ಪುಟ:ಮಿಂಚು.pdf/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

206

ಮಿಂಚು

ಲಕ್ಷ್ಮೀಪತಯ್ಯ ಅಂದರು :
“ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಮಹಾಜನತೆ ಮೆರವಣಿಗೆಯಲ್ಲಿ ರಾಜ
ಭವನಕ್ಕೆ ತೆರಳಿ ಮನವಿ ಸಲ್ಲಿಸಬೇಕು.”
“ವಿಶ್ವಂಭರನೆಂದ ;
ಅವರು ಕೇಂದ್ರಕ್ಕೆ ವರದಿ ಕಳಿಸಿಯೇ ಕಳಿಸ್ತಾರೆ. ಆದರೆ ನಮ್ಮ ಒಂದು
ನಿಯೋಗವೂ ದಿಲ್ಲಿಗೆ ಹೋಗಿ ವರಿಷ್ಠರನ್ನು ಕಾಣಬೇಕು.”
ಹತ್ತಾರು ಸ್ವರಗಳು ಕೇಳಿಸಿದುವು :
“ನೀವಿಬ್ಬರೇ ಸಾಕು, ನಾಳೆ ಸಂಜೆಯ ವಿಮಾನದಲ್ಲೇ ಹೋಗಿ,”
ಉಪಾಹಾರ ಸಭೆಯ ವಿವರವನ್ನು ಒಬ್ಬ ಬೇಹುಗಾರ ತಂದ.
“ಈ ಅಂಕೆ ಸಂಖ್ಯೆಗಳನ್ನು ನಾನು ನಂಬೋದಿಲ್ಲ, ಚಿತ್ರ ನಾಳೆ ಬದಲಾಗ್ತದೆ.
ಮೆರವಣಿಗೆ ಏನು ಮಹಾ ? ಹುಶ್ ಎಂದರೆ ಸಾಕು. ಜನ ಜಮಾಯಿಸ್ತಾರೆ.”
ಎಂದು ಸೌದಾಮಿನಿ ತಣ್ಣನೆ ನುಡಿದಳು. ಒಳಗೆ ಮಾತ್ರ ಕಾವು ಏರುತ್ತಿತ್ತು. ಅಲ್ಲಿ
ಪರಿಸರ ಕಮರುತ್ತಿತ್ತು.
ಆಪ್ತ ಕಾರ್ಯದರ್ಶಿಯನ್ನು ಕರೆದು ಅವಳೆಂದಳು :
“ಇವತ್ತು ರಾತ್ರೆ ಆ ವಿಶ್ವಂಭರನನ್ನು ಕಾಣಬೇಕು, ಪರಶು.”
ಅವರಿಗೆ ಫೋನ್ ಮಾಡ್ಲಾ ?”
“ದಿಢೀರ್ ಪ್ರತ್ಯಕ್ಷ, ಹತ್ತು ಗಂಟೆಗೆ ರಕ್ಷಣಾ ಪೋಲೀಸರೂ ಇಲ್ಲದೆ, ಅಂಗ
ರಕ್ಷಕರೂ ಇಲ್ಲದೆ, ಅಡ್ರೆಸ್ ಸರಿಯಾಗಿ ಬರೆದಿಟ್ಕೊ.”
“ಅಲ್ಲಿ ಬೇರೆಯವರು ಇದ್ದರೆ ?”
“ಶಿಬಿರ ಅಂದ್ಮೇಲೆ ಯಾರಾದರೂ ಇದ್ದೇ ಇರ್‍ತಾರೆ. ದೊಡ್ಡದಲ್ಲ.”

***

ಬಾಗಿಲು ತೆರೆದಿತ್ತು. ಶಿಬಿರವಾಗಿ ಮಾರ್ಪಟ್ಟಿದ್ದ ಮನೆ. ಸೌದಾಮಿನಿ
ಬಿರುಗಾಳಿಯಂತೆ ಶಿಬಿರಕ್ಕೆ ನುಗ್ಗಿದಳು. ನೆರೆದಿದ್ದವರು ಅವಾಕ್ಕಾದರು. ಎಲಾ !
ಹೀಗೂ ಉಂಟೆ ?
ನೆಲೆಸಿದ ಮೌನದಲ್ಲಿ ವಿಶ್ವಂಭರನೂ ಒಂದು ನಿಮಿಷ ಕಕ್ಕಾವಿಕ್ಕಿಯಾದ,
ಸಾವರಿಸಿಕೊಂಡು ಎದ್ದು ನಿಂತು ನಸು ನಕ್ಕು “ಸ್ವಾಗತ" ಅಂದ.
“ನನ್ನ ಸಹಿಯೂ ಒಂದಿರಲಿ. ಎಂಬತ್ತೊಂದಾಗ್ತದೆ, ಗಣಿತ ಪ್ರಾಧ್ಯಾಪಕರೇ."
“ಪೆನ್ ಕೊಡಲೆ ?”
“ಎಲ್ಲಿ ನಿಮ್ಮ ಸ್ಟಡೀ ತೋರಿಸಿ.”
“ಖಾಸಗಿ ಮಾತು ?”