ಪುಟ:ಮಿಂಚು.pdf/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

218 ಮಿಂಚು

  ವಿನೋದನೇ ಕಳಿಸ್ತಾನೆ ಅಂತ ನಾನು ಸುಮ್ಮನಿದ್ದೆ  , ನಾನು ಕಳಿಸ್ತೆನೆ ಅಂತ 
  ಅವನು ಸುಮ್ಮನಿದ್ದ,  ಕರುಣಾ ಊರಲ್ಲಿಲ್ಲ,   ಎರಡು  ವಾರಗಳ  ಮಟ್ಟಿಗೆ
  ಅలಹಾಬಾದಿಗೆ ಹೋಗಿದ್ದಾಳೆ.
      ಮು೦ದಿನ ತಿoಗಳು ನಮ್ಮ ತಂಡ ಲಕ್ನೋಗೆ   ಹೋಗುತ್ತದೆ.     ನಿಮ್ಮ 
  ಶುಭಾಶಯ ನಮಗೆ ಶ್ರೀರಕ್ಷೆ,
                                       ಮೃದುಲಾಬೆನ್ (ದೀದಿ)
                                             ಅಧ್ಯಕ್ಷೆ 
                                    ಭಾರತಿ ಅನಾಥಾಶ್ರಮ  ಪ್ರತಿಷ್ಠಾನ 
    ಕಾಗದ ಓದಿ ಮುಗಿಸುತ್ತಿದ್ದಂತೆ ಸೌದಾಮಿನಿಯ  ಕಣ್ಣಗಳಿಂದ  ಎರಡು ಹನಿ ಕಣ್ಣೀರು ತೊಟ್ಟಿಕ್ಕಿತು. (ಎಲ್ಲ ಅನಾಥ ಮಕ್ಕಳಿಗೆ ಒಳ್ಳೆಯದಾಗಲಿ,   ಈ ರಾಜ್ಯದ,  

ಈ ರಾಷ್ಟ್ರದ, ಈ ಜಗತ್ತಿನ ಎಲ್ಲಾ ಅನಾಥ ಮಕ್ಕಳಿಗೆ ಒಳ್ಳೆಯದಾಗಲಿ ಪತ್ರವನ್ನು ಮಡಚಿ ಕಟಿಂಗ್ಸ್ ಸಹಿತ ಅವು ಬಂದಿದ್ದ ಲಕೋಟೆಯೊಳಕ್ಕೆ ತುರುಕಿ,ಅದನ್ನು ಪಕ್ಕ ದಲ್ಲಿರಿಸಿದಳು.

    ಮೂಲೆಯಲ್ಲಿ ಫೋನ್ ಸದ್ದು ಮಾಡಿತು.    ಪರಶುರಾಮ   ರಿಸೀವರನ್ನೆತ್ತಿ, ಮಾತನಾಡಿ,  ಮುಖ್ಯಮಂತ್ರಿಯ ಬಳಿ ಬಂದ.
    “ಚೀಫ್ ಸೆಕ್ರೆಟರಿ ನೋಡಲು ಬರಬಹುದೆ ? ಅಂತ ಕೇಳ್ತೀದ್ದಾರೆ."
    ಬೇಡ-ಎನ್ನಲೆ. ಎನಿಸಿತು ಒಮ್ಮೆ ಬರಲಿ, ಆತನಿಗೆ   ಹೇಗೆ  ಅನಿಸುತ್ತೆ ಅಂತ

ಕೇಳೋಣ ಎನಿಸಿತು ಮರುಕ್ಷಣ.

    “ಬರಲಿ..."
    ....ಒಳಗೆ ಬಂದ ಚೌಗುಲೆ ನಮಸ್ಕರಿಸಿ ಕುಳಿತ.
    “ಚೆನಾಗಿದ್ದೀರಾ   ಶಿವಭಾವು ಸಾಹಿಬ್ ?"
    “ಚೆನಾಗಿದ್ದೇನೆ,  ಮಾತಾಜಿ..ನಿಗಮಗಳ ಖಾಲಿ ಹುದ್ದೆಗಳ ಬಗ್ಗೆ  ತಾವೇನೂ

ಹೇಳಲಿಲ್ಲ."

    “ಶಾಸಕಾಂಗ ಪಕ್ಷದ ಸಭೆ ಕಳೀಲಿ-ಆಮೇಲೆ ಸಂಪುಟವನ್ನು  ಪುನರ್ರಚಿಸ್ತೇನೆ.

ಆಗೆ ಖಾಲಿ ಹುದ್ದೆಗಳ ಇತ್ಯರ್ಥವನ್ನೂ ಮಾಡೋಣ."

    “ನನ್ನಿಂದ ಆಗಬೇಕಾದ ಕೆಲಸವೇನಾದರೂ ಇದ್ದರೆ ಹೇಳಿ.”
    “ನಮ್ಮ ಗುಪ್ತಚಾರದಳದ ಮುಖ್ಯಸ್ಥ ನಾಪತ್ತೆ.   ಹುಡುಕಿ   ಹಿಡಿದು ಸ್ವಲ್ಪ ಕಳಿಸ್ಕೊಡಿ."
    “ಹೂಂ.(ಏಳುತ್ತ) ನಿಮ್ಮ ಮನೋಸ್ಥೈರ್ಯಕ್ಕೆ ಯಾರಾದರೂ ತಲೆಬಾಗಲೇ ಬೇಕು,”
    “ಥಾಂಕ್ಸ್, ಗೃಹ ಕಾರ್ಯಾಲಯಕ್ಕೆ ಹೋಗ್ತೀನಿ.    ಆತ ಅಲ್ಲಿಗೇ ಬರಲಿ.”
    "ಆಗಲಿ,"
              *              *              *