಲ್ಲ."
     "ದೀಪಾವಳಿ ಆದ್ಮೇಲೆ ಖಂಡಿತ ‍ಬರ್ತೀನಿ."
     "ದೀಪಾವಳಿಯನ್ನು ಕಿಷ್ಕಿಂಧೆ ಈ ಸಲ ಹೇಗೆ ಆಚರಿಸುತ್ತೊ ನೋಡಬೇಕು." 
     "ಆನೆ ಪಟಾಕಿ ಆಟಂ ಬಾಂಬ್ ಬಹಳ ಸಂಗ್ರಹಿಸ್ತಾ ಇದೀರಂತೆ."
     ಭೇಟಿಗೆ ಬಂದವರ ನಗೆ ಮುಕ್ತಾಯವಾದ ಬಳಿಕ ರಾಜ್ಯಪಾಲರು ಮಾತನಾಡಿ
 ದರು :
     "ವಿಶ್ವಂಭರ್, నిಜಸ್ಥಿತಿ ಏಸೂಂತ ತಿಳಿಸಿ. ನೀವೇನೊ ಯೋಚಿಸೋದು
 ಬೇಡ_ರಹಸ್ಯ ಪಾಲನೆಯಲ್ಲಿ ನಾನು ನಿಸ್ಸಿಮ!"
     "ತಾವು ಒಪ್ತೀರೋ ಇಲ್ಲವೊ.ಈ ಸೌದಾಮಿನಿ ಕುರಿಯ ತುಪ್ಪಳ ಹೊದ್ದು
 ಕೊಂಡಿರೋ ಹೆಣ್ಣು ತೋಳ, ಕಿಷ್ಕಿಂಧೆಗೆ ಅಂಟಿರೋ ಪಿಡುಗು. ಒಂದು ದಾಖಲೆ
 ತಯಾರಸಿದೇವೆ, ಪರಾಂಬರಿಸಬೇಕು" ಎಂದು ಹೇಳಿ ವಿಶ್ವಂಭರ ಬ್ರೀಘ್‍ಕೇಸಿನಿಂದ
 ಒಂದು ಪುಸ್ತಕವನ್ನು ಹೊರತೆಗೆದು ರಾಜ್ಯಪಾಲರ ಮುಂದಿಟ್ಟ.'ಗ್ರಂಥಕರ್ತ
 ವಿಶ್ವಂಭರ' ಎಂದಿತ್ತು, ರಾಜ್ಯಪಾಲರು ಹಾಳೆಗಳನ್ನು ತಿರುವಿದರು.
     "ನೂರ ಅರವತ್ತೆಂಟು ಪುಟ! ಬೆಲೆ ಇಟ್ಟಿದೀರಿ. ಶಾಸಕರಿಗೆ ಉಚಿತ ಅಂತ
 ತೋರ್ತ್‍ದೆ"
     "ಅದು ತಮ್ಮ ಪ್ರತಿ. ನನ್ನ ಶುಭಾಶಯಗಳೊಂದಿಗೆ."
     "ನಿಮಗೆ ಬೆಂಬಲ ಕೊಡುವವರು ಎಷ್ಟು ಮಂದಿ ಇದ್ದಾರೆ?"
     "ಈಗಿನ ಮುಖ್ಯಮಂತ್ರಿಯಲ್ಲಿ ಅವಿಶ್ವಾಸ ಸೂಚಿಸುವ ಪತ್ರಕ್ಕೆ ನಲ್ವತ್ತೈದು.
 ಶಾಸಕರು ಸಹಿ ಮಾಡಿದ್ದಾರೆ. ದಿನವೂ ಐದಾರು ಜನ ನಮ್ಮ ಕಡೆ ಸೇರಿದ್ದಾರೆ.
 ಇದು ಮನೆ ಜಗಳ, ರಾಷ್ಟ್ರಪಕ್ಷಕ್ಕೆ ಇದರಿಂದ ಯಾವ ಹಾನಿಯೂ ಆಗಬಾರದು.
     "ಹಾನಿಯಾಗೋದಿಲ್ಲ," ಎಂದ ಲಕ್ಷ್ಮಿಪತಯ್ಯ.
     "ಹೆಚ್ಚಿನ ಶಾಸಕರು ಸ್ವಂತ ಊರುಗಳಿಗೆ ಹೋಗಿರಬೇಕಲ್ಲ?"
     "ಅದಕ್ಕೇ ತಡವಾಗಿದೆ. ಮೊದಲು ಈ ಪುಸ್ತಕ ಹೋಗ್ರದೆ. ಆಮೇಲೆ
 ಪತ್ರ. ಇಲ್ಲಿಗೆ ಬಂದು ಸಹಿ ಮಾಡ್ತಾರೆ. ಭಿನ್ನಮತೀಯರು ಅಂದ್ರೆ ಬಂಡಾಯ