ಪುಟ:ಮಿಂಚು.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

192 ಮಿ೦ಚು

 “ಬಾಬಾಜಿಗೆ ಈಚೆಗೆ ಫೋನ್ ಮಾಡಿದ್ದಿರಾ ?” 
 "ಇల్ల. ಮು೦ದಿನ ತಿ೦ಗಳು ಅಲ್ಲಿಗೆ ಹೋಗಬೇಕೂ೦ತಿದೀನಿ..ಬ೦ದ್ಬಿಟ್ಟೆ- 

ಅಲ್ಲೇ ಕಾದಿರು.” -

 ಕುಟೀರದ ಜವಾನ ಬಾಗಿಲು ತೆರೆದ, ಪರಶುರಾಮ ತನ್ನ ಲೆಕ್ಕಾಚಾರವನ್ನು 

ಮಾತಾಜಿಗೆ ತಿಳಿಸಿದ:

 “ತಕ್ಷಣ ಹೊರಟರೆ ಇಪ್ಪತ್ತು ಮಿನಿಟು ಸಾಕು. ಈಗ ಟ್ರಾಫಿಕ್ ಇಲ್ಲ." 
 ಅವನ ತರ್ಕ ಸರಿಯಾಗಿತ್ತು. ಇಪ್ಪತ್ತು ಮಿನಿಟು ದಾಟುವುದರೊಳಗೇ 

ನಕುಲದೇವಜಿಯ ಕಾರು ಬಂತು. ಅವರೇ ಎಡಬಾಗಿಲು ತೆರೆದು, ತಾನು ಸೀಟಿನ ಮಧ್ಯಕ್ಕೆ ಸರಿದು, ನಮಸ್ಕರಿಸುತ್ತಿದ್ದ ಸೌದಾಮಿನಿಗೆ ಒಳ ಬರಹೇಳಿದರು. ಆಕೆ ಕಾರು ಹತ್ತಿದಳು.

 “ಇಷ್ಟು ಸಾಮಿಗೂಪ್ಯದ ಭಾಗ್ಯವಾದರೂ ಸಿಕ್ಕಿತಲ್ಲ.. (ಆಪ್ತ ಕಾರ್ಯದರ್ಶಿಗೆ) 

ಕಪ್ಪ ಸೂಟ್ಕೇಸ್ ತಗೊಂಡು ಬಾ."

 ಅದು ಬ೦ದು. ದ್ ಇಳಿದು ಹಿ೦ದಿನ ಬಲ ಬಾಗಿಲು ತೆರೆದ. ಸೂಟ್

ಕೇಸನ್ನು ನಕುಲದೇವ್ಜಿಯ ಪಾದದ ಬಳಿ ಇಟ್ಟ"

 “ನೀವು ಲಾಕೋ ಮೆ ಏಕ್ ಇಸ್ತ್ರೀ,” ಎಂದ ನಕುಲದೇವ್. 
 “ಲಾಕ್ ಅಲ್ಲ. ಕರೋಡ್ ಇದೆ ಅದರಲ್ಲಿ. ರಂಗಧಾಮನನ್ನು ಇಲ್ಲಿಂದ ಬರಿಗೈ

ಯಲ್ಲಿ ಕಳಿಸಿ ನನಗೆ ಅನಾಯ ಮಾಡಿದ್ರಿ.”

 “ಏರ್ಪಾಟು ಇರೋದೆ ಹಾಗೆ, ಎಲ್ಲ ರಾಜ್ಯಗಳಿಂದ ಖರೀದಿ ವ್ಯವಹಾರ 

ನಡೆಯೋದು ದಿಲ್ಲಿಯ ಮೂಲಕವೇ, ರಂಗಧಾಮ ಹೇಳಲಿಲ್ಲವ? ನಾನು ತಿಳಿಸೋ ದಕ್ಕೆ ಮರೆತೆ ಅಂತ ತೋರ್ತದೆ.”

 ಏರ್ಪಾಟೇ ಹಾಗೆ ಎಂದಾದರೆ ಅಪಚಾರವೇನೂ ನಡೆದಿಲ್ಲ- ಎಂದು 

ಸೌದಾಮಿನಿಗೆ ಒಂದು ಬಗೆಯ ಸಮಾಧಾನ.

 “ಪ್ರಧಾನಿಯವರನ್ನ ನಾನು ನೋಡೋದಕ್ಕೆ ವೇಳೆ ಗೊತ್ಮಾಡ್ಕೊಡಿ." 
 “ಸಾಧ್ಯವೇ ಇಲ್ಲ, ಎರಡು ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಎರಡು 

ವಾರಗಳಿ೦ದ ಸಂದರ್ಶನಕ್ಕಾಗಿ ಕಾದಿದ್ದಾರೆ. ಲೋಕಸಭೆಯ ಮುಂದಿನ ಅಧಿವೇಶನಕ್ಕೆ ಮುಂಚೆ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರಿಯಬೇಕು...ಅಂತ ಹೇಳ್ತಾ ಇದ್ದು.”

 “ಕಿಷ್ಕಿ೦ಧಾ ಭವನದ ಶಂಕುಸ್ಥಾಪನೆ, ಪ್ರಧಾನಿಯ ಕಿಷ್ಕಿ೦ದ ಪ್ರವಾಸ ఎల్ల

ಮುಂದಕ್ಕೆ ಬಿದ್ದ ಹಾಗೆ." .

 “ನಿಮ್ಮ ರಾಜ್ಯದ ವಿಷಯದಲ್ಲಿ ಸಿ.ಬಿ.ಐ. ವರದಿ ಬಂದಿದೆ, ಅದು ಪ್ರಧಾನಿ 

ಕೈಯಲ್ಲಿದೆ. ಬೇರೆ ವರದಿಗಳೂ ಬಂದಿವೆ, ಪ್ರತಿಪಕ್ಷ ಸಲ್ಲಿಸಿದ ಆರೋಪಗಳ ಪಟ್ಟಿ ಯನ್ನು ಕೆಳ ಹಂತದಲ್ಲೇ ನಾನು ಮೊಟ್ಟಿದೆ. ಆದರೆ, ನಮ್ಮ ಪಕ್ಷದವರಿಂದಲೇ ದೂರು ಬಂದರೆ, ಒಂದಿಷ್ಟು ಗಮನ ಕೊಡದೆ ಇರೋದಕ್ಕಾಗೊಲ್ಲ.”