ಪುಟ:ಮಿಂಚು.pdf/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

222 ಮಿಂಚು

   ಸೌದಾಮಿನಿ ಯೋಚಿಸಿದಳು : ಇನ್ನೊಂದು ದೊಡ್ಡ ನಮಸ್ಕಾರ ? ಮುಖ

ಭಂಗ ?.. ಛೆ! ಛೆ!?ಎನಿಸಿತು.ಐ.ಜಿ.ಪಿ.ಯ ಪತ್ನಿ ಇರುವುದರಿಂದ ಆಭಾಸಕರ ವಾದುದೇನೂ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿಗೆ ಖಾತರಿ.ಇನ್ನೂ ಅಧಿಕಾರ ದಲ್ಲಿದ್ದೇನೆ. ತನಗೆ ದೊರೆಯುವುದು ಕುರ್ನೀಸೊಂದೇ.

           *                    *                     *
   ಸಂಜೆ ಸೌದಾಮಿನಿ ತಾಡವಾಗಿ ಧರ್ಮಮಠಕ್ಕೆ ಹೊದಳು. ಸ್ವಾಮಿజి ಗೌರವ 

ದಿ೦ದ ಬರಮಾಡಿಕೊಂಡರು. ಹೂ ಗಿಡಬಳ್ಳಿಗಳು ಸೋಂಪಾಗಿ ಬೆಳೆದಿದ್ದು వు. ఇల్లి ರಾಜಕೀಯದ ಗೊಂದಲವಿಲ್ಲ. ಬಹಳವೆಂದರೆ ಭಕ್ತಾದಿಗಳು ದರ್ಶನಕ್ಕೆ ಬರುತ್ತಾರೆ. ಪ್ರಣಾಮ ಸಲ್ಲಿಸಿ, ಪ್ರಸಾದ ಸ್ವೀಕರಿಸಿ (ಕಾಣಿಕೆ ಸಂದಾಯಮಾಡಿ), ಹೋಗುತ್ತಾರೆ. ಏಳರ బళిಕ ದರ್ಶನವಿಲ್ಲ. ಕೇವಲ ಶಾಂతిః?? ಶಾಂతిః?? ಶಾಂతిః?? .

   ಮುಖ್ಯಮಂತ್ರಿ ತಂದ ಹೂ ಹಣ್ಣುಗಳನ್ನು ಕಿರಿಯ ಸ್ವಾಮಿ ಒಳಕ್ಕೊಯ್ದ.

ಮಠದಲ್ಲಿನ ದಂತೇಶ್ವರಿಯ ಮುಂದೆ ಸ್ವಲ್ಪ ಸಮಯ ಧಾನಮಗ್ನಳಾಗಿ ಕುಳಿತು, ಸೌದಾಮಿನಿ ಸ್ವಾಮಿజిಯ ಬಳಿಗೆ బందಳು.

  "ಇల్లి ಸ್ವಾರ್ಥಿಗಳು ಕೆಲವರು ಆರಂಭಿಸಿರುವ ಕಿರಿಕಿರಿ ವಿಷಯ ತಮಗೆ

ಗೊತ್ತಾಗಿರಬಹುದು.”

  “ಗೊತಾಗಿದೆ. ಬೇಸರದ ಸಂಗತಿ. ನಾನು ಧರ್ಮೇಂದರ್ ಮಠಕ್ಕೆ ಯಾವಾಗ

ಹೂಗಿ ಬರಲಿ."

  “ನಿಮಗೆ ಅನುಕೂಲವಾದಾಗ.? ತಾವು ಅಲ್ಲಿರುವಾಗಲೇ ನಾನೂ ಒಮ್ಮೆ

బందರೂ బంದೆ."

  “ದಂತೇಶ್ವರಿಯ ದಯೆಯಿಂದ ತಮಗೇನನೂ ತೊಂದರೆಯಾಗದು."
  “ಆ ವಿಶ್ವಾಸ ನನಗೂ ಇದೆ. ಆದರೆ ರಾಜಕೀಯ ಕ್ಷುದ್ರ ಆಟ. ಅದರಲ್ಲಿ 

ನೀతి నియತ್ತು ಒಮ್ಮಮ್ಮೆ ಮಾಯವಾಗುವುದೂಟು."

  “ದೈವೀಕೃಪೆಯ ಮುಂದೆ ಕ್ಷುದ್ರ ಆಟ ನಡೆಯೋದಿಲ್ಲ."
  “ತಮ್ಮ ಮಾತು ಸತ್ಯವಾಗಲಿ, ಸ್ವಾಮಿజి."
  “ಶಾಸಕಾಂಗ ಪಕ್ಷದ ಸಭೆ ಭಾನುವಾರ ಅಪರಾಹ್ನ ಅಲ್ಲವೆ?”
  "ಊಟದ ಬಳಿಕ ಒಂದು ಗಂಟೆಗೆ.'
  “ಆಗ ತಮ್ಮ ವಿಜಯಕ್ಕಾಗಿ ವಿಶೇಷ ಪೂಜೆ ಸಲ್ಲಿಸ್ತೇನೆ. ತಮ್ಮಿಂದಾಗಿ ಕಲ್ಯಾಣ

ನಗರದ ಧರ್ಮಮಠಕ್ಕೆ ಕೀ బంತು."

  “ಅಷ್ಟು ಕೆಲಸವನ್ನು ನನ್ನಿಂದ ಆಗ ಮಾಡಿಸಿದವರು ಪೂಜ್ಯ ಬಾಬಾಜಿ..”

?