ಪುಟ:ಮಿಂಚು.pdf/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

238 ಮಿಂಚು ಒಳಗೆ ಕುಳಿತಿದ್ದವರೆಲ್ಲ ಎದ್ದುನಿಂತರು. ನಕುಲದೇವನ ಜತೆಯಲ್ಲಿ ಸೌದಾಮಿನಿಯೂ ಶಾಸಕ ಸಮೂಹಕ್ಕೆ ವಂದಿಸಿದಳು. ನಕುಲದೇವ್ ವೇದಿಕೆಯ ಕೇಂದ್ರ ಬಿಂದುವಾದೊಡನೆ, ಸೌದಾಮಿನಿ ಕೇಳಿದಳು: “ವಿಶ್ವ೦ಭರರೆ, ನೀವು ವರಷ್ಟರ ಬಲಕ್ಕೊ ? ಎಡಕ್ಕೊ ?” ಸೂಕ್ಷ್ಮ್ ವನ್ನು ಗಮನಿಸಿ, ನಕುಲದೇವ “ಎಲ್ಲಾದರೆ ಏನು ? ನೀವು ಈಚೆಗೆ ಬನ್ನಿ, ಮಾತಾಜಿ" ಎಂದ. ಅದು ಬಲ, ಅಲ್ಲಿ ಕುಳಿತವರಿಗೆ ಗೆಲುವು ಎಂದು ಭಾವಿಸಿವುದು ಎಷ್ಟು ಮುರ್ಖತನ! ರಾಜ್ಯ ರಾಷ್ಟ್ರಷಕ್ಷದ ಅಧ್ಯಕ್ಷ ಕ್ಮಷ್ಣಪ್ರಸಾದ್ ಶಾಸಕರ ಮಧ್ಯೆ ಕುಳಿತಿದ್ದ. “ಎಲ್ಲಿ ಪ್ರಸಾದ್ ?” ಎಂದು ಕೇಳಿದ ನಕುಲದೇವ್. "ನೋಡಿ ಅಲ್ಲಿದ್ದಾರೆ. ಎರಡನೇ ಬಾಲ್ಯದ ಹುಡುಗಾಟ ಈಗ,” ಎಂದ ವಿಶ್ವಂಭರ. “ಕೈ ಹಿಡಿದು ಕರಕೊಂಡು ಬನ್ನಿ." ಬಂದನಪ್ಪ ನಮ್ಮ ಕೃಷ್ಣ ಮುದ್ದು ಕೃಷ್ಣ ಬಂದನು.... ಸೌದಾಮಿನಿ ನಿವ್ರಿಕಾರ ದೃಷ್ಟಿಯಿಂದ ಅವನನ್ನು ನೋಡಿದಳು. ಈತನ ಮೇಲೆ ಯಾಕೆ ವಿಶ್ವಾಸವಿಟ್ಟೆ ?.... ನಂಬಿಕೆಟ್ಟೆನೋ ರಂಗ ನಂಬಿಕೆಟ್ಟೆನು, ತಾನು ಹೆಸರು ಸೂಚಿಸಿದ ತಪ್ಪಿಗೆ ಈಗ ಇವನ ಬಡಿವಾರ ಸಹಿಸಬೇಕು. ನಕುಲದೇವ್.ಜಿ ಕೇಳಿದ : “ಸ್ವಾಗತ ಬಯಸೋದಿಲ್ವೆ ಕೃಷ್ಣಪ್ರಸಾದ್ ಜಿ ?” ಇವನು ಕೊರೆಯ ತೊಡಗಿದ ಎಂದರೆ ಶ್ರೋತೃಗಳಿಗೆ ನಿದ್ದೆ ಬರಲೇಬೇಕು, ಈ ಸಂಗತಿ ಕೇಳಿ ತಿಳಿದಿದ್ದ ನಕುಲದೇವನೆಂದ: “ಒಂದೆರೆಡು ಮಾತು ಹೇಳಿಬಿಡಿ ಸಾಕು.' ಔಪಚಾರಿಕ ಸ್ವಾಗತದ ಬಳಿಕ, ದಿಲ್ಲಿಯಿಂದ ಬಂದವರಿಂದ ಪ್ರಾಸ್ತಾವಿಕ ಭಾಷಣ. “ಇವತ್ತಿನ ಸಭೆಯ ಹಿನ್ನೆಲೆ ಏನು ಎಂಬುದು ನಿಮಗೆ ಗೊತ್ತೇ ಇದೆ. ನನ್ನದು ಬರಿಯ ವೀಕ್ಷಕನ ಪಾತ್ರ. ಸೌದಾಮಿನಿಜಿ ಮತ್ತು ವಿಶ್ವಂಭರಜಿ ಇಬ್ಬರೂ ನಮಗೆಲ್ಲ ಆದರಣೀಯರು, ಚುನಾವಣೆಯ ಅನಂತರ ನವ ಶಾಸಕರ ಸಭೆಗೆ ನಾನು ಬಂದದ್ದು ನಿಮ್ಮಲ್ಲಿ ಎಲ್ಲರಿಗೂ ನೆನಪಿದ್ದೀತು. ನನ್ನ ಮೇಲಿನ ವಿಶ್ವಾಸದಿಂದ ಈ ಸಲವೂ ಪ್ರಧಾನಿ ನನ್ನನ್ನೇ ಕಳಿಸಿಕೊಟ್ಟಿದ್ದಾರೆ. ನಾನು ಅವರ ಭಕ್ತ, ಹನುಮಂತ. "ಸೌದಾಮಿನಿಜಿಯವರ ನಾಯಕತ್ವದಲ್ಲಿ ವಿಶ್ವಾಸವಿಲ್ಲ ಎನ್ನುವ ಮಾತು ಬ೦ದಿದೆ. ಈ ವಾದವನ್ನು ವಿಶ್ವಂಭರಜಿ ಮಂಡಿಸಿದ್ದಾರೆ. ಅವರ ಮಾತು ಕೇಳೋಣ: ಸೌದಾಮಿನಿಜಿಯವರ ಮಾತನ್ನೂ ಕೇಳೋಣ. ಅವರಲ್ಲಿ ವಿಶ್ವಾಸವಿಲ್ಲ ಎಂದು ಸಾಬೀತಾದರೆ ಹೊಸ ನಾಯಕನನ್ನು ಆರಿಸೋಣ."