ಪುಟ:ಮಿಂಚು.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿ೦ಚು 201 ಫೆರ್ನಾಂಡೀಸ್ ಪತ್ರಿಕೆಗಳೊಡನೆ ಬಂದ. ಸಿತಾರಾ ಅವನ ಜತೆಯಲ್ಲೇ ಬಂದಿಳಿ ದಳು. ಪರಶುರಾಮನಿಂದ ವಿವರ ತಿಳಿದು ಫೆರ್ನಾಂಡೀಸ್ ತೃಪ್ತನಾದ. ಮುಖ್ಯ ಮಂತ್ರಿಯನ್ನು ವಿಮಾನ ಹತ್ತಿಸಿ, ವಿಕಾಸನನ್ನು ಕಾಣಬೇಕು ಎಂದುಕೊಂಡ. ಫೆರ್ನಾಂಡೀಸ್ ಮತ್ತು ಸಿತಾರಾ ತಮ್ಮ ಅರ್ಜಿಗಳನ್ನು ರಾತ್ರಿಯೇ ಬೇರೆ ಕಡೆ ಟೈಪ್ ಮಾಡಿಸಿ ಸಿದ್ಧಗೊಳಿಸಿ ತಂದಿದ್ದರು. ನಿಧಾನವಾಗಿ ಸ್ನಾನ ಉಪಾಹಾರ ಮುಗಿಸಿದ ಸೌದಾಮಿನಿ ತನ್ನ ಕೊಠಡಿಯಲ್ಲಿ ದ್ದಾಗ ಪರಶುರಾಮ ರಾಯಭಾರಿಯಾದ: “ಸಿತಾರಾ ಫೆರ್ನಾಂಡೀಸರು ತಮ್ಮ ಜತೆ ಎರಡು ನಿಮಿಷ-" “ಬರಲಿ.” ಎರಡು ಅರ್ಜಿಗಳು, ಮುಂದಿಟ್ಟ ಹೊರಹೋದರು. ಸೌದಾಮಿನಿ ಓದಿ ದಳು. ಮರುಮಾತಿಲ್ಲದೆ, ಪೆನ್ ಕೊಡುವಂತೆ ಸನ್ನೆ ಮಾಡಿದರು. ಪರಶುರಾಮ ಪೆನ್ ಮುಂದಕ್ಕೆ ಚಾಚಿದೊಡನೆ, ಅದನ್ನೆತ್ತಿಕೊಂಡು, ಎರಡು ಅರ್ಜಿಗಳ ಅಂಚಿನಲ್ಲೂ ಒಪ್ಪಿಗೆ-ಮುಂದಿನ ಕ್ರಮಕ್ಕಾಗಿ ಮುಖ್ಯ ಕಾರ್ಯದರ್ಶಿಗೆ-ಎಂದು ಬರೆದು ಚಿಕ್ಕ ಸಹಿ ಹಾಕಿ, ಅರ್ಜಿಗಳನ್ನು ಪರಶುರಾಮನಿಗೆ ಕೊಟ್ಟಳು. ಆತ ಮತ್ತೆ ಕಾಣಿಸಿದಾಗ, “ಖುಶಿಯಿಂದ ಒಬ್ಬರನ್ನೊಬ್ಬರು ತಬ್ಬಿಕೊಂಡು ಕುಣೀತಿದಾರೊ ?" ಎ೦ದು ಸೌದಾಮಿನಿ ಸರಸೋಕ್ತಿಯಾಡಿದಳು. ಜವಾನ ತಾನೂ ಏನಾದರೂ ಕೇಳಬೇಕಾಗಿತ್ತೇನೊ ಎಂದು ಯೋಚಿಸಲೆತ್ನಿಸಿ, ಅರ್ಥವಾಗದೆ, ತಲೆ ತುರಿಸಿಕೊ೦ಡ. ಫೋನ್ ఒಮ್ಮೆ ಸದ್ಧು ಮಾಡಿತು. ಕಲ್ಯಾಣನಗರದಿಂದ ಚೌಗುಲೆ, ಮುಖ್ಯ ಮಂತ್ರಿಯೇ ಮಾತನಾಡಿದಳು. “ನಮಸ್ತೆ, ಮಾತಾಜಿ." “ನಮಸ್ತೆ ಚೌಗುಲೆ ಸಾಹೆಬ್. ಖೀ ಖబరా ?" “ವಿಶ್ವಂಭರ ಇದೀಗ ಪತ್ರಿಕಾಗೋಷ್ಠಿಯಲ್ಲಿ ಅವಿಶ್ವಾಸ ಸೂಚನೆಗೆ ಎಪ್ಪತ್ತೆ ಮೂರು ಸಹಿ ಸಂಗ್ರಹವಾಗಿದೆ ಅಂತ ಹೇಳಿದ.” “ಹೇಳಲಿ. ಆ ಎಪ್ಪತ್ತಮೂರರಲ್ಲಿ ಮೂವತ್ತೇಳು ಜನ ಸಹಿ ವಾಪಸು ತಗೊಳ್ತಾರೆ. ಪ್ರಧಾನಿ ಖಚಿತ నిలుವು ತಳೆದಿದ್ದಾರೆ. ಪಕ್ಷವೂ ಅಷ್ತೆ నిಶ್ಚಿ೦ತೆ ಯಿ೦ದಿರಿ." “ಬೇಗನೆ ಬನ್ನಿ.” “ಇವತ್ತು ರಾತ್ರೆಯೇ ಅಲ್ಲಿರುತ್ತೆನೆ. ಏರ್ ಪೋರ್ಟಿಗೆ ಯಾರೂ ಬರೋದು ಬೇಡ, ಕಾರು ಕಳಿಸಿ, ಸಾಕು."

                 *                   *                     *