ಪುಟ:ಮಿಂಚು.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



211



೨೨

ಇನ್ನೂ ಕಲಾಣನಗರ ಸೇರಬೇಕಾಗಿದ್ದ ಶಾಸಕರಿಗೆ ರೈಲುನಿಲ್ದಾಣದಲ್ಲಿ ಬಸ್
ನಿಲ್ದಾಣದಲ್ಲಿ ಪರಿಚಿತರಿಂದ ಸ್ವಾಗತ ದೊರೆಯಿತು. ಆದರೆ ಹೆಚ್ಚಿನವರು ಮುಖ್ಯ
ಮಂತ್ರಿಯ ನಿವಾಸಕ್ಕೆ ಕಾರು ಹತ್ತಿದರು. ಆದರೂ ವಿಶ್ವಂಭರನ ಪಟ್ಟಿಯ ಎಂಭತ್ತು
ಹೆಸರುಗಳಿಗೆ ಧಕ್ಕೆ ತಟ್ಟಲಿಲ್ಲ. ಕೆಲವರು ತಂತಿ ಮೂಲಕ ಸಹಿ ಕಳಿಸಿದ್ದರು, ಕೆಲವರು
ಫೋನ್ ಮೂಲಕ, ಮತ್ತೆ ಕೆಲವರದು ಎರಡೆರಡು ಸಹಿಗಳಿದ್ದುವು.
ವಿದ್ಯಾಧರನ ಪಟ್ಟಿಯಲ್ಲೂ ಅದೇ ಅವಸ್ಥೆ. ಅಂತೂ ಪ್ರಚಾರದ ಭರಾಟೆ
ಯಲ್ಲಿ ೮೦ ಮತ್ತು ೭೫ ಎಂಬ ಸಂಖ್ಯೆಗಳು ಬಾವುಟ ಹಾರಿಸಿದ್ದುವು.
ಇದು ಇಂದ್ರಜಾಲ ಎನಿಸಿತು ಸೌದಾಮಿನಿಗೆ.
ಐ ಜಿ ಟಿ ಸಲಹೆ ಕೇಳಲು ಬಂದ,
“ಇವತ್ತು ಮೆರವಣಿಗೆ, ಏನು ಮಾಡೋಣ ?"
ನಾಲಗೆಯ ತುದಿಯವರೆಗೂ ಬ೦ತು ಸಲಹೆ : ಗುಂಡು ಹಾರಿಸಬೇಕು, ಗುರಿ
ಇಟ್ಟು:ಲಕ್ಷ್ಮೀಪತಿ ಮತ್ತು ವಿಶ್ವಂಭರ ಉರುಳಬೇಕು;ಅದು ಆಕಸ್ಮಿಕ ಮರಣ
ಎಂದು ಜಾಹೀರು ಮಾಡಬೇಕು:ಸಂಜೆ ಬಹಿರಂಗ ಶೋಕಸಭೆ : ಸತ್ತವರ ಗುಣ
ಗಾನ ಮಾಡಿ ತಾನು ಅಳಬೇಕು, ಅಳಬೇಕು.. (ಕರುಣಾಮಯಿ, ಮಾತಾಜಿ!) ನಾಲ
ಗೆಯ ತುದಿತನಕ ಬಂದರೂ ಸಲಹೆ ಧ್ವನಿ ಪಡೆಯಲಿಲ್ಲ.
“ಪರಿಸ್ಥಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?”
“ಮುಂಜಾಗರೂಕತಾ ಕ್ರಮವಾಗಿ ಐನೂರು ಜನರನ್ನು ಬಂಧಿಸಿದ್ದೇವೆ.
ಮಧಾಹ್ನ ಊಟ ಕೊಟ್ಟ ಬಿಟ್ಟುಬಿಡ್ತೇವೆ. ನಿನ್ನೆ ರಾತ್ರೆ ತಮ್ಮ ಅನುಮತಿ ಪಡೆಯ
ಬೇಕೂಂತ ಯತ್ನಿಸಿದೆ: ತಾವು ಸಿಗಲಿಲ್ಲ.”
ಹೌದು.ಸ್ವಲ್ಪ busy ಯಾಗಿದ್ದೆ.ನೀವು ಕೈಕೊಂಡಿರೋ ಕ್ರಮಕ್ಕೆ ನನ್ನ
ಸಮ್ಮತಿ ಇದೆ. ಸೌದಾಮಿನಿಯದು ಪೋಲೀಸ್ ರಾಜ್ಯ ಅನ್ನೋ ದೂಷಣೆ ಬರ
ಬಾರದು. ಹಾಗೆ ವರ್ತಿಸಿ. ಮೆರವಣಿಗೆಯನ್ನು ನಿಷೇಧಿಸೋದು ಬೇಡ. ರಾಜಭವ
ನದ ತಿರುವಿನಲ್ಲಿ ಮೆರವಣಿಗೆ ನಿಲ್ಲಲಿ. ವಿಶ್ವಂಭರ ಮತ್ತು ಲಕ್ಷ್ಮೀಪತಿ ಇಬ್ಬರ
ನಿಯೋಗ ರಾಜ್ಯಪಾಲರನ್ನು ಭೇಟಿಯಾಗಲಿ. ಇಲ್ಲಿಂದ ನೇರವಾಗಿ ರಾಜ್ಯಪಾಲ
ರಲ್ಲಿಗೆ ಹೋಗಿ ಮನುಷ್ಯ ಏಳೋದು ತಡ, ಒಂದರ್ಧ ಗಂಟೆ ಕಾಯಬೇಕಾದೀತು
ಕಾರ್ಯಾಚರಣೆಯ ಯೋಜನೆ ತಿಳಿಸಿಬಿಡಿ."