ಪುಟ:ಮಿಂಚು.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

14

ಮಿಂಚು

ಫ್ಲ್ಯಾಟಿನಲ್ಲಿದೆ. ಅಗತ್ಯವಿದ್ದಾಗ ಹೋಗಿ ರಿಂಗ್ ಮಾಡ್ತೀನಿ. ಹೊರಗಿನವರಿಗೆ ಮಾತ್ರ ಆ ನಂಬರ್ ಕೊಟ್ಟಿಲ್ಲ. ನಿಮ್ಮಲ್ಲಿ?"

"ವೇಯಿಟಿಂಗ್ ಲಿಸ್ಟ್!"

ಬೆನ್ ನಕ್ಕಳು.

"ಬಾಲ್ಕನಿಗೆ ಹೋಗೋಣ."

ಜುಮ್ಮಿ ಯಾವ ಪರದೆಯ ಮರೆಯಲ್ಲಿದ್ದಳೊ? ಓಡಿ ಬಂದು ಫ್ಯಾನ್ ಅರಿಸಿದಳು. ಮುಂದುಗಡೆಯ ಗಗನಚುಂಬಿಯ ಕೃಪೆಯಿಂದ ಇಲ್ಲಿ ನೆರಳಿತ್ತು. ತಣ್ಣನೆಯ ಗಾಳಿ ಸಂದಿಗೊಂದಿಗಳೆಡೆಯಿಂದ ಅತ್ತ ಸುಳಿಯತೊಡಗಿತ್ತು.

ಪ್ಲಾಸ್ಟಿಕ್ ಹೆಣಿಗೆಯ ಕುರ್ಚಿಗಳು,

"ಇದು ಹೊಸ ಫ್ಯಾಶನ್, ಪುಟ್ಟಾ."

"ನನಗೆ ತಿಳೀದಾ? ಮುಂಬಯಿಯಲ್ಲಿ ಪ್ರತಿ ದಿನವೂ ಹೊಸ ಫ್ಯಾಶನ್ನೇ!

"ಈ ಕಟ್ಟಡಕ್ಕೆ ಲಿಫ್ಟ್ ಹಾಕೋದಕ್ಕೆ ಜಾಗಬಿಟ್ಟಿದ್ದಾರೆ."

"ವೇಯಿಟಿಂಗ್ ಲಿಸ್ಟ್‌ನಲ್ಲಿದೆ ಬಹುಶಃ!"

"ಹೌದು, ಸದ್ಯ: ನನ್ನದು ಮೂರನೇ ಮಹಡಿ, ಹತ್ತೋದು ಇಳಿಯೋದು ಕಷ್ಟವಾಗೋದಿಲ್ಲ."

"ಈ ಭವನಕ್ಕೆ 'ಸೇವಾ' ಅಂತ ಹೆಸರಿಡಿಸಬೇಕೂಂತ ಬಹಳ ಪ್ರಯತ್ನ ಪಟ್ಟೆ. ಆಗಲಿಲ್ಲ."

"ಆ ಜನ ಒಪ್ಪಿದ್ದರೆ ಚೆನ್ನಾಗಿತ್ತು."

"ನಿರ್ಮಾಣ ಸಂಘದ ಸಮಿತಿಯಲ್ಲಿ ನನ್ನ ಬೆಂಬಲಿಗರೂ ಇದ್ದಾರೆ. ಆದರೆ ಹೆಸರಿನ ವಿಷಯದಲ್ಲಿ ಸರ್ವಾನುಮತ ಬೇಕೂಂತ ನಿಬಂಧನೆ ಇದೆ. ನನ್ನ ಬಾಗಿಲಿಗೆ 'ಸೇವಾ' ಅಂತ ಪ್ಲೇಟ್ ಹೊಡಿಸ್ತೀನಿ ಅಂದೆ, ಸಮಸ್ಯೆ ಬಗೆಹರಿಸಿದಿರಿಂತ ನನ್ನನ್ನು ಹೊಗಳಿದರು. ನನ್ನ ವಿಷಯದಲ್ಲಿ ಅವರಿಗೆ ಗೌರವ."

"ನಿರ್ಮಾಣವೆಚ್ಚ ಒಂದು ಲಕ್ಷ ಆಗಬಹುದೂಂತ ಆಗ ಹೇಳಿದ್ದೀರಿ. ಅಲ್ಲವೆ ಬೆನ್?"

"ಏನು ನೆನಪೇ ನಿನ್ನದು! ಒಂದು ಹತ್ತು ಸಾವಿರ ಹೆಚ್ಚಾಯ್ತು. ಈಗ ಇದರ ಬೆಲೆ ಐದುಲಕ್ಷ. ಇನ್ನು ಪ್ರತಿ ವರ್ಷ ಮೌಲ್ಯ ಹೆಚ್ಚುತ್ತಾ ಹೋಗ್ತಿದೆ." "ನಿಮಗೆ ನೂರು ವರ್ಷ ಆದ್ಮಲೆ ಇದನ್ನೇನು ಮಾಡ್ತೀರಾ?"

"ನೂರಿಪ್ಪತ್ತೈದು ಆದಮೇಲೆ ಸೇವಾಸದನ ರಾಷ್ಟ್ರಕ್ಕೆ ಅರ್ಪಿತವಾಗಲೂ ಬಹುದು. ರಾಷ್ಟ್ರವಲ್ಲವೆ ನಮ್ಮೆಲ್ಲರ ತಾಯಿ ತಂದೆ?"

"ಆಸ್ತಿ ಮುಂದಿನ ಪೀಳಿಗೆಗೆ ಹೋಗ್ತಿದೆ ಅಂತ ಕೇಳಿದ್ದೆ."

"ಸಾಕು ಈ ಮಾತು, ಸದ್ಯಕ್ಕಂತೂ ನೀನು ನನ್ನ ದೃಷ್ಟಿಯ ಮುಂದಿಲ್ಲ!"

"ನನ್ನದು ಬೋಳು ಹಣೆ. ಇದರಲ್ಲಿ ಲಿಪಿ ಇಲ್ಲ."