ಪುಟ:ಮಿಂಚು.pdf/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

220

ಮಿಂಚು

“ನಮಸ್ತೆ, ಮಾತಾಜಿ.”
ಆಕೆ ತಲೆ ಎತ್ತಿ ಮುಗುಳು ನಕ್ಕು, ಪಕ್ಕದ ಬಾಗಿಲು ತೋರಿಸಿ, “ಮುಖ
ತೊಳ್ಕೊಳ್ಳಿ” ಎಂದಳು. ಆತ ಮುಖಕ್ಕೆ ನೀರು ಹನಿಸಿ ಕರವಸ್ತ್ರದಿಂದ ಒರೆಸಿಕೊಂಡು
ಹಿoತಿರುಗಿದ.
“ರಾತ್ರೆ ಡ್ಯೂಟಿ ಇತ್ತಾ ?”
“ಹೂಂ, ಮಾತಾಜಿ, ಐಜಿಪಿಯವರೂ ನಾನೂ ಒಟ್ಟಿಗಿದ್ದಿ."
“ಗುಪ್ತದಳ ಬಹಿರಂಗದಳ ಎರಡೂ ಜತೆಯಾಗೋದು ಸರೀನಾ ? ಘಾಟಿ
ಗಳಪ್ಪ ನೀವು!"
“ಇವತ್ತಿನ ಮೆರವಣಿಗೆ ವಿಷಯ ಅವರಿಗೆ ಒಂದೆರಡು ಮಾಹಿತಿಕೊಡುವುದಿತ್ತು.”
“ಅಂತೂ ಇವತ್ತು ಕ್ರಾಂತಿಯಾಗೋದು ತಪ್ಪಿತು ಅನ್ನಿ!"
“ನಿಮ್ಮ ಮನೋಸ್ಥೈರ್ಯಕ್ಕೆ ಯಾರಾದರೂ ತಲೆದೂಗಲೇಬೇಕು."
"అರೇ! ఇದೇ ಮಾತನ್ನು ಬೆಳಗ್ಗೆ ಹೇಳಿದವರು ಯಾರು? ಚೀಫ್ ಸೆಕ್ರೆಟರಿ,
ನೌಕರಶಾಹಿ ಮಂದಿಯ ಮಾತೆಲ್ಲ ಒಂದೇ ತರಹೆ...”
“ಸಿಬಿಐಯ ಒಬ್ಬ, ಮತ್ತೆ ಬಂದಿದ್ದಾನೆ. ಚೆನ್ನೆ ದಾರಿಯಾಗಿ ಬಂದನಂತೆ."
“ಇಲ್ಲಿಯ ಘಟನೆಗಳ ಬಗ್ಗೆ ಆಸಕ್ತಿ ಇಲ್ಲವಂತೊ ?"
“ಹೀಗೆ ಪರಸ್ಪರ ನೇರ ಪ್ರಸ್ತಾಪ ನಾವು ಮಾಡೋದೇ ಇಲ್ಲ."
“ಪರೋಕ್ಷ ಪ್ರಸ್ತಾಪದಿಂದ ನಿಮಗೆ ಏನು ತಿಳಿತು?"
“ಇವತ್ತಿನ ಮತಪ್ರದರ್ಶನ ಇತಾದಿ ಕುರಿತು ರಾಜ್ಯಪಾಲರ ವರದಿ, ಈ
ಸಿಬಿಐ ಅಧಿಕಾರಿ ಒದಗಿಸುವ ಮಾಹಿತಿ, ವಿಶ್ವ ೦ಭರ-ಲಕ್ಷ್ಮಿಪತಿಯರ ದಿಲ್ಲಿ ಮಾತುಕತೆ
ಈ ಮೂರನ್ನೂ ಆಧರಿಸಿ ವರಿಷ್ಕರು ತೀರ್ಮಾನ ಕೈಗೊಳ್ಳಬಹುದು.”
“ಅಂಕೆ ಸಂಖ್ಯೆ ವಿಷಯ?”
“ಇನ್ನೂ ಗೊಂದಲ ಇದೆ. ಶಾಸಕಾಂಗ ಸಭೆ ಸೇರಿದಾಗಲೇ ಇದು ಸ್ಪಷ್ಟ
ವಾದೀತು."
“ಅಷ್ಟೇನಾ? ಖಚಿತವಾಗಿ ಹೆಚ್ಚು ತಿಳಿಯೋದು ನಿಮ್ಮಿಂದ ಆಗಿಲ್ಲ ಅನ್ನಿ.”
“ಒ೦ದು ನಾಲಗೆ ಎರಡು ಮಾತು, ಒಂದು ಲೇಖನಿ ಎರಡು ಸಹಿ__ವರ್ತನೆ
ಹೀಗಿರುವಾಗ ಎಡವಟ್ಟು ತಪ್ಪಿದಲ್ಲ.”
“ಎಂಬತ್ತು ಶಾಸಕರು ಆ ಶಿಬಿರದಲ್ಲಿ ಇದ್ದಾರೆ ಅಂತೀರಾ?
ಹೌದು, ಈಗ ಇದ್ದಾರೆ. ಶಾಸಕಾಂಗ ಪಕ್ಷದ ಸಭೇಲಿ ತಮ್ಮ ಭಾಷಣ
ಕೇಳಿದ ಮೇಲೆ ಯಾರ ಯಾರ ಮನಸ್ಸಾಕ್ಷಿ ಹೇಗೆ ಹೇಗೆ ಇರುತ್ತೊ ?”
“ಸಭೆಗೆ ವೀಕ್ಷಕರಾಗಿರೋದಕ್ಕೆ ದಿಲ್ಲಿಯಿಂದ ಯಾರಾದರೂ ಬಂದರೆ?”
“ಅವರು ನಿಮ್ಮ ಪಕ್ಷಪಾತಿಯಾದರೆ ವಿಶ್ವಂಭರನಿಗೆ ಸೋಲಾಗ್ತದೆ.”
“ಯಾರು ಬರ್‍ತಾರೆ ಅನ್ನೋದು ಕೋಟಿ ರೂಪಾಯಿಯ ಪ್ರಶ್ನೆ.”