ಪುಟ:ಮಿಂಚು.pdf/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

204

ಮಿಂಚು

ಬಣ್ಣ ಬಣ್ಣದ ಷಾಮಿಯಾನ, ಪೀಠೋಪಕರಣಗಳು ಬಂದಿದ್ದುವು, ನೃಪತುಂಗದ
ಒಡೆಯನಲ್ಲಿ ಅಲ್ಲಾವುದ್ದೀನನ ಅದ್ಭುತ ದೀಪ ಒಂದಿರಲೇ ಬೇಕು !
ಚುನಾವಣೆಯ ಕಾಲದಲ್ಲಿ ಕಂಡು ಬಂದ ಸಂಭ್ರಮವೇ ಈಗಲೂ !
ಶಾಸಕರು ಬರತೊಡಗಿದರು, ಮಾತಾಜಿಗೆ ಬಾಗಿ ಬಾಗಿ ನಮಿಸುತ್ತ ಬಂದವರ
ಸಂಖ್ಯೆ ನೂರಐವತ್ತನ್ನು ದಾಟಿತು, ಸೌದಾಮಿನಿಗೆ ಸೋಜಿಗ! 'ಇಷ್ಟು ಜನವೂ
ಸಹಿ ಹಾಕಬಹುದೆ?' ಊಟ ಕೌರವರಲ್ಲಿ ಪಕ್ಷ ಪಾಂಡವರಲ್ಲಿ ಥರದವರೂ ಇದ್ದರೆ?
(ಅಲ್ಲಿ ಸಲ್ಲುವವರು ಇಲ್ಲಿಯೂ ಸಲ್ಲುವರಯ್ಯ !) ನೋಡೋಣ, ಸಹಿಗಳಲ್ಲಿ ಖೋಟಾ
ಎಷ್ಟೋ ? ಸಾಚಾ ಎಷ್ಟೋ ?
ಭಿನ್ನಮತೀಯರ ಪ್ರಮುಖರು ವಿಶ್ವಂಭರ ಲಕ್ಷ್ಮೀಪತಯ್ಯ ಮತ್ತಿತರರು
ಉಪಾಹಾರಕ್ಕೆ ಬಂದಿರಲಿಲ್ಲ,
ಉಪಾಹಾರ ಮುಗಿಯುತ್ತಿದ್ದಂತೆ ಸುಂಯ್ ಸುಂಯ್ ಸುದ್ದಿ ಹಬ್ಬಿತು.
ಲಕ್ಷ್ಮೀಪತಯ್ಯನ ಮನೆ ಮುಂದಿನ ಬಯಲಿನಲ್ಲಿ ಸಂಜೆ ಟೀ ಪಾರ್ಟಿ, ಕಾಫಿಗೇ
ಪ್ರಾಧಾನ್ಯವಿದ್ದರೂ ಬಳಕೆಯ ಹೆಸರು ಟೀ ಪಾರ್ಟಿ.
ಧ್ವನಿವರ್ಧಕ ಬಂತು.
ಒಬ್ಬ ಶಾಸಕ ಎದ್ದು ನಿಂತು ಕಿರಿಚಿದ :
“ಮಾನ್ಯ ಮುಖ್ಯಮಂತ್ರಿ ಅಮ್ಮಣ್ಣಿ ! ಉದ್ದದ ಭಾಷಣ ಬೇಡಿ !”
ಸೌದಾಮಿನಿ ಕನಲಿದಳು.
“ನಾಯಕಿಯ ಮಾತು ಕೇಳುವ ತಾಳ್ಮೆ ಯಾರಿಗೆ ಇಲ್ಲವೋ ಅವರು ಇಲ್ಲಿಂದ
ಹೊರಡಬಹುದು.”
ಅವಳು ಗುಡುಗಿದೊಡನೆ ಹತ್ತಿಪ್ಪತ್ತು ಜನ ಎದ್ದು ನಡೆದೇಬಿಟ್ಟರು. ಮಾತಾ
ಜಿಯ ಶರೀರದ ಯಾವುದೋ ಕೀಲಿ ಕಟಕಟ ಎಂದಿತು. ಅವಳು ಕುಳಿತುಬಿಟ್ಟಳು.
ಅಷ್ಟಾಗಿ ಮಾತನಾಡದ ಒಬ್ಬ ಶಾಸಕ ಎದ್ದು , ವಂದಿಸಿ, ನುಡಿದ :
“ಮಾತಾಜಿ ಹೇಳಬೇಕು, ನಾವು ಕೇಳೇವಿ, ಏಳಿ ಮಾತಾಜಿ, ವಿನಯದಿಂದ
ಪ್ರಾರ್ಥಿಸ್ತೇನೆ.”
“ಹೌದು, ಹೌದು, ಹೌದು,” ಎಂದು ಪದಗಳು ಅತ್ತಿತ್ತ ಕುಂಟಬಿಲ್ಲೆ ಆಡಿದ
ಮೇಲೆ ಮುಖ್ಯಮಂತ್ರಿ ಎದ್ದಳು.
“ನನ್ನ ವಿಶ್ವಾಸದ ಶಾಸಕ ಬಂಧುಗಳೇ ! ನಿಜ ಹೇಳಬೇಕೆಂದರೆ, ಯಾಕೆ ಈ
ಗಲಿಬಿಲಿ ಅನ್ನೋದೇ ನನಗೆ ಅರ್ಥವಾಗಿಲ್ಲ. ಈ ಸಹಿ ಚಟುವಟಿಕೆ ಶುರು ಮಾಡಿ
ದವರು ಯಾರು? ಅವರು, ಈಗ ಅನ್ಯ ಮಾರ್ಗವಿಲ್ಲದೆ ನಾವೂ ಬಲಪ್ರದರ್ಶನ ಮಾಡ
ಬೇಕಾಗಿದೆ. ಅದು ದೊಡ್ಡ ಸಂಗತಿಯಲ್ಲ. ಆಳುವ ಪಕ್ಷದವರೇ ಆದ ಅವರು
ಪರಿಹಾಸ್ಯಕ್ಕೆ ಗುರಿಯಾಗ್ತಾರಲ್ಲ ಅಂತ ನನಗೆ ದುಃಖವಾಗ್ತಿದೆ. ಇದು ಕಿಡಿಗೇಡಿತನ,