ಪುಟ:ಮಿಂಚು.pdf/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

మింಚು 235 ನೋಡಿಯೂ ನೋಡದವಳಂತೆ ಮಾಡಿದಳು ಸೊದಾಮಿನಿ. ...ಮೂರು ಸಾವಿರ ವರ್ಷಗಳ ಅನಂತರ ಅಗೆದಾಗೆ. "ಹೀಗೆ ದಯಮಾಡೀಸಿ,ಹೀಗೆ ದಯಮಾಡಿಸಿ." ಮಕ್ಕಳಿಂದ ಸಮೂಹಗಾಯನ ನಡೆಯಿತು: “ಈಗ ಮುಖ್ಯಮಂತ್ರಿಯವರಿಂದ ಆಶೀರ್ವಚನ." “ಬಿಸಿಲು ಏರುವುದಕ್ಕೆ ಮುಂಚೆ ನಾವೆಲ್ಲರೂ ಮನೆಗಳನ್ನು ಸೇರಬೇಕು. ಬೆವರು ಒರೆಸಿಕೊಳ್ಳುತ್ತ ನಿಮ್ಮ ಪ್ರೀತಿಯ ಮುಖ್ಯಮಂತ್ರಿಯನ್ನು ನೀವು ಶಪಿಸುವ ಹಾಗಾಗಬಾರದು. ಕೆಲವರಿಗೆ ಮಾತನಾಡುವ ಚಟ, ಹೊತ್ತು ಗೊತ್ತು ಒಂದೂ ಇಲ್ಲ. ಧ್ವನಿವರ್ಧಕ ನೋಡಿದರಂತೂ ಆವೇಶ ಬರುವುದುಂಟು, ನಾನು ಕಡಮೆ ಮಾತಿನ ಮುಖ್ಯಮಂತ್ರಿ ಎನ್ನುವುದನ್ನಂತೂ ನೀವೆಲ್ಲ ಅರಿತಿದ್ದೀರಿ. ಮಾತು ಹೆಚ್ಚೂ ? ಕೃತಿ ಹೆಚ್ಚೊ ? ನಾನು ಎರಡನೆಯ ಪಂಗಡಕ್ಕೆ ಸೇರಿದವಳು.” ಹೆಚ್ಚೇನೂ ಇಲ್ಲವೆಂದರೂ ಇಪ್ಪತ್ತು ಮಿನಿಟು ಸೌದಾಮಿನಿ ಮಾತನಾಡಿದಳು. ಮುಕ್ತಾಯದಲ್ಲಿ ಅವಳೆಂದಳು : “ಸುಖದ ಸುಪ್ಪತ್ತಿಗೆಯ ಮೇಲಿರುವವರು ಹರಕು ಚಾಪೆಯವರನ್ನು ನೆನಪಿಡಿ. ದಿನಕ್ಕೊಂದು ಹಿಡಿ ಅಕ್ಕಿ ಹತಭಾಗ್ಯರಿಗೆ. ಇದು ಕಲ್ಯಾಣನಗರ, ಕಲ್ಯಾಣ ರಾಜ್ಯ, ಇಲ್ಲಿ ಸರ್ವರೂ ಸುಖಿಗಳಾಗಲಿ ! ಜಯ ಕಿಸ್ಕಿಂದೆ ! ಜಯ ಭಾರತ !" ಹುಡುಗರೂ ಅ೦ದರು : “ಜಯ ಕಿಷ್ಟಿಂಧೆ ! ಜಯ ಭಾರತ !”

                    *            *          *

ಶಾಸಕರಲ್ಲಿ ಹಲವು ತೆರ: ಜನರಿಗೆ ತಮ್ಮಿಂದಾದಷ್ಟು ಒಳ್ಳೆಯದನ್ನು ಮಾಡುವ ವರು; ತಮ್ಮನ್ನೇ ಪೊರಕೆ ಕಡ್ಡಿಯಾಗಿ ಮಾಡಿ ಸವೆಯುವವರು (ತಮ್ಮ ಹೆಂಡತಿ ಮಕ್ಕಳ ಗಮನವೂ ಅವರಿಗಿಲ್ಲ; ಇನ್ನು ಕೆಲವರು ಸ್ವಾರ್ಥಕ್ಕಿಷ್ಟು ಪರಾರ್ಥಕ್ಕಿಷ್ಟ ಪೈಕಿ); ಬೇರೆ ಕೆಲವರು ಎಂಥ ಕೀಳು ಕೆಲಸಕ್ಕೆ ಬೇಕಾದರೂ ಕೈಇಕ್ಕಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು; ಹೇರಳ ಇದ್ದಿ ತೆಂದರೆ ಪಾಲುಕೊಡುವುದಕ್ಕೂ ಬಟವಾಡೆಗೂ ಅವರು ಹಿಂದೆ ಮುಂದೆ ನೋಡುವುದಿಲ್ಲ, ಮೇಲಿನ ಕೆಲಸಗಳೆಲ್ಲ ನಡೆಯುವುದುಆಯಾ ಶಾಸಕ ಎಷ್ಟು ಕುಶಲಮತಿ, ಬುದ್ದಿ ವಂತ, ಸಾಧಾಧಣಿಗ, ದಡ್ಡ ಎಂಬು ದನ್ನು ಅವಲಂಬಿಸಿ. ಇವರೆಲ್ಲರಿಗೂ ಒಂದು ಸಂಗತಿ ಮಾತ್ರ ಸಮಾನ. ವ್ಯಷ್ಟಿ ಯಾಗಿಯೂ ಸಮಷಿಯಾಗಿಯೂ ಜನತೆ ಇವರ ಕಣ್ಣಿಗೆ ಕಾಣಿಸುವುದು ಮತದಾರ ರಾಗಿ. ಅವರೆಂದೂ ಜಯಘೋಷ ಮಾಡುವುದಿಲ್ಲ. ಮಾಡಿದರೂ ಜನಸ್ತೋಮಕ್ಕೆ ಮೇಲ್ಪಂಗ್ತಿಯಾಗಿ. ಕಿಷ್ಕಿಂದ್ದೆಯಿರಲಿ, ಭಾರತವಿರಲಿ ಇವೆಲ್ಲ ಭೌಗೋಳಿಕ ಘಟಕ