ಪುಟ:ಮಿಂಚು.pdf/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

236 ಮಿಂಚು ಗಳು. ಈ ಘಟಕಗಳ ಒಳಗಿರುವುದು ಜನ. ಬೆಳೆ ಪೈರು, ಗುಡಿಸಲು ಸೌದ, ಕೈಗಾರಿಕೋದ್ಯಮ ಗುಡಿ ಕೈಗಾರಿಕೆ, ಸಂಪತ್ತು, ನೆಲ-ಜಲ-ಆಕಾಶ. ಇಲ್ಲಿನ ಶಾಸಕರು ಇಲ್ಲಿಗೆ ಒಡೆಯರು. ಎಲ್ಲೆಡೆಯ ಶಾಸಕರು ಎಲ್ಲೆಡೆಗೆ ಒಡೆಯರು. ಒಳ್ಳೆಯ ಶಾಸಕ ವಸ್ತುನಿಷ್ಕ, ಚಿಕಿತ್ಸಕ ಪ್ರವೃತ್ತಿಯವ, ಭಾವ ವಿಕಾರಗಳಿಗೆ ಗುರಿಯಾಗುವುದಿಲ್ಲ. ಗುರಿಯಾದರೂ ನೆರೆದ ಸಮುದಾಯದಿಂದ ಕಣ್ಣೀರು ಹಿಂಡು ವುದಕ್ಕಾಗಿ. ಅವನಿಗೆ ದಕ್ಕುವ ಮೆಚ್ಚುಗೆ-ಭಳಿರೆ! ಭಪ್ಪತರೆ! ಪರಸ್ಪರ ವೈರ (ಸ್ನೇಹ ಕೂಡ) ಶಾಸಕರ ಗುಣಗಳೇ. ವೈರ ಗಾಢ. ಸ್ನೇಹ ಸೀಮಿತ, ಇವರ ಕಾರಾಚರಣೆ ಒಮ್ಮೊಮ್ಮೆ ವೈಯಕ್ತಿಕ ನೆಲೆಯಿಂದ, ಒಮ್ಮೊಮ್ಮೆ ಸಾಮೂಹಿಕ ಆಖಾಡದಿಂದ. ಗೆದ್ದಾಗ ಟೇಂಕಾರ, ಸೋತಾಗ ಬಿಸುಸುಯ್ಲು. ವಿಧಾನಸಭೆಗೆ ಒತ್ತಿಕೊಂಡೇ ಇತ್ತು ಶಾಸಕಾಂಗ ಪಕ್ಷದ ಸಭೆ ಜರಗುವ ಸ್ಥಳ, ಉಳಿದ ಪಕ್ಷಗಳಿಗೂ ಇದ್ದುವು ಪುಟ್ಟ ಒಂದೊಂದು ಕೊಠಡಿ, ಜಗಲಿಯಲ್ಲಿ ಬೆತ್ತದ ಕುರ್ಚಿಗಳಿದ್ದುವು. ಇಪ್ಪತ್ತು ಮಿನಿಟು ಮೊದಲೇ ಬಂದ ಸೌದಾಮಿನಿ ಒಂದು ಕುರ್ಚಿಯನ್ನು ಆರಿಸಿಕೊಂಡಳು. ಬರತೊಡಗಿದವರಿ೦ದ : “ನಮಸ್ಕಾರ.” ತಪ್ಪದೆ ಇವಳ ಉತ್ತರ : “ನಮಸ್ಕಾರ.” ಸುಯ್ಸುಯ್ಯೆಂದು ಸರಿದಾಡುವ ಮಿಾನುಗಳು. ಮಹಾವ್ಯಾಧನ ಬಾಣಕ್ಕೆ ಯಾರು ತುತ್ತು ? ಬಲೆಗೆ ಸಿಕ್ಕಿದವರು ಉಪ್ಪೇರಿಯಾಗುವುದು ತನ್ನ ಬಾಣಲೆ ಯಲ್ಲೊ? ವಿಶ್ವಂಭರನ ತಪ್ಪಲೆಯಲ್ಲೋ ? ಬಾಗಿಲು ದಾಟುವ ಮುನ್ನ ಆಮಂತ್ರಣ ತೋರಿಸಬೇಕು. ಕಳೆದುಹೋಗಿ ದ್ದರೆ, ಗುರುತಿಸುವವರು ಯಾರಾದರೂ ಬೇಕು. ಸೊದಾಮಿನಿ ಬೇಗನೆ ಬಂದಿರುವಳೆಂಬ ವತ್ರೆ ತಲಪಿದೊಡನೆ ವಿಶ್ವಂಭರನ ಕಾರು ಧಾವಿಸಿತು. (ನಕುಲದೇವ್ ಅಂದಿದ್ದ : ನೀವು ಮೊದಲು ಹೋಗಿ ಅಲ್ಲೇ ಇರಿ; ನಾನು ಒಂದು ಘಂಟೆಗೆ ಐದು ಮಿನಿಟು ಇರುವಾಗ ಬರೇನೆ. ಬೆಟ್ಟಕೊಟ್ಟರೆ ಹಸ್ತವನ್ನು ಅದೃಶ್ಯಮಾಡುವ ಸಮರ್ಥೆ ಆಕೆ.) ಊಟವಾಗಿತ್ತು. ಬಿಸಿಲಿನ ದಣಿವಾರಿಸಿಕೊಳ್ಳಲು ಒಂದಿಷ್ಟು ಪೇಯ. ಕೋಕೊ ಕೋಲಾ ವಿತರಣೆಯಾಯಿತು, ಕೆಳಗಿರಿಸಿದ ಎರಡು ಖಾಲಿ ಬಾಟಲಿಗಳು ಬಿದ್ದುವು. (ಒಂದರ ಕತ್ತು ಮುರಿಯಿತು. ಇನ್ನೊಂದರ ಹೊಟ್ಟೆ ಬಿರಿಯಿತು), ಕಾಠ್ಯಸೌಧದ ಜವಾನರಿಗೆ ಗಾಜಿನ ಚೂರುಗಳನ್ನೆತ್ತುವ ಕೆಲಸ.