ಪುಟ:ಮಿಂಚು.pdf/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

210

ಮಿಂಚು

“ನಿಮ್ಮ ಕಾರ್ಯದರ್ಶಿಗೂ ಹೇಳಿ. ನಾಳೆ ಬೆಳಗ್ಗೆ ನನಗೆ ಫೋನ್ ಮಾಡಿದರೆ
ಸಾಕು.”
“ಹಣ ಎಷ್ಟು ಅನ್ನಲಿ ?”
“ನೀವೇ ಹೇಳಿದಿರಲ್ಲ ?”
“ಊಹೂಂ, ಎರಡು ಕೊಡ್ತಾರಂತೆ ಅನ್ತೀನಿ.”
“ಕೋಟಿ ಅನ್ನೋದರ ಕಲ್ಪನೆ ನಿಮಗಿದೆಯ ದಂಡಪಾಣಿ ?”
"ಇದರ ಸ್ಪಷ್ಟ ಕಲ್ಪನೆಯ ಆಧಾರದ ಮೇಲೆಯೇ ಸಮತಾಪಕ್ಷ ತನ್ನ ಸಿದ್ದಾಂತ
ರೂಪಿಸಿದೆ."
“ಯಾವುದಾದರೂ ನಿಗಮದ ಅಧ್ಯಕ್ಷತೆಗೆ ಒಪ್ತೀರಾ ? ಬೆಳಗ್ಗೆ ಉತ್ತರ
ತಿಳಿಸ್ತೀರಾ ? ಫೋನ್ ಮಾಡಿ, ಮರೀದೆ. ವಾಪಸು ಪಕ್ಷದ ಕಚೇರಿ ಹತ್ತಿರ
ಬಿಡೋಣವಾ ?”
“ಬೇಡ, ನಡಕೊಂಡು ಹೋಗ್ತೀನಿ. ನೀವು ಮುಂದೆ ಹೋಗಿ ಬಲಕ್ಕೆ ತಿರುಗಿ,
ಹೆದ್ದಾರಿ ಸಿಗ್ತದೆ.”

***

ಅಧ್ಯಕ್ಷತೆ ಖಾಲಿ ಇರುವ ನಿಗಮಗಳ ಪಟ್ಟಿಯ ಫೈಲು ಮುಖ್ಯಮಂತ್ರಿಯ
ಮೇಜಿನ ಮೇಲೆಯೇ ಇತ್ತು. ಹೇಳಿದ ದಿನವೇ ಪಟ್ಟಿ ತಯಾರಿಸಿ ಕಳಿಸಿರಬೇಕು....
ಏನೇ ಆಗಲಿ, ಇದೊಳ್ಳೇ ಸಿಕ್ಕುಗಂಟಾಯಿತಲ್ಲ. ಪಾರಾಗಬೇಕು. ಮೊಸಳೆಗಳಿಂದ
ಪಾರಾಗಿ ಆಚೆ ದಡ ಸೇರಬೇಕು....ನಿದ್ದೆ. ಎಲ್ಲಿಯ ನಿದ್ದೆ ? ಲೇಹ್ಯ ಸರಿ. ನಿದ್ದೆ
ಮಾತ್ರೆಯನ್ನೂ ನುಂಗಬೇಕು.