ಪುಟ:ಮಿಂಚು.pdf/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

225

೨೩

ಬೆಳಗ್ಗೆ ಎದ್ದವಳು ಯೋಗಾಸನ ನಿರತಳಾದಳು.
ಅಂಗರಕ್ಷಕರು ಬಂದು, ವಂದಿಸಿ, ಮರೆಗೆ ಸರಿದರು.
ಎಂದಿನಂತೆ ಪರಶುರಾಮ ನಮಸ್ತೆಯ ಹಾಜರಿ ಹಾಕಿದ.
ಎಂಟು ಗಂಟೆಗೆ ಉಪಾಹಾರ, ಮಹಿಳಾಮಣಿಗಳು ಬಂದರು, ಟ್ಯಾಕ್ಸಿ
ಯಲ್ಲಿ. ಐ.ಜಿ.ಪಿ. ಅಮ್ಮಾವು ಬರುತ್ತಾರೆಂದು ಪರಶುರಾಮ ಗೇಟಿನ ಕಾವಲು
ಪೋಲೀಸರಿಗೆ ತಿಳಿಸಿದ್ದ. ಒಬ್ಬನಿಗೆ ಅಮ್ಮಾವ್ರ ಮುಖಪರಿಚಯ ಇತ್ತು. ಇಬ್ಬರೂ
ಲವಲವಿಕೆಯಿಂದ ಸೆಲ್ಯೂಟ್ ಹೊಡೆದರು.
ಆಮಂತ್ರಣ ಪತ್ರಿಕೆ ಸರಳವಾಗಿತ್ತು, ಸುಂದರವಾಗಿತ್ತು. ಅತಿಥಿಗೃಹವೆಂದೇ
ಕರೆದಿದ್ದರು-'ಸೌದಾಮಿನಿ ಗೃಹ' ಎಂದಿರಲಿಲ್ಲ. ಕಲ್ಲಿನ ಫಲಕದ ಮೇಲೆ ಹೇಗೂ
ಹೆಸರು ಕೊರೆಸಿರುತ್ತಾರೆ. ಸಿಮೆಂಟಿನ ಗೋಂದು ಸಾರಿಸಿ ಫಲಕವನ್ನು ಗೋಡೆಗೆ
ಅಂಟಿಸುತ್ತಾರೆ. ಕಲ್ಲಿನ ಮೇಲಿನ ಹೆಸರು ಶಾಶ್ವತ, ಮೂರು ಸಾವಿರ ವರ್ಷಗಳ
ಅನಂತರ ಯಾರೋ ಯಾಕೋ ಅಗೆದಾಗ, ತುಸು ಹರಿದರೂ ಒಂದಕ್ಕೊಂದು
ಜೋಡಿಸಿ ಆ ಹಾಳೆಯನ್ನು ವಿದ್ವಾಂಸರು ಓದಿದಾಗ, ತಾನು ಇತಿಹಾಸವಾಗಿರು
ತೇನೆ-ಸೌದಾಮಿನಿ ದೇವಿ, ಕಿಂಧೆ ರಾಜ್ಯದ ಮುಖ್ಯಮಂತ್ರಿ....
“ಸುಲೋಚನಾಬಾಯಿ, ಮೃದುಲಾಬೆನ್‌ರಿಂದ ಕಾಗದ ಬಂದಿತ್ತು. ನಿಮ್ಮ
ನ್ನೆಲ್ಲ ನೆನೆದು ಶುಭಾಶಯ ತಿಳಿಸಿದ್ದರು. ಪತ್ರಿಕೆಗಳಲ್ಲಿ ಸಚಿತ್ರ ಲೇಖನಗಳೂ
ಪ್ರಕಟವಾಗಿದ್ದು ವು. ಎಲ್ಲಿ ಹೋದುವೋ ಏನೋ, ಸ್ಟಾಫ್ ಎಷ್ಟಿದ್ದರೂ ಸಾಕಾ
ಗೋದಿಲ್ಲ. ಒಳಗೆ ಬನ್ನಿ.”
ಮೇಜಿನ ಸುತ್ತ ಕುಳಿತ ಬಳಿಕ ಸೌದಾಮಿನಿ ಮಾತು ಮುಂದುವರಿಸಿದಳು :
“ಶಾಸಕರೆಲ್ಲ ರಾಜಧಾನಿಯಲ್ಲಿದ್ದಾರೆ. ಅವರಿಗೆಲ್ಲ ಆಮಂತ್ರಣ ಪತ್ರಿಕೆ
ಹೋದರೆ ಚೆನ್ನಾಗಿರುತ್ತೆ. ಹೆಚ್ಚಿನವರು ಶಾಸಕರ ಭವನದಲ್ಲಿದ್ದಾರೆ.”
“ಅವರಿಗೆ ತಲಪಿಸ್ತೇವೆ.”
ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿಯನ್ನು ಕರೆದಳು.
ಇವರಿಗೆ ನಮ್ಮ ಆಮಂತ್ರಣ ವಿಳಾಸಗಳ ಒಂದು ಕಟ್ಟು ಕೊಡು."
ಅದು ಬಂತು.
15