ಪುಟ:ಮಿಂಚು.pdf/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 216 ಮಿಂಚು

       ಕುಳಿತಲ್ಲಿಂದ ಮಿಸುಕಲಿಲ್ಲ.  ಫ಼ೈಲುಗಳನ್ನು   ಒಂದೊಂದಾಗಿ ನೋಡುತ್ತ  ಟಿಪ್ಪಣಿ
       ಬರೆಯುತ್ತಲೋ  ಸಹಿಹಾಕುತ್ತಲೋ   ಕುಳಿತಳು.  ಮುರ್ದಾಬಾದ್ ಹತ್ತಿರ ಬಂದಾಗ
       ತನ್ನಷ್ಟಕ್ಕೆ ನಕ್ಕಳು.
            ಮೆರವಣಿಗೆಯಲ್ಲಿದ್ದ  ವಿಶ್ವಂಭರನೊಮ್ಮೆ  ಆ ಕಡೆ ನೋಡಿದ.  ತೆರೆದ  ಕಿಟಿಕಿ
       ಗಳಿಗೆ ಪರದೆ ಅಡ್ದವಾಗಿರಲಿಲ್ಲ.  'ವಿದ್ದರೆ  ಎಲ್ಲಿ ಪೀಠ  ಮಾಯವಾದೀತೊ  ಅಂತ
       ಭದ್ರವಾಗಿ  ಕುಳಿತಿರಬೇಕು,' ಎಂದುಕೊಂಡ.
           ರಾಜಭವನದ ತಿರುವಿನಲ್ಲಿ ಮೆರವಣಿಗೆ ನಿಂತಿತು,   ಹೊರಟಾಗ ನೂರು, ದಾರಿ
       ಯಲ್ಲಿ ಸೇರಿಕೊಂಡವರು ನೂರಿನ್ನೂರು.  ಕಾಫ಼ಿ ತಿಂಡಿಗಾಗಿ ಬಂದ ಕಿರಿಯರು ನೂರು
       ಮಂದಿ.  ಬಿಸಿಲು ಚುರುಕ್ ಎಂದರೂ  ಮೆರವಣಿಗೆಯ ಜನ ಜಿಂದಾಬಾದ್ ಮುರ್ದಾ
       ಬಾದ್ ನಿಲ್ಲಿಸಲಿಲ್ಲ.   ರಾಜಭವನದ   ಮಹಾದ್ವಾರದ  ಬಳಿ  ಐಜಿಪಿಂರದ  ನೆರವು
       ದೊರೆಯಿತು.     ಲಕ್ಷ್ಮೀಪತಿ_ವಿಶ್ವಂಭರ, ಅಥವಾ  ವಿಶ್ವಂಭರ_ಲಕ್ಷ್ಮೀಪತಿ,  ಒಳ
       ನಡೆದರು.ಇಬ್ಬರ ಆ ನಾಯಕತ್ವವನ್ನು ರಾಜ್ಯಪಾಲರು ಗಾಂಭೀರ್ಯದಿಂದ ಸ್ವಾಗತಿಸಿ
       ದರು, ತಮ್ಮ ಚೇಂಬರಿನಲ್ಲಿ.  ತಮಗೆ ಹತ್ತಿರದಲ್ಲಿದ್ದ ವಿಶ್ವಂಭರನಿಗೆ  "ವರದಿ ಕಳಿಸಿ
       ದ್ದೇನೆ" ಎಂದರು.   ಅದು ಹಳೆಯದು.  ಇಂದಿನ ವರದಿ  (ಜಿಂದಾಬಾದ್ ಮುರ್ದಾ
       ಬಾದ್) ಸಂಜೆ.
            "ನಿಮ್ಮ ಹಿಂಬಾಲಕರು ಬಿಸಿಲಲ್ಲಿ ಕಾಯ್ತಿದಾರೆ,   ಹೋಗಿ ಬನ್ನಿ,   ಒಳ್ಳೆಯ
       ದಾಗಲಿ,"
            __ಇಷ್ಟು ಹೇಳಿ ರಾಜ್ಯಪಾಲರು ವಿಶ್ವಂಭರನೆದಡೆಗೆ ನೋಡಿ ನಸುನಕ್ಕರು,
            ನಿಯೋಗ  ಹಿಂತಿರುಗುತ್ತಿದ್ದಂತೆ  ಘೋಷ  ತೀವ್ರವಾಯಿತು.   ಈಗ  ಜಿಂದಾ    
       ಬಾದ್ ಒಂದೇ.   ಅದೂ ಬೇರೆ ರೀತಿಯಲ್ಲಿ.
            __"ವಿಶ್ವಂಭರ ಜಿಂದಾಬಾದ್ !"
            __"ಲಕ್ಷ್ಮೀಪತಯ್ಯ ಜಿಂದಾಬಾದ್ !"
            ಮೆರವಣಿಗೆ  ಚೆದರಿತು.    ನಾಲ್ಕಾರು  ದಾರಿಗಳಲ್ಲಿ ,  ಕಿರಿಯರು  ಹತ್ತಿರದ       
        ದೊಡ್ಡ ಹೋಟೆಲನ್ನು ಹೊಕ್ಕರು,  ಶಾಲೆ ತಪ್ಪಿಸಿಕೊಂಡು ಬಂದಿದ್ದ  ಪುಟಾಣಿಗಳು
        ಕೆಲವರು ಹೊಸ ಘೋಷಣೆಗಳನ್ನು  ಕಂಠಪಾಠ ಮಾಡಿದರು,
            __"ವಿಶ್ವಂಭರ ಜಿಂದಾಬಾದ್ !"
            __"ಲಕ್ಷೀಪತಯ್ಯ ಜಿಂದಾಬಾದ್ !"
            __ಅದಲು ಬದಲು ಆಟ ಇಷ್ಟವಿದ್ದ ಕೆಲ ಹುಡುಗರು  "ವಿಶ್ವಂಭರ  ಮುರ್ದಾ     
        ಬಾದ್"  "ಸೌದಾಮಿನಿ ಜಿಂದಾಬಾದ್"  ಎಂದರು.   ರಸ್ತೆಯ ಅಂಚಿನಲ್ಲಿ  ಡ್ಯೂಟಿ  
        ಮೇಲಿದ್ದ  ಪೋಲೀಸನೊಬ್ಬ, "ಹಲ್ಕಾ  ಮುಂಡೇವು,     ಹೇಳೋರು   ಕೇಳೋರು 
        ಯಾರೂ   ಇಲ್ವ  ನಿಮಗೆ ?  ಸ್ಕೂಲಿಗೋ  ಮನೆಗೋ  ಹೊರಟೋಗ್ರೊ  ಇಲ್ಲಿಂದ"   
        ಎಂದು, ಲಾಠಿ ತಿರುಗಿಸುತ್ತ ಬಯ್ದ.  ಅಲ್ಲೊಂದು ಗಿಡ  ಬೆಳೆದು ನಿಂತಿತ್ತು.  ಸೊಕ್ಕಿ