ಪುಟ:ಮಿಂಚು.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

200 మింಚು “ಮಾಡ್ತೇನೆ." “ಈ ವರ್ಷಾಂತ್ಯದೊಳಗೆ ನಿಮ್ಮ ಕಿಷ್ಕಿ೦ಧಾ ಯಾತ್ರೆಯ ಯೋಜನೆ ರೂಪಿಸಿ ದ್ದೇನೆ: ಕಲ್ಯಾಣನಗರದ ಹೊಸ ಸ್ವಾಮಿಜಿ ನಿಮ್ಮ ದರ್ಶನಕ್ಕೆ ಬರ್ತಾರೆ. ಕಿಷ್ಕಿ೦ಧೆ ಜನರ ಕಾಣಿಕೆ ಕಳಿಸ್ತಾರೆ. ದಯವಿಟ್ಟ ಸ್ವೀಕರಿಸಿ, ಅನುಗ್ರಹಿಸಿ. ನಿನಗೆ ಒಳ್ಳೇ ದಾಗಲಿ_ಕೆಡಕಾಗದಿರಲಿ_ಅ೦ತ ಆಶೀರ್ವದಿಸಿ, ಬಾಬಾಜಿ." “ನಿನಗೆ ಒಳ್ಳೇದಾಗಲಿ-ಕೆಡುಕಾಗದಿರಲಿ.”

 ಫೋನ್ ಮಾತುಕತೆ ಕಡಿಯಿತು. ಹೇಳಬೇಕಾದ್ದು ಬಾಬಾಜಿಗೆ ಕೇಳಿಸಿದೆ ಎಂದು ಮುಖ್ಯಮಂತ್ರಿಗೆ ಸ್ವಲ್ಪ ಸಮಾಧಾನ.
         *                 *              *

ಅಂಗರಕ್ಷಕರಾದ ರಾಮಧನ್ ಬೋಲಾನಾಥ್ ಬೆಳಗಾಗುವುದರೊಳಗೆ ಬಂದರು. ಕುಟೀರಕ್ಕೆ ಬಂದ ವಿಕಾಸ್ ನನು ಅವರು ತಡೆದರು, ಆ ಹೊತ್ತಿಗೆ ಸರಿಯಾಗಿ ಪರಶುರಾಮ ಹೊರಗೆ ಬಂದುದರಿಂದ ಸಮಸ್ಯೆ ಬಗೆಹರಿಯಿತು. ಈ ಮುಂಜಾನೆಯೂ ಯೋಗಾಸನ ಮಾಡದೆ ಮೇಲಂಗಿಯಲ್ಲೇ ಇದ್ದ ಸೌದಾಮಿನಿಯ ಕೊಠಡಿಗೆ ವಿಕಾಸ ಬಂದ. ಕೈಯಲ್ಲಿದ್ದ ಪತ್ರಿಕೆ ತೆರೆದು ಎರಡು ಕಾಲಮುಗಳ ಅಗಲಕ್ಕೆ ವಿಸ್ತರಿಸಿದ್ದ ಲೇಖನವನ್ನು ತೋರಿಸಿದ. 'ವಿಶೇಷ ಪ್ರತಿನಿಧಿ ಯಿಂದ' 'ಬರೆದು ಬಂದದು' ಕಲ್ಯಾಣನಗರ. ಎರಡು ದಿನ ಹಿಂದಿನ ದಿನಾಂಕ. ವಿಕಾಸನೆಂದ : “ಕಾಫಿ ಕುಡೀತೇನೆ ಮಾತಾಜಿ. ಕಲ್ಯಾಣನಗರದ ಬದಲು ದಿಲ್ಲಿ ಅಂತ ಇದ್ದಿ ದ್ದರೆ, ಇಷ್ಟು ಹೊತ್ತಿಗೆ ಇಲ್ಲಿ ಸುದ್ದಿಗಾರರ ಗುಂಪು ನೆರೆದು, ಪೋಲೀಸರ ನೆರವು ಬೇಕಾಗಿತ್ತು. ಇನ್ನೇನು ಓಕೆ ಕೊಡಬೇಕು ಎನ್ನುವಾಗ ಇದು ಹೊಳೆಯಿತು, ತಿದ್ದು ಪಡಿ ಸಾಧ್ಯವಾಯಿತು." ಕಾಫಿ ಬ೦ತು. ಪರಶುರಾಮ ಬ೦ದ. ಸಂಜ್ಞೆ ಮಾಡಿದೊಡನೆ ತನ್ನ ಕೊಠಡಿ ಯಿಂದ ಒಂದು ಬಿಳಿ ಹಾಳೆಯ ಪ್ಯಾಕೆಟ್ ತಂದು ವಿಕಾಸನ ಕೈಗಿತ್ತ. “ಥ್ಯಾ೦ಕ್ಯೂ. ಸಂಜೆ ಹೊರಡ್ತೀರಿ, ಅಲ್ಲವ ? ನೀವು ಗೆಲ್ತೀರಿ, ಸಂದೇಹ ಬೇಡ.” ಲೇಖನದ ಶೀರ್ಷಿಕೆ ಹೀಗಿತ್ತು : 'ಕಿಷ್ಕಿಂಧೆಯಲ್ಲಿ ಐಕ್ಯ ಭಂಜಕರ ಪರಾಭವ ಶತಸ್ಸಿದ್ಧ , 'ಎರಡನೇ ಸಾలు : ' ಸೌದಾಮಿನಿ ಸವಾಲು. " ಮುಖ್ಯಮಂತ್ರಿ ವಿಕಾಸನ ಕೈಕುಲುಕಿ “ಥ್ಯಾ೦ಕ್ಯೂ ಹೇಳಬೇಕಾದವಳು ನಾನು" ಎ೦ದಳು.

               *                *                   *