ಪುಟ:ಮಿಂಚು.pdf/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



212

ಮಿಂಚು

ಆ ಬೆಳಗ್ಗಿನ 'ಕಿಷ್ಕಿಂಧಾವಾಣಿ' ಮುಖಪುಟದಲ್ಲಿ ಅಂಗದ ವಿರಚಿತ ವ್ಯಂಗ್ಯಚಿತ್ರ
ಒಂದಿತ್ತು.ದೊಡ್ಡ ಆಕಾರದ್ದು. ಮಧ್ಯದಲ್ಲಿ ಗಂಡುಡುಗೆಯ ಸೌದಾಮಿನಿ ಮುಖದ
ಮಹಾವಾಧ. ಸುತ್ತಲೂ ವೃತ್ತ ರಚಿಸಿದ್ದರು, ಸಂಪುಟದ ಉಳಿದ ಆರು ಮಂತ್ರಿಗಳು
ಸೀರೆಯುಟ್ಟುಕೊಂಡು. ಚಿತ್ರದ ಕೆಳಗೆ ಬರೆದಿತ್ತು:'ಕಿಷ್ಕಿಂಧೆ ಸಂಪುಟದ ಏಕಮಾತ್ರ
ಗಂಡಸು..' ಪರಶುರಾಮ ಮಾತಾಜಿಗೆ ತೋರಿಸಬೇಕೊ ಬೇಡವೊ ಎಂಬ ಗೊಂದಲ
ದಲ್ಲಿ ಮುಳುಗಿದ, ಸಂಪುಟದ ಏಕಮಾತ್ರ ಗಂಡಸು ಅಂದರೇನು ? ಈಗಿನ ಸ್ಥಿತಿ
ಯಲ್ಲಿ ಇದು ಅಣಕವೊ? ಪ್ರಶಂಸೆಯೊ?... ಗಂಡಸ್ತನ ಎನ್ನುವುದು ಮೆಚ್ಚುಗೆಯ
ಪದವಲ್ಲವೆ?
ಪರಶುರಾಮ ಮತ್ತೂ ಯೋಚನಾ ಮಗ್ನನಾದಂತೆ, ಮುಖ್ಯಮಂತ್ರಿಯ
ಗಂಟಲು ಕೇಳಿಸಿತು.
“ಪರಶು! ಇವತ್ತಿನ 'ಕಿಷ್ಟಿಂಧಾವಾಣಿ' ಎಲ್ಲಿ ?”
“ತಂದೆ, ಮಾತಾಜಿ."
ವ್ಯಂಗ್ಯ ಚಿತ್ರವನ್ನು ನೋಡಿ ಸೌದಾಮಿನಿಯ ಮುಖ ಅರಳಿತು. ಪರಶುರಾಮನ
ಮುಖವೂ ಅಗಲವಾಯಿತು. ಪ್ರಶಂಸೆಯೇ. ರಾಷ್ಟ್ರಪಕ್ಷದೊಳಗಿನ ಜಗಳದ ವಿಷಯ
ಆ ಸಂಚಿಕೆಯಲ್ಲೇನೂ ಇರಲಿಲ್ಲ. ಕಳೆದ ತಿಂಗಳಷ್ಟೇ 'ಕಿಷ್ಟಿಂಧಾವಾಣಿ'ಯ ಹೊಸ
ಕಟ್ಟಡಕ್ಕಾಗಿ ವಿಶಾಲ ನಿವೇಶನ ಮಂಜೂರಾಗಿತ್ತು.
ರಂಗಧಾಮನಿಂದ ಕರೆಬಂತು:
“ಮಾತಾಜಿ, ಇವತ್ತಿನ 'ಕಿಪ್ಕಿಂಧಾವಾಣಿ'ಯ ವ್ಯಂಗ್ಯ ಚಿತ್ರ ಅವಮಾನದ
ಪರಮಾವಧಿ.. ನಿಮ್ಮ ಸಂಪುಟದಲ್ಲಿ ನಾವಿರುವುದು ಸರಿಯಲ್ಲ."
“ನಾವು ಅಂದರೆ ?”
ಆರು ಜನ ಹೆಂಗಸರು,
“ರಂಗಧಾಮ್, ಬೆನ್ನಲ್ಲಿ ಇರಿಯೋ ಯೋಚನೇನೊ ?”
“ಆರು ಜನರೂ ಇಲ್ಲಿಯೇ ಇದ್ದೇವೆ... ಮಾತಾಡಿ ಬಾಲಾಜಿ..”
ಒಬೊಬ್ಬರಾಗಿ ಅವರೆಲ್ಲ ಒಂದೇ ಮಾತು ಅಂದರು :
“ನನ್ನ ರಾಜಿನಾಮೆ ಸ್ವೀಕರಿಸಿ!”
“ರಂಗಧಾಮ್, ಅವರಿಗೆಲ್ಲ ಹೇಳಪ್ಪ, ಆ ವ್ಯಂಗ್ಯಚಿತ್ರ ನೋಡಿ ನಿಮಗೆಷ್ಟು
ಬೇಸರವಾಗಿದೆಯೊ ನನಗೂ ಅಷ್ಟೇ ಆಗಿದೆ, ಆ ಪತ್ರಿಕಾ ಮಾಲಿಕ ಕ್ಷಮೆಯಾಚಿಸೋ
ಹಾಗೆ ಮಾಡೋಣ. ಸಹೋದ್ಯೋಗಿಗಳಿಗೆಲ್ಲ ತಿಳಿಸಪ್ಪ, ನಿಮಗೆ ಬೇಡವಾದರೆ
ನಾನು ಹೋಗ್ತೀನಿ. ಆ ವಿಷಯ ಬೇರೆ. ಆದರೆ ಒಂದು ವ್ಯಂಗ್ಯ ಚಿತ್ರದಿಂದಾಗಿ
ಕಿಷ್ಕಿಂಧಾ ಮಂತ್ರಿಮಂಡಲ ರಾಜಿನಾಮೆ ಕೊಟ್ಟಿತೂಂತ ರಾಷ್ಟ ನಗೋದಿಲ್ಲವೆ? ದಿಲ್ಲಿ
ಏನು ಹೇಳಿತು ? ಜನತೆ ಏನಂದೀತು ?'
ತುಸು ಕಾಲದ ನೀರವತೆಯ ಬಳಿಕ ರಂಗಧಾಮನ ಸ್ವರ ಬಂತು.