ಪುಟ:ಮಿಂಚು.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮಿ೦ಚು                                              189
         
  ಐ.ಜಿ.ಪಿ. ಮುಖ್ಯಮಂತ್ರಿ ನಿವಾಸಕ್ಕೆ ಹೊಗಬೇಕಾಯಿತು, ಕಾವಲು ಸಿಬ್ಬ೦ದಿ
ಹತ್ತು ಹನ್ನೆರಡು ಕಲ್ಲು ಆರಿಸಿ ಇಟ್ಟಿದ್ದರು.
  ಮುಖ್ಯಮಂತ್ರಿ : “ಏನಾದರೂ ಗೊತ್ತಾಯಿತೇನ್ರಿ ?"
  ಐಜಿಪಿ : “ಒಂದು ತಂಡವನ್ನು ಹಿಡಿದು ತೀವ್ರ ತನಿಖೆ ನಡೆಸಿದ್ದೇವೆ,
                 ಮಾತಾಜಿ."
  ಮುಖ್ಯಮಂತ್ರಿ: “ಬಿಡಬೇಡಿ, ತನಿಖೆ ಮುಂದುವರಿಸಿ." 
  ಐಜಿಪಿ: " ನಾನೊ೦ದು ಸಲಹೆ ನೀಡಬಹುದೆ?"
  ಮುಖ್ಯಮಂತ್ರಿ : “ಏನದು?”
  ಐಜಿಪಿ : “ಅವತ್ತು ಮೂವರು ಶಾಸಕರನ್ನು ಹಿಡಿದು ಜಾಮೀನಿನ ಮೇಲೆ
           ಬಿಟ್ಟೆವಲ್ಲ? (ಎಲ್ಲ ಚಿಲ್ಲರೆ ಅಪಾದನೆ) ಕೇಸ್ ಗಳನ್ನು ವಾಪಸು                                       
           ತೆಗೆದುಕೊಳ್ಳಲು ತಾವು ಆದೇಶವಿತ್ತರೆ, ಮುಖ್ಯಮಂತ್ರಿಯ ಬಗ್ಗೆ 
           ಶಾಸಕರ ಮತ್ತು ಜನರ ಗೌರವ ಹೆಚ್ಚದೆ."
  ಮುಖ್ಯಮಂತ್ರಿ : “ಹಾಗೆಯೇ ಮಾಡಿ. ನನ್ನ ಹೃದಯ ಎಷ್ಟು ವಿಶಾಲ 
ಅನ್ನೋದು ಎಲ್ಲರಿಗೂ ಗೊತ್ತಾಗಲಿ.” 
....ಮಾರನೆಯ ಬೆಳಗ್ಗೆ ಗುಪ್ತಚಾರ ದಳದ ಮುಖ್ಯಸ್ಥ ಬಂದ.
“ನಿಮ್ಮ ದಾರಿಯನ್ನೇ ನೋಡ್ರಿದ್ದೆ.." ಎಂದಳು ಮುಖ್ಯಮಂತ್ರಿ.
“ಸಿ.ಬಿ.ಐ, ಬೇಹುಗಾರಿಕೆ ಪೂರ್ತಿಯಾಗಲೀಂತ ಎರಡು ದಿನ ತಡಮಾಡಿದೆ."
“ಆಯ್ತಾ ? ಅವರ ವರದಿ ಹೇಗಿರುತ್ತೊ ?”
“ಅಸ್ಥಿರತೆ ಇದೆ, ಅಲುಗಾಡುವ ಸ್ಥಿತಿಗೆ ಇನ್ನೂ ಮುಟ್ಟಿಲ್ಲ." 
"ಅಸ್ಥಿರತೆ ತಲೆಕಾಯಿ ".
“ಆದರೂ ಮಾತಾಜಿ, ತಾವೊಮ್ಮೆ ದಿಲ್ಲಿಗೆ ಹೋಗಿ ಬರೋದು ಮೇಲು ಅಂತ 

ತೋರದೆ.”

 ಸೌದಾಮಿನಿ ಸುಮ್ಮನಿದ್ದಳು. ಆದರೆ ಆ ಸಂಜೆಯೇ ದಿಲ್ಲಿಗೆ ಹಾರಲು 

ನಿರ್ಧರಿಸಿದಳು. ಹಿ೦ದಿನ ಹಾಗೆಯೇ, ರಾಮ್ ಧನ್, ಅವಳು, ಪರಶುರಾಮ, ಬೋಲಾನಾಥ್, 'ಏನೂ ಬದಲಾಗಿಲ್ಲ-ಏನೂ' ವಾರ್ತಾ ಇಲಾಖೆ ಹೊರಡಿಸಿದ ಪತ್ರಿಕಾ ಟಿಪ್ಪಣಿಯಲ್ಲಿತ್ತು :

 “ರಾಷ್ಟ್ರದ ಪ್ರಧಾನಿಯ ಕರೆ ಬಂದುದರಿಂದ ಮುಖ್ಯಮ೦ತ್ರಿ ದಿಲ್ಲಿಗೆ ಹೋಗಿ 

ದ್ದಾರೆ, ಇದು ಮಾಮೂಲು ಭೇಟಿ. ಇದಕ್ಕೆ ರಾಜಕೀಯ ಮಹತ್ವವಿಲ್ಲ.”

  ವಿದ್ಯಾಧರನಿಗೆ ಫೋನ್ ಮಾಡಿ ಮುಖ್ಯಮಂತ್ರಿ ಅಂದಳು : 
  “ನಿಮ್ಮ ಸಹಿ ಸಂಗ್ರಹ ಕೆಲಸ ಮುಂದುವರೀಲಿ, ಎಲ್ಲ ಶಾಸಕರಿಗೂ ಫೋನ್ 

ಮಾಡಿ ಕಲಾಣನಗರಿಗೆ ಕರೆಸಿ." -