ಪುಟ:ಮಿಂಚು.pdf/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 237 ವಿಶ್ವಂಭರ : “ಹಲ್ಲೊe.” ಸೌದಾಮಿನಿ “ಹಲ್ಲೋ." ಅರ್ಧ ಲಕ್ಷವಲ್ಲ-ಐವತ್ತು ಸಾವಿರ ಬೇಕು, ಈಗಲೇ, ಎಂದವನು ಬಂದ. “ಬಡವರ ಮೇಲೆ ಕೃಪೆ ಇಡಲಿಲ್ಲ," ಎಂದ. ಸೌದಾಮಿನಿ ಅಂದಳು : “ಇವತ್ತು ವ್ಯಾಪಾರ ಬಂದ್." “ಮನಸ್ಸು ಮಾಡಿದರೆ ಈಗಲೂ-” “ಟಂಕಸಾಲೆ – ನೋಟು ಮುದ್ರಿಸೊ ಪ್ರೆಸ್ - ಮುಖ್ಯಮಂತ್ರಿಯ ನಿವಾಸದಲ್ಲಿ ಇಲ್ಲವಪ್ಪ." “ಲಕ್ಷ್ಮೀಪತಯ್ಯ ಬಂದ್ರು. ನಾನು ಒಳಗೆ ಹೋಗ್ತೀನಪ್ಪ." “ಅಲ್ಲಿ ಕುಡಿಯೋಕೆ ಕೊಡ್ತಾರೆ. ಹೋಗಿ ರುಚಿ ನೋಡಿ.” ಅಸ್ವಸ್ಥನೊಬ್ಬ ಗಾಲಿ ಕುರ್ಚಿ ಮೇಲೆ ಕುಳಿತು ತಳ್ಳಿಸಿಕೊಂಡು ಬರುತ್ತಿದ್ದಾನೆ. ಹಬೀಬುಲ್ಲ. ಈತ ತನಗೆ ಮತ ಕೊಡುತ್ತಿ.ದ್ದ ಬಹುಮತ ಖಚಿತ ಎಂಬುದು ತಿಳಿದಿದ್ದರೆ, ಬಹಳ ಜನರದು ಅದೇ ತೊಂದರೆ. ಉಳಿದ ಅವಧಿಗೆ ಅಧಿಕಾರ ಪಡೆಯುವ ಹಂಬಲ. ರಾಷ್ಟ್ರಪತಿಯ ಆಡಳಿತವೇನಾದರೂ ಬಂತೋ ಇವನು ಖ೦ಡಿತ. ಪುನಃ ಚುನಾವಣಾ ಅಭ್ಯರ್ಥಿಯಾಗಿ ಹೋರಾಡುವುದು ಇವನಿ೦ದ ಸಾಧ್ಯವಾಗದ ಮಾತು. “ಸಲಾಂ ಮಾಜಿ." “ಆಲೇಕುಂ ಸಲಾಂ.” ಶುಭಾಶಯಗಳ ನಾಟಕ ಬೇರೆ, ಐ.ಜಿ, ಪಿ.ಯ ಮುಖ ಕ೦ಡ೦ತಾಯಿತು : ಕಮೊಷನರನದೂ. ಯಾರಿಗೆ ಸೆಲ್ಯೂಟ್ ? ಇನ್ನು ಮುಕ್ಕಾಲು ಗಂಟೆಯೊಳಗೆ ನಿರ್ಧಾರವಾಗಿಯೇ ಹೋಗುತ್ತದೆ. ನಕುಲ್ ದೇವ್ ಮೆಟ್ಟಲುಗಳನ್ನೇರಿ ಬಂದ. ಸೌದಾಮಿನಿ ಎದ್ದು ನಿಂತಳು. “ನಮಸ್ತೆ, ಭಾಯಿ ಸಾಬ್." “ರಾಮ್ ರಾಮ್, ಮಾತಾಜಿ." “ತಾವು ಬಂದದ್ದು ಒಳ್ಳೇದೇ ಆಯಿತು." “ನಿಮಗೆ ಶುಭ ಹಾರೈಸಲೆ ?” “ಉಪಕೃತೆ.” “ಸಮಯವಾಯಿತು. ಒಳಗೆ ಹೋಗೋಣವೊ ?" "ನಡೀರಿ.”