ಪುಟ:ಮಿಂಚು.pdf/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

213

“ನಮಗೆ ಬಹುಮತ ಇದೇಂತ ನಾವು ಸಾಬೀತು ಮಾಡಲೇಬೇಕು. ರಾಷ್ಟ್ರ
ಸಭೆಯ ಶಾಸಕಾಂಗ ಪಕ್ಷದ ತುರ್ತು ಸಭೆ ಕರೀರಿ.”
“ಕರೆಯೋಣ. ಆ ವಿಶ್ವಂಭರ-ಲಕ್ಷ್ಮೀಪತಿ ಪ್ರಕೃತಿಗಳು ಇವತ್ತು ದಿಲ್ಲಿಗೆ
ಹೋಗ್ತಾರೆ, ನಾಳೆಯೇ ವಾಪಸಾದಾರು. 'ಮನೆ ಮುರುಕರಾಗ್ಬೇಡಿ' ಅಂತ ಪ್ರಧಾನಿ
ಅವರಿಗೆ ಛೀಮಾರಿ ಹಾಕಿದರೆ ತೆಪ್ಪಗಾಗ್ತಾರೆ.”
“ಆದರೂ ತುರ್ತುಸಭೆಗೆ ನೋಟೀಸು ಕೊಟ್ಬಿಡಿ, ವಿಶ್ವಂಭರ__ಲಕ್ಷ್ಮೀಪತಿ
ಬೇಸ್ತು ಬಿದ್ದರೆ ನಾವು ವಿಜಯೋತ್ಸವ ಆಚರಿಸೋಣ.”
“ಅಗಲಿ ರಂಗಧಾಮ್, ನಿನ್ನ ಆಶೀರ್ವಾದ ಬಲದಿಂದ ನಮಗೇ ಜಯ
ವಾಗುತ್ತೆ.”
“ಅಷ್ಟರವರೆಗೆ ಪ್ರತಿಪಕ್ಷದವರ ಜತೆ ಸಮ್ಮಿಶ್ರ ಸರ್ಕಾರದ ಮಾತು ಆಡ್ಬೇಡಿ !”
ಇದೆಲ್ಲ ವಿಶ್ವಂಭರನ ಕಾರಖಾನೆಯಲ್ಲಿ ತಯಾರಾದ ಸುಳ್ಳಿನ ಪಟಾಕಿ, ನೀವು
ನಂಬಬಾರದು.”
“ಹೋಗಲಿ ಬಿಡಿ, ಸೆರಗಿನಲ್ಲಿ ಕೆಂಡ ಕಟ್ಕೊಳ್ಳೋಕಾಗುತ್ತ ? ಸತ್ಯ ಹೊರಗೆ
ಬಂದೇ ಬರುತ್ತೆ."
...ಸಮತಾಪಕ್ಷದ ಕಾರ್ಯದರ್ಶಿ ಮಲ್ಲೇಶ್‌ನಿಂದ ಫೋನ್ ಬಂತು,
“ಚೀಫ್ ಮಿನಿಸ್ಟರಾ? ನಿನ್ನೆ ರಾತ್ರಿ ದಂಡಪಾಣೀನ ಕಂಡು ವ್ಯವಹಾರ ಕುದುರಿ
ಸೋಕೆ ನೋಡಿದಿರಂತೆ. ಇನ್ನೂ ರಾಜಕೀಯ ತಿಳೀದೆ ನಿಮಗೆ ? ನಮ್ಮ ಪಕ್ಷದಲ್ಲಿ
ಕಾರ್ಯದರ್ಶಿ ಮುಖ್ಯ.”
“ನಿಮ್ಮ ಕಚೇರಿಗೆ ಬಂದದ್ದು, ದಂಡಪಾಣಿ ಸಿಕ್ಕಿದರು. ನಿಮಗೆ ವರದಿ
ಕೊಟ್ಟೇ ಕೊಡ್ತಾರೆ ಅಂತ ಅವರಿಗೆ ವಿಷಯ ತಿಳಿಸ್ದೆ. ಇಬ್ಬರೂ ಬನ್ನಿ, ಮಾತಾ
ಡೋಣ.”
“ಅದಕ್ಕೆ ಕೇಂದ್ರ ಸಮಿತಿಯ ಅನುಮತಿ ಬೇಕು.”
“ನಮಗೆ ಬಹುಮತ ಇಲ್ಲಾಂತ ನಾನು ಈ ಮಾತುಕತೆ ನಡೆಸ್ತಿಲ್ಲ, ಎಲ್ಲ
ಪಕ್ಷಗಳೂ ಇರುವ ರಾಷ್ಟ್ರೀಯ ಸಂಯುಕ್ತರಂಗ ನನ್ನ ಕನಸು ಮತ್ತು ಸಿದ್ಧಾಂತ.
ಇವತ್ತು ಕಿಷ್ಕಿಂಧೆಯಲ್ಲಿ ಆದರೆ, ನಾಳೆ ರಾಷ್ಟ್ರವಾಪ್ತಿಯಲ್ಲಿ ಆಗ್ತದೆ... ಅಂದ ಹಾಗೆ
ಮೆರವಣಿಗೆಗೆ ನಿಮ್ಮವರೂ ಸೇರಾರ ?”
"ಇಲ್ಲ. ಬೇಡ ಅಂತ ತೀರ್ಮಾನಿಸಿದ್ದೇವೆ.”
“ನಿಮ್ಮದು ಸಮರ್ಪಿತ ಬದುಕು. ಸಾರಾಸಾರಾ ವಿಚಾರ ಮಾಡಿಯೇ ನಾನು
ಹೇಳಿದ್ದರ ಬಗ್ಗೆ ನಿರ್ಧಾರ ಕೈಗೊಳ್ತೀರಿ ಅಂತ ನಂಬಿದ್ದೇನೆ.”
“ಮುಂದೆ ನಾನೇ ತಮಗೆ ಫೋನ್ ಮಾಡೇನೆ.”
....ರಿಸೀವರ್ ಇಳ್ಕೊಡನೆ ಮತ್ತೆ ಫೋನ್ ಜೀವ ತಳೆಯಿತು,
“ಎತ್ತು ಪರಶುರಾಮ್, ನಾಯಕ್ ಇರಬೇಕು,” ಎಂದಳು ಸೌದಾಮಿನಿ,