ಪುಟ:ಮಿಂಚು.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

೧೫


"ನನ್ನದರಲ್ಲಿ ಇತ್ತು, ಸೋಪು ತೀಡಿ ತೊಳೆದು ಬಿಟ್ಟಿದ್ದಾರೆ...."

ಆ ಮಾತು, ಈ ಮಾತು, ಅವರು, ಇವರು. ‍ಪುಟ್ಟವ್ವ ಅಂದುಕೊಂಡಳು. ವಯಸ್ಸಿನ ಪ್ರಭಾವ ಇರಬೇಕು; ಇವಳ ಆಲೋಚನಾಶಕ್ತಿ ಮತ್ತೆಮತ್ತೆ ಬಾಲ್ಯದತ್ತ ಯೌವನದತ್ತ ಜಾರು ಬಂಡೆಯಾಟ ಆಡುತ್ತಿರುತ್ತದೆ.

ಬೆನ್‍ಗೆ ಅನಿಸಿತ್ತು: 'ನನ್ನ ಸಾಧನೆ ಕಂಡು ಇವಳಿಗೆ ಹೊಟ್ಟೆಯುರಿ, ಎದೆ ಬಲಿಯಿತು. ಉರುಳಿಯೇ ಬಿಟ್ಟಳು. ನನ್ನ ಆಪ್ತ ಕಾರ್ಯದರ್ಶಿಯಾಗಿ ಇಲ್ಲಿಯೇ ಇರಬಹುದಾಗಿತ್ತು, ದೊಡ್ಡದಲ್ಲ, ಹೇಳಿದ್ದರಲ್ಲಿ ಕಾಲಂಶವಾದರೂ ನಿಜವಾದರೆ ಇವಳು ಸಮರ್ಥೆಯೇ ಸರಿ....'

"ಪುಟ್ಬಾ, ನಾನು ರಾತ್ರಿ ಊಟ ಬಿಟ್ಟಿದೀನಿ. ಒಂದು ಚಪಾತಿ ಮಾತ್ರ, ನಿನಗೆ ಏನು ಮಾಡಿಸೋಣ?" ‍

"ನನಗೂ ಒಂದು ಚಪಾತಿ ಸಾಕು,"

"ಮಲಗುವ ಮುನ್ನ ಒಂದು‍ ಲೋಟ ಹಾ‍ಲು ಕುಡೀತೇನೆ."

'ಹಾಲು ನನಗೂ ಇಷ್ಟ."

"ಒಂದಿಷ್ಟು ಬಾದಾಮಿ."

‍ಪುಟ್ಟವ್ವನ ಸಹನೆ ಬಿರಿಯಿತು.

"‍ಬೇಡ! ಬೇಡ! ಬೇಡ!"

"‍ಹೌದು ಪುಟ್ಟಾ,ನೀನು ನನಗಿಂತ ಚಿಕ್ಕವಳು. ನಿನಗೆ ಯಾಕೆ ಬಾದಾಮಿಯ ಅಧಿಕ ಶಕ್ತಿ?"

"ಇವತ್ತು ನನಗೆ ಆಯಾಸವಾಗಿದೆ. ಬೇರೆ ಮಾತೇನಿದ್ದರೂ ನಾಳೆ."

"ಹಾಗೇ ಆಗಲಿ, ಒಳಗೆ ಹೋಗೋಣ.‍ಜುಂಕಿ ಆಗಲೇ ದೀಪ ಹಾಕಿದ್ದಾಳೆ."

ಏಳುತ್ತ,

"ಶಿವ ಶಿವ."

"ರಾಮ್ ರಾಮ್."