ಪುಟ:ಮಿಂಚು.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

203



                                  ೨೧

ವಿಮಾನ ದಿಲ್ಲಿ ಬಿಟುದು ಒಂದು ಗಂಟೆ ತಡವಾಗಿ..ಕಲ್ಯಾಣನಗರದಲ್ಲಿಳಿದುದೂ ಹೆಚ್ಚು ಕಡಮೆ ಅಷ್ಟೇ ತಡವಾಗಿ. ನಿವಾಸ ತಲಪಿದೊಡನೆ ಸೌದಾಮಿನಿ ಸ್ಥಾನಮಾಡಿ, ದಂತೇಶ್ವರಿಯ ಎದುರು ನಿ೦ತು, ಕೈ ಜೋಡಿಸಿ, ಕಣ್ಣು ಮುಚ್ಚಿ ಪ್ರಾರ್ಥಿಸಿದಳು : “ಉಪಾಸಕಿಯನ್ನು ಕೈಬಿಡಬೇಡವಮ್ಮ.” ಪರಶುರಾಮ ಶಾಸಕರ ಭವನದೊಡನೆ ಸಂಪರ್ಕ ಬೆಳೆಸಿದ: ನೂರಿಪ್ಪತ್ತು ಮಂದಿ ಬಂದಿದ್ದರು. ಅವರಲ್ಲಿ ಅರ್ಧದಷ್ಟು ಜನ ಕೊಠಡಿಗೆ ಬೀಗ ತಗಲಿಸಿ ಅಲ್ಲಿಗೆ ಇಲ್ಲಿಗೆ ಹೋಗಿದ್ದರು. ಅವರಿಗೆ, ಮಂತ್ರಿಗಳಿಗೆ, ಕಲ್ಯಾಣನಗರದ ನಿವಾಸಿಗಳಾದ ಶಾಸಕಪರಿಗೆ ತುರ್ತು ಆಹ್ವಾನ ಬೆಳಗ್ಗೆ ಮುಖ್ಯಮಂತ್ರಿಯ ನಿವಾಸಕ್ಕೆ ಉಪಾಹಾರಕ್ಕೆ ಬರಲು. ನೃಪತುಂಗ ಹೋಟೆಲಿಗೆ ತಿಳಿಸಿದ್ದೂ ಆಯಿತು. ವಿದ್ಯಾಧರ ಮನೆಯಲ್ಲಿದ್ದ “ನಮಸ್ಕಾರ ಮಾತಾಜಿ.” “ಎಷ್ಟು ಸ್ಕೋರು ?” - “ಸಂಪುಟದ ಆರು ಜನರದೂ ಸೇರಿಸಿ ಇವತ್ತು ಸಂಜೆವರೆಗೆ ನನ್ನ ಹಾಳೆಗಳಲ್ಲಿ ಮೂವತ್ತಾರು." “ಬೆಳಗ್ಗೆ ಉಪಾಹಾರ ಮುಗಿಯುವಾಗ ಸಂಖ್ಯೆ ಆರುವತ್ತಮೂರಾಗ್ತದೆ." “ಆಗಬಹುದು." - “ಉಳಿದ ಶಾಸಕರು ಬಂದ ತಕ್ಷಣ ಎಂಬತ್ತಮೂರು.ನೂರು ಆದಾಗ, ಸೌದಾ మిని ಸ೦ಚುರಿ ಬಾರಿಸಿದ್ರು ಅನ್ನಬಹುದು, ಅವರದೆಷ್ಟು ?” “ಬೆಳಗ್ಗೆ ಎಪ್ಪತ್ತಮನೂರು ಆಗಿತ್ತಂತೆ.” “ಹಳೇ ಸುದ್ದಿ. ಅದು ನನಗೆ ದಿಲ್ಲಿಯಲ್ಲಿದ್ದಾಗಲೇ ತಿಳಿದಿತ್ತು.” “ಹಿಂದೂಸ್ಥಾನ್ ಹೆರಾಲ್ಡ್ ಲೇಖನ ಚೆನ್ನಾಗಿತ್ತು, ವಾರ್ತಾ ಇಲಾಖೆ ನಿರ್ದೇಶಕ ಅದನ್ನು ಪ್ರತಿಮಾಡಿಸಿ ಎಲ್ಲ ಶಾಸಕರಿಗೂ ಕಳಿಸ್ತಿದ್ದಾನೆ." “ಗುಡ್. ದಿಲ್ಲಿ ಅವರ ಪರ ಇಲ್ಲ. ಪ್ರಧಾನಿ ಆಶ್ವಾಸನೆ ಕೋಟ್ಟಿದ್ದಾರೆ. ಇದನ್ನು ಎಲ್ಲರಿಗೂ ತಿಳಿಸಿನಬಿಡಿ ." ....ಬೆಳಗ್ಗೆ ಕಣ್ಣು ಬಿಟ್ಟಾಗ ಸೌದಾಮಿನಿ ಕಂಡುದೇನು? ತನ್ನ ನಿವಾಸದೆದುರು