ಪುಟ:ಮಿಂಚು.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

మింబు 209

       “ನಾನು ನಿವಾಸಕ್ಕೆ ಬಂದರೆ ಹಾರ ಹಾಕಿ ಸ್ವಾಗತಿಸ್ತೀಯಾ ?” 
       “ಸಭಾಪತಿಗೆ ಹಾರ ಹಾಕದೆ ಇರೀನಾ? ಈಗ ಅಪ್ಪಣೆ ಕೊಡಿ.”
       “ಆಗಲಮ್ಮ, ಹಾರ್ನ್ ಒತ್ತು, ನಮ್ಮ ಮಾತಿಗೆ ಕೃತಿಗೆ ಅಡ್ಡಿಯಾಗೋದು 

ಬೇಡ ಅಂತ ದೂರ ಹೊಡ್ತೀಗಿದಾರೆ !"

        ನಾಯಕ್ ಇಳಿದರು, ಪರಶುರಾಮ ಮತ್ತು ಡ್ರೈವರ್ ಓಡಿ ಬಂದರು,

ಪರಶುರಾಮ ನಾಯಕರಿಗೆ ಗುಡ್ನನೈಟ್ ಹೇಳಿದ, ಅವನೂ ಎಣಿಸುತ್ತ ಇದ್ದ, ೭೫ ಮತ್ತು ೫=೮೦. ಇನ್ನು ಒಂದಾದರಾಯಿತು.

        “ಪರಶು, ಆ ದಂಡಪಾಣೀನ ಕಾಣಬೇಕಲ್ಲಪ್ಪ....”
        “ಸಮತಾ ಪಕ್ಷದ ಕಚೇರಿಲಿ ಕೇಳಿದರೆ ಹೇಳ್ತಾರೆ, ಕಚೇರಿ ಸನ್ನಿಧಿ ರಸ್ತೆಲಿದೆ.” 
        ಕಾರು ಅತ್ತ ಹೊರಟಿತು, ಅಲ್ಲಿ ಮರುದಿನದ ಮೆರವಣಿಗೇಲಿ ಭಾಗವಹಿಸ 

ಬೇಕೊ ಬೇಡವೊ ಎಂದು ಚರ್ಚೆ ನಡೆದಿತ್ತು, ದಂಡಪಾಣಿಯೂ ಅಲ್ಲಿದ್ದ, ಕೆಳ ಗಿಳಿದು ಬ೦ದ, ಮುಖ್ಯಮಂತ್ರಿಯ ಗುರುತು ಹಿಡಿದು, ಕಾರಿನ ಒಳ ಸೇರಿದ,

        “ಸ್ವಲ್ಪ ಮುಂದೆ ಹೋಗಿ ಆ ತಿರುವಿನಲ್ಲಿ ನಿಲ್ಲಿಸಪ್ಪ." 
        ಕಾರು ತಿರುವಿನಲ್ಲಿ ನಿ೦ತಿತು.ಸೊದಮಿನಿ ಅ೦ದಳು: 
        “ನಿಮ್ಮ ಜೀವನದಲ್ಲಿ ಇದೊ೦ದು ತಿರುವು ದಂಡಪಾಣಿ:" 
        “ನಾಯಕ್ ಬೆಂಬಲಿಸಾರಾ ?” 
        “ಓಹೋ! ಇನ್ನೂ ಕೆಲವರು ಬರಾರೆ, ನೀವು ನನಗೆ ಬೆಂಬಲ ನೀಡ್ಬೇಕು.” 
        "ಇದು ರಾಜಕೀಯ ಪ್ರಶ್ನೆ. ಕೇಂದ್ರ ಸಮಿತಿಯನ್ನು ಕೇಳಬೇಕು” 
        “ಅದೆಲ್ಲಿದೆ ?”
        “దిల్లియల్లి."
        “ಫೋನ್ ಮಾಡಿದರಾಯಿತು. ನಿಮಗೆ ಎಷ್ಟು ದುಡುಬೇಕು, ಹೇಳಿ."
        “ಫೋನ್ ಖಚಿಗಾ ?"
        “ಗೇಲಿ ಮಾಡ್ರೀರಾ ? ಹಣ ಯಾವಾಗಲೂ ಪಕ್ಷಕ್ಕೆ."
        “ಸ್ವಾನವೂ ಬೇಕು, ಹಣವೂ ಬೇಕು.'
        "......."
        “ಮಾತಾಜಿ.  ನನಗೆ ಗೊತ್ತಿದೆ. ನಿಮಗೆ ಬಹುಮತ ಸಿಗೋದು ನನ್ನ ಏಕ 

ಮತದ ಬೆ೦ಬಲದಿ೦ದಲೇ.”

        “ಹಾಗೇ ತಿಳಕೊಳ್ಳಿ, ಡಿಮಾಂಡ್ಸ್ ಏನು ?”
        “ಮುಖ್ಯಮಂತ್ರಿಯ ಸ್ವಾನ ಮತ್ತು ఒంದು ಕೋಟಿ,"
        “ಮುಖ್ಯಮಂತ್ರಿಯಾದರೆ ಲಾಠಿ ಚಾರ್ಜು, ಅಶ್ರುವಾಯು, ಗುಂಡಿನೇಟು 

ಇವೆಲ್ಲ ಪ್ರಯೋಗಿಸಬೇಕಾಗ್ರದೆ. ದುಡ್ಡೆ ಆದರೆ ?'

        “ನನಗೆ ಗೊತ್ತಿಲ್ಲ. ನಾನು ಒಬ್ಬನೇ ಮಾತುಕತೆ ನಡೆಸಲಾರೆ.”
        14