ಪುಟ:ಮಿಂಚು.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 మి೦ಚು 195

 ನಾಳೆ ರಾತ್ರೆ ಕಲ್ಯಣನಗರದಲ್ಲಿ ಸಂಪುಟದ ಸಭೆಯಿದೆ. ಟಿಪ್ಪಣಿ ಕೊಡ್ತೇನೆ. 
 ಅದರ ಆಧಾರದ ಮೇಲೆ ಒಂದು ಮನವಿ ಡ್ಯಾಫ್ಟ್ ಹಾಕಿ ನನಗೆ ತೋರಿಸಿ."
    "ಸರಿ, ಮಾತಾಜಿ" ఎంದ ಫ಼ೆರ್ನಾ೦ಡೀಸ್.
    “ಸಿತಾರಾ ನೀನು ಶೀಘ್ರಲಿಪೀಲಿ ಬರಕೊ.”
    "ಹೂ೦.ಮಾತಾಜಿ,”
    'ರಾಷ್ಟ್ರದ ಪ್ರಧಾನಿಯವರ ಸನ್ನಿಧಿಗೆ ವಿಜ್ಞಾ ಪನೆಗಳು ಇತ್ಯಾದಿ....ಇಂಥವರಿಂದ 
 ನೊಂದ ಮನಸ್ಸಿನಿಂದ ಈ ಮನವಿ ಪತ್ರ ಬರೆಯುತ್ತಿದ್ದೇನೆ. ತಮಗೆ ಬಿಡುವಿಲ್ಲದ 
 ಕಾರಣ ಈ ಲಿಖಿತ ಮನವಿ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಪ್ಯಾರಾ: ಕಿಷ್ಕೆ೦ಧೆ 
 ಯಲ್ಲಿ ಈ ಕೆಲ ಸಮಯದಿಂದ ಆಗಿರುವ ಘಟನಾವಳಿಯನ್ನು ಹೀಗೆ ನಿರೂಪಿಸಬೇಕು. 
 ಪ್ಯಾರಾ ಒಂದು (ಅಂಕೆಯಲ್ಲಿ) : ಕಿಷ್ಕಿ೦ಧೆಯಲ್ಲಿ ಮಹಾಚುನಾವಣೆಯಲ್ಲಿ ನಮ್ಮ ಪಕ್ಷ 
 ಗಳಿಸಿದ ಪ್ರಚಂಡ ವಿಜಯ. ತಮ್ಮ ಆಶೀರ್ವಾದವೂ ನನ್ನ ಅಸಂಖ್ಯ ಹಿಂಬಾಲಕರೆ
 ಅವಿಶ್ರಾ೦ತ ದುಡಿಮೆಯೂ ಅಂಥ ವಿಜಯವನ್ನು ಸಾಧ್ಯಗೊಳಿಸಿದುವು, ಪ್ಯಾರಾ 
 ಎರಡು : ನಾಯಿಕೆಯಾಗಿ ನನ್ನ ಸರ್ವಾನುತದ ಆಯ್ಕೆ, ಪ್ಯಾರಾ ಮೂರು : ಸಂಪುಟದ 
 ರಚನೆ, ಪ್ಯಾರಾ ನಾಲ್ಕು : ಕಿಷ್ಕಿ೦ಧೆಯ ಸರ್ವಾ೦ಗೀಣ ಉನ್ನತಿಗಾಗಿ ಸೌದಾమిని 
 ಪ್ರಣಾಳಿಕೆಯನ್ನು ರೂಪಿಸಿದ್ದು. ಪ್ಯಾರಾ ರಾಷ್ಟ್ರೀಯ ಭಾವೈಕ್ಯ.... ಮತೀಯ 
 ಸೌಹಾರ್ದ.... ಹಿಂದುಳಿದವರ ಉನ್ನತಿಗಾಗಿ ಕರೆ.... ಲಾಭ ಬಡಕರನ್ನೂ ಕಳ್ಳ ಸಂತೆ 
 ಯವರನ್ನೂ ಬಗ್ಗು ಬಡಿಯುವ ಆಶ್ವಾಸನೆ.... ನಿಮ್ಮಲ್ಲಿ ಸೌದಾಮಿನಿ ಪ್ರಣಾಳಿಕೆಯ 
 ಪ್ರತಿ ಇದೆ ಅಲ್ಲವೆ? (ಫೆರ್ನಾಂಡೀಸ್ : “ಇದೆ") ಅದರಿಂದ ವಾಕ್ಯಗಳನ್ನು ಎತ್ತಿ 
 ಕೊಳ್ಳಿ. ಪ್ಯಾರಾ : ಬಜೆಟ್ ಅಧಿವೇಶನ. ಪ್ಯಾರಾ: ಕೊರತೆಯದಾದರೂ ಪ್ರಗತಿ 
 ಪರವಾದ ಮುಂಗಡ ಪತ್ರ. ಪ್ಯಾರಾ: ಪಕ್ಷದ ಕಾರ್ಯಮಾಡದೆ ಬರಿಯ ಅಧಿಕಾರ
 ವನ್ನು ಕೆಲವರು ಬಯಸಿದರು. ನಾವು ಇಡಿಯ ರಾಷ್ಟ್ರದ ಪಕ್ಷಕ್ಕಾಗಿ : నిధి
 ಸಂಗ್ರಹಿಸಿ ಪ್ರತಿ ತಿಂಗಳೂ ಸಂದಾಯ ಮಾಡುತ್ತಿರುವುದು ತಮಗೆ ತಿಳಿದಿದ್ದೆ, ಪ್ಯಾರಾ: 
 ಮನುಷ್ಯ ಸಹಜವಾದ ದುರಾಶೆಯಿಂದ ಕೆಲ ಮಂತ್ರಿಗಳಿಂದ ಕರ್ತವ್ಯಲೋಪ ನಡೆ 
 ಯಿತು. ಸ್ವ೦ತಕ್ಕಾಗಿ ಹಣ ಸಂಗ್ರಹಿಸುವುದು: ತಮ್ಮ ಬೆಂಬಲಿಗರ ಬಣ ಕಟ್ಟುವುದು 
 ಇಂಥ ಮಾಮೂಲೀ ಚಿಲ್ಲರೆ ಕೆಲಸಗಳು ಶುರುವಾದುವು. ವಿಶ್ವಂಭರ ಎಂಬ ಅತ್ಯಂತ 
 ಮಹತ್ವಕಾ೦ಕ್ಷಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ. ಪ್ಯಾರಾ: ವಿಧಾನ ಸಭಾಪತಿ 
 ಲಕ್ಷ್ಮೀಪತಿಗೆ ಆಮಿಷ ಒಡ್ಡಿದ.... ಬೇಜಾರು... ಪರಶುರಾಮ್ ನಿನಗೆ ಗೊತ್ತಲ್ಲಪ್ಪ 
 ಈ ದಾರುಣ ಕಥೆ, ಯಾವ ರಂಜನೆಯೂ ಇಲ್ಲದೆ ನೇರ ಪದಗಳಲ್ಲಿ ಭಿನ್ನಮತೀಯ 
 ರೆಂದು ಕರೆದುಕೊಂಡಿರುವ ಸ್ವಾರ್ಥಿಗಳ ಚಟುವಟಿಕೆಯ ವಿಷಯ ಬರೆ. ಅದಾದ 
 ಮೇಲೆ, ಜಲವಿದ್ಯುತ್ ಯೋಜನೆ, ಕೈಗಾರಿಕೋದ್ಯಮಗಳ ಸ್ಥಾಪನೆ, ನೀರಾವರಿ ಈ
 ದಿಕ್ಕಿನಲ್ಲಿ ನಡೆದಿರುವ ಕೆಲಸಗಳನ್ನು ವಿವರವಾಗಿ ತಿಳಿಸು, ಪ್ಯಾರಾ: ಅಂತ್ಯದಲ್ಲಿ :