ಪುಟ:ಮಿಂಚು.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 190

                               ೨೦


  ದಿಲ್ಲಿಯಲ್ಲಿ ವಿಮಾನನಿಲ್ದಾಣಕ್ಕೆ ಫೆರ್ನಾಂಡೀಸ್ ಜೀಪ್ ತಂದಿದ್ದ, ಎರಡು 

ಬ್ರೀಫ್ಕೇಸುಗಳು ಅಂಗರಕ್ಷಕರ ವಶ ಇದು ದರಿಂದ ನಿಲ್ದಾಣದಿಂದ ಹೊರಡುವುದು

ತಡವಾಗಲಿಲ್ಲ. 
 ಕಿಷ್ಟಿಂಧೆಯ ಕುಟೀರದಲ್ಲಿ ಅಡುಗೆಯ ಶ್ರೀಪಾದ, ಟೈಪಿಸ್ಟ್ ಸಿತಾರಾ, ಜವಾನ

ಮುಖ್ಯಮಂತ್ರಿಗೆ ಸ್ವಾಗತ ಬಯಸಿದರು.

 ಸೌದಾಮಿನಿಯನ್ನು ಕಾಡುತ್ತಿದ್ದುದೊಂದೇ ಚಿಂತೆ: ಈಗ ತನ್ನ ಬಗ್ಗೆ ದಿಲ್ಲಿಯ  

ವಿವಿಧ ಪ್ರಮುಖರ ನಿಲುವೇನು? ಸಿ ಬಿ ಐ ಅಧಿಕಾರಿಗಳು ಏನು ವರದಿ ಕೊಟ್ಟಿರು ವರೊ? ಇಲ್ಲಿನ ಎರಡು ಪತ್ರಿಕೆಗಳಲ್ಲಿ ಕಳೆದ ಎರಡು ವಾರಗಳಲ್ಲಿ ತನ್ನ ಬಗ್ಗೆ ಅಷ್ಟೊಂದು ಅನುಕೂಲಕರವಲ್ಲದ ವಾರ್ತಾಪತ್ರಗಳು ಪ್ರಕಟವಾಗಿದ್ದುವು. “ಕಿಷ್ಕಿ೦ಧೆ ಯಲ್ಲಿ ಭಿನ್ನಮತೀಯರ ಸವಾಲು.' 'ನಾಯಕತ್ವದಲ್ಲಿ ಬದಲಾವಣೆ ಸಂಭವ?'... ಒಂದು ಪತ್ರಿಕೆಯಲ್ಲಿ ಹೀಗೆ. ಇನ್ನೊಂದರಲ್ಲಿ ಇದೇ ಸರಣಿಯಲ್ಲಿ ಮತ್ತಿಷ್ಟು. ಜೀಪಿನಲ್ಲಿ ಕುಟೀರದತ್ತ ಬರುತ್ತಿದ್ದಾಗ ತಪ್ತವಾಗಿದ್ದ ಮೆದುಳು ಸ್ವಾಗತಿಸಿದವರನ್ನು ಕಂಡೊಡನೆ ಕರ್ತವ್ಯದ ನೆನಪು ಮಾಡಿಕೊಟ್ಟಿತು.

 -“ಶ್ರೀಪಾದ ಆಚಾರು, ಚೆನಾಗಿದ್ದೀರಾ ?” 
 —“ಸಿತಾರಾ, ಇನ್ನೂ ಹೋಗಿಲ್ಲವೇನಮ್ಮ ಮನೆಗೆ?” 
   ರೇಗುವ, ಕೂಗುವ ಅಗತ್ಯವಿಲ್ಲ, ಇಲ್ಲಿ, ಮುಗುಳುನಗೆಯ ಮುಖವಾಡವೇ 

ಸರಿ.

  ಫೆರ್ನಾಂಡೀಸ್'ಗೂ ಸಿತಾರಾಗೂ ಗೊತ್ತು, ಕಿಷ್ಟಿಂಧೆಯಲ್ಲೇನೋ ಕರಾಮತ್ತಿನ 

ರಾಜಕೀಯ ನಡೆದಿದೆ ಎಂದು, ಅದರ ಸುಳಿವು ನಾಳೆ ಸಿಗಬಹುದು.

 “ಊಟ ಸಿದ್ದ ವಾಗಿದೆ"ಎಂದು ಶ್ರೀಪಾದ ಫೆರ್ನಾಂಡೀಸ್ಗೆ ತಿಳಿಸಿದ. ಆತನಿಂದ 

ಪರಶುರಾಮನಿಗೆ ಸಂದೇಶ. ಆತ ಮುಖ್ಯಮಂತ್ರಿಗೆ ಬಿತ್ತರಿಸಿದ.

 “ನಾನು ಕೊಠಡೀಲೇ ಊಟ ಮಾಡ್ವೇನೆ. ಸ್ವಲ್ಪ ಸಾಕೂಂತ ಹೇಳು.”
 ಫೆರ್ನಾಂಡೀಸ್ಗೆ ಅವಳೆ೦ದಳು : 
 “ತಡವಾಯು, ಜೀಪ್ ತಗೊಂಡು ಹೋಗಿ, ಸಿತಾರಾಗೆ ಡ್ರಾಪ್ ಕೊಡಿ, 

ನಾಳೆ ಬೆಳಗ್ಗೆ ಎ೦ಟು ಗ೦ಟೆಗೆ ಬ೦ದ್ಬಿದಡಿ,"

 “ಹೂಂ, ಗುಡ್ನೈಟ್, ಮಾತಾಜಿ,”