ಪುಟ:ಮಿಂಚು.pdf/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

207

"ಹ್ಞ."
ತೆರೆ ಸರಿಸಿ ಒಳ ಕೊಠಡಿಗೆ ಪ್ರವೇಶ,
“ಒಪ್ಪ ಓರಣ ಶಿಸ್ತು ನಿಮ್ಮಿಂದ ಕಲೀಬೇಕು. ಅಭಿನಂದನೆ ಯಾರಿಗೆ ಸಲ್ಲಿಸ
ಬೇಕು ? ನಿಮಗೊ ? ಶ್ರೀಮತಿಯವರಿಗೊ ?”
“ಹೊರಗೆ ಜನ ಇದಾರೆ. ವಿಷಯಕ್ಕೆ ಬನ್ನಿ.”
“ಅಂಗೈ ಚಾಚಿ.”
ವಿಶ್ವಂಭರ ಬಲ ಅಂಗೈಯನ್ನು ಮುಂದಕ್ಕೆ ಚಾಚಿದ, ಅದಕ್ಕೆ ಸೌದಾಮಿನಿ
ತನ್ನ ಅಂಗೈಯಿಂದ ಬಡೆದಳು, ಮೆಲ್ಲನೆ
"ಇದು ವಾಗ್ದಾನ, ಸಂಪುಟವನ್ನು ಪುನರ್ ರಚಿಸ್ತೇನೆ, ನೀವು ಉಪ
ಮುಖ್ಯಮಂತ್ರಿ. ಎಲ್ಲ ತಣ್ಣಗಾದ ಮೇಲೆ ನಾನು ಸನ್ಯಾಸ ತಗೊಳ್ತೇನೆ, ಆಮೇಲೆ
ನೀವೆ__”
“ಮುಖ್ಯಮಂತ್ರಿ ! ಎಷ್ಟು ಸರಳ ! ಈಗ ಈ ಸಹಿ ಸಂಗ್ರಹ ಇತ್ಯಾದಿ
ಬಿಟ್ಬಿಡ್ಬೇಕು ಅಲ್ವೆ ?”
“ಒಪ್ಪಿಗೆ ಅನ್ನಿ.”
“Sorry, ಮಾತಾಜಿ."
“ಹಾಗಾದರೆ ನಾನು ಇಲ್ಲಿಗೆ ಬಂದೂ ಇಲ್ಲ, ನಿಮ್ಜತೆ ಮಾತಾಡಿಯೂ ಇಲ್ಲ,”
“ಸರಿ.”
ಹೊರಟ ಸೌದಾಮಿನಿಯನ್ನು ಬೀಳ್ಕೊಡಲು ವಿಶ್ವಂಭರ ಅಂಗಳಕ್ಕಿಳಿದ. ಅಲ್ಲಿ
ಅಂದ :
“ಬಾಡಿಗಾರ್ಡ್ ಇಲ್ಲದೆ ಬಂದಿದ್ದೀರಿ !”
"ಇದು ಸ್ನೇಹದ ಮನೆ ವಿಶ್ವಂಭರ, ವೈರಿ ಶಿಬಿರ ಅಲ್ಲ.”
“ದಾರಿಯಲ್ಲಿ ದುರ್ಜನರಿರ್‍ತಾರೆ. ಏನಾದರೂ ಆದರೆ ?”
“ನನ್ನ ಕೂದಲು ಕೊಂಕಿದರೂ ಸಾಕು, ಅದಕ್ಕೆ ನೀವೇ ಕಾರಣ ಅಂತ ನಾಳೆ
ಕಲ್ಯಾಣನಗರ ವಿಚಾರಿಸ್ಕೊಳ್ತದೆ.”
“ಮೆಚ್ಚಿದೆ.”
“ಮೆಚ್ಚಿದರೂ ಏನು ಪ್ರಯೋಜನ ? ಬರೀ ಮಾತಾಯಿತು, ಅಷ್ಟೆ.”
ಕಾರು ಹೊರಟಿತು. ವಿಶ್ವಂಭರನ ಮನೆಯಲ್ಲಿನ ನಗೆಯ ಭೋರ್ಗರೆತ ಕಾರನ್ನು
ಹಿಂಬಾಲಿಸಿತು.
ಕಾರಿನಲ್ಲಿ ಸೌದಾಮಿನಿ ತನ್ನ ಖಿನ್ನತೆಯನ್ನು ಮರೆಮಾಡುತ್ತ ಕೇಳಿದಳು :
“ಪರಶು, ನಾಯಕ್ ಮನೆಯ ವಿಳಾಸ ನೆನಪಿದೆಯಾ ?”
ಇದೆ. ಹಿಂದೆ ರಾಷ್ಟ್ರಪಕ್ಷದ ಕಾರ್ಯಾಲಯದಿಂದ ಅಲ್ಲಿಗೆ ಹೋಗಿದ್ದೆ.”
“ಡ್ರೈವರಿಗೆ ದಾರಿ ತೋರಿಸು..”