ಪುಟ:ಮಿಂಚು.pdf/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

226ಮಿಂಚು
“ಸ್ವಲ್ಪ ಜರಡಿ ಹಿಡಿದು ಉಪಯೋಗಿಸಿ.”
ಉಪಾಹಾರ ಚೆನ್ನಾಗಿತ್ತು.
“ಅಲ್ಲಿ ನಾಳೆ ಬೆಳಗ್ಗೆ ಇಂಥದೇನೂ ಇರೋದಿಲ್ಲ”, ಎಂದಳು ಸುಲೋಚನಾ
ಬಾಯಿ.
“ದೊಡ್ಡದಲ್ಲ, ಶುಭ ಸಮಾರಂಭಕ್ಕೆ ಎಲ್ಲ ನಿಮ್ಮ ಅಭಿಮಾನಿಗಳು ಬರೋದು
ಮುಖ್ಯ.”
“ತಾವು ಬರೀರೀಂತ ಜನ ಮುಕುತ್ತಾರೆ.”
“ಚಪ್ಪರ ಗಿಪ್ಪರ ಬೇಡಿ. ಒಂಭತ್ತು ಘಂಟೆಗೆ ಬಿಸಿಲಿರೋದಿಲ್ಲ. ಮಡಚು
ಕುರ್ಚಿಗಳಿರಲಿ.”
“ನಮ್ಮ ಪಾಲಿಗೆ ನಾಳೆ ಸುದಿನ.”
“ಮುಹೂರ್ತ ನೋಡಿದೀರೊ ?”
“ಹೌದು, ಶುಭ ದಿವಸ.”
ಮನಸ್ಸಿನಲ್ಲಿ ಸೌದಾಮಿನಿ ಅಂದುಕೊಂಡಳು : ತನ್ನ ಪಾಲಿಗೂ ಶುಭದಿವಸವೇ
ಆಗಲಿ. ಅಥವಾ, ಸಿ.ಎಂ. ಬರಲೇಬೇಕೂಂತಾದರೆ ಭಾನುವಾರ ಬೆಳಗ್ಗೆ ಇಟ್ಟು
ಕೊಳ್ಳೋದೇ ವಾಸೀಂತ ಐ.ಜಿ.ಪಿ. ಹೇಳಿದನೊ ? ನಾಳೆ ತನ್ನ ಸತ್ವ ಪರೀಕ್ಷೆ.
ಅಂದೇ ಈ ಸಾರ್ವಜನಿಕ ಕಾರ್ಯಕ್ರಮ ಇರುವುದರಿಂದ ತನಗೇ ಲಾಭ. ಎಲ್ಲರೂ
ಅಚ್ಚರಿಪಡುತ್ತಾರೆ. ಒಂದಷ್ಟು ಶಾಸಕರು ತನ್ನ ಶಿಬಿರಕ್ಕೆ ಬಂದರೂ ಬಂದರೇ.
ಹಾಗೆಯೇ ಆಗಲಿ, ದಂತೇಶ್ವರಿ.
-ಕಾಫಿ ಹೀರುತ್ತಲಿದ್ದಾಗ ಮುಖ್ಯ ಮಂತ್ರಿ ಮಾತನಾಡಲಿಲ್ಲ. ಯೋಚನೆಗಳ
ಸುರುಳಿಯೊಳಗೆ ಆಗ ಅವಳು ಬಂದಿ,
ಕಾಫಿ ಮುಗಿಯಿತು. ಮುಗುಲ್ನಕ್ಕಳು. ಯೋಚನೆಗಳ ಸಂಕೋಲೆಗಳು
ಕಳಚಿದುವು.
ಬಂದವರು ಎದ್ದರು.
“ಒಂಭತ್ತು ಗಂಟೆಗೆ ಸರಿಯಾಗಿ ಅಲ್ಲಿದ್ದೇವೆ.”
“ತಮ್ಮ ದಾರಿ ನೋಡ್ತವೆ, ನಮಸ್ಕಾರ.”
ಪ್ರತಿವಂದನೆ ಎನ್ನುವಂತೆ ಸೌದಾಮಿನಿ ತಲೆಯಾಡಿಸಿದಳು. ಜೀವನದಲ್ಲಿ ಮೊಟ್ಟ
ಮೊದಲ ಸಲ ತಾನು ನಮಸ್ಕಾರ ಪಡೆದುದು ಯಾವಾಗ ? ಕೊಟ್ಟವರು ಯಾರು ?
ಬೇರೆ ಯಾರೋ ಎಂದು ತಪ್ಪು ಗ್ರಹಿಸಿ ತನಗೆ ಕೈ ಜೋಡಿಸಿದಳೊ(ರೊ) ? ಹೆಂಗಸು,
ಹೆಂಗಸೇ ಅಂತ ತೋರದೆ ಆ ಪದ ಕೇಳಿದೊಡನೆ ಜೋಡಿಸಿದ ಕೈಗಳನ್ನು ಕಂಡೊ
ಡನೆ, ಅವಳ ಮೈ ಪುಲಕಗೊಂಡಿತ್ತು. ಆಮೇಲೆ ಬೀದಿಗಿಳಿದಾಗಲೆಲ್ಲ ನಮಸ್ಕಾರದ
ನಿರೀಕ್ಷೆಯಲ್ಲಿರುತ್ತಿದ್ದಳು. ಅದರ ಆಗಮನ ಸುಲಭಸಾಧ್ಯವಲ್ಲವೆಂದು ಮನವರಿಕೆ