ಪುಟ:ಮಿಂಚು.pdf/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 239

    ಯಾರೋ ಒಬ್ಬ ಶಾಸಕನೆಂದ:
    “ಆ ಫ್ಯಾನ್ ಎಲ್ಲ ಬಂದ್ ಮಾಡ್ರೋ. ನಿದ್ದೆ ಬರ್ತೈತಿ....!" 
    ಬಹಳ ಜನ ನಕ್ಕರು.ಫ್ಯಾನುಗಳ ಜಾಲಗಳ ಚಾಲನೆ ಮುಂದುವರೆಯಿತು.        
     ನಕುಲದೇವರ ಸೂಚನೆಯಂತೆ ವಿಶ್ವಂಭರ ಮಾತನಾಡಲು ಎದ್ದ.     ಸಾಯು     
ತ್ತಿರುವ ಕುದುರೆಗೆ ಇನ್ನೆಷ್ಟು ಬಡೆಯಬಹುದು ಚಾಟಿಯಿಂದ? ರಹಸ್ಯ  ಮತದಾನಕ್ಕೆ 
ಒಪ್ಪಬಾರದು  ಎಂದುಕೊಂಡ  ವಿಶ್ವಂಭರ.  ಸೌದಾಮಿನಿಯ  ದುರಾಡಳಿತದ ಪುಟ್ಟ         
ಚಿತ್ರ ಕೊಟ್ಟ. ಇಲ್ಲಿ ಪಕ್ಷದ ಭವಿತವ್ಯದ  ಪ್ರಶ್ನೆ ಅಡಗಿದೆ,  ಎಂದ.  ತೀರಾ ಹಾಳಾಗು    
ವುದಕ್ಕೆ ಮುನ್ನ ರಿಪೇರಿ  ಕಾರ್ಯ  ನಡೆಯಬೇಕು ಎಂದು ಸೂಚಿಸಿದ.   ನಮ್ಮವರು   
ಯಾರಿಗೂ ಅಧಿಕಾರ ವ್ಯಾಮೋಹವಿಲ್ಲ ; ನಮಗೆ ಬೇಕಾದ್ದು ಸುಗಮ ರಾಜ್ಯಾಡಳಿತ.
ಸಹಿ  ಹಾಕಿರುವ  ನಮ್ಮ  ಎಂಬತ್ತು  ಜನ  ಮಾತ್ರವಲ್ಲ,  ಎಲ್ಲರೂ  ಈಗಿನ  ಮುಖ್ಯ 
ಮಂತ್ರಿಯಲ್ಲಿ ಅವಿಶ್ವಾಸ  ಸೂಚಿಸಬೇಕೆಂದು  ನಾನು  ಕರೆ  ಕೊಡುತ್ತೇನೆ.  ಹೊಸ 
ಅಧ್ಯಾಯ ಆರಂಭಿಸೋದಕ್ಕೆ ಇನ್ನು ಸಿದ್ಧರಾಗೋಣ.
     ಈ  ವಿಶ್ವಂಭರ  ನಾಲಗೆ  ಸಡಿಲ ಬಿಟ್ಟಿರಲಿಲ್ಲ. ತನ್ನ ಗತ ಜೀವನವನ್ನು  ಕೆದಕ 
ಬೇಡ-ಎಂದು  ನಕುಲದೇವ್ಜಿ  ಹಿತೋಕ್ತಿ   ಆಡಿರಬಹುದು.    (ಆಡಿದ್ದರು : 'ಇಂಥವ 
ಳನ್ನು ಮುಖ್ಯಮಂತ್ರಿ ಮಾಡಿದೆವಲ್ಲ? ಪಕ್ಷದ ಮಾನ ಏನು ಉಳಿದ ಹಾಗಾಯಿತು?')
     ಅವನು ಕುಳಿತ ; ಇವಳು ಎದ್ದಳು.
     "ಹಲವು   ಕನಸುಗಳೊಂದಿಗೆ ಈ  ಸ್ಥಾನಕ್ಕೆ  ಬಂದೆ  ಈಗಲೂ ಆ ಕನಸುಗಳು 
ಭದ್ರವಾಗಿವೆ.ನಿಮ್ಮೆಲ್ಲರ ವಿಶ್ವಾಸಕ್ಕೆ ಪಾತ್ರಳಾದ ನನ್ನನ್ನು ನೋಡಿ  ಪ್ರಧಾನಿ ಹೇಳಿ 
ದ್ದರು-  'ನೀನು  ದೇಶದ   ಪ್ರಥಮ   ಮಹಿಳಾ  ಮುಖ್ಯಮಂತ್ರಿ,   ಎಲ್ಲ  ಕಣ್ಣುಗಳೂ
ನಿನ್ನ  ಮೇಲಿವೆ'   ಇಲ್ಲ,   ಮರೆತಿಲ್ಲ  ನಾನು  ಏನನ್ನೂ  ಮರೆತಿಲ್ಲ.   ಅಮಾಯಕ 
ಶಾಸಕರಿಗೆ ಇಲ್ಲದ ಸಲ್ಲದ  ಆಸೆ  ತೋರಿಸಿ  ನನ್ನ  ವಿರುದ್ಧ  ಎತ್ತಿಕಟ್ಟುವ  ಪ್ರಯತ್ನ 
ನಡೆಯಿತು.  ಆದರೆ  ಶಾಸಕರು  ಅವರ  ಬೋನಿಗೆ  ಬಿದ್ದರೆ ?  ಇಲ್ಲ-ಇಲ್ಲ !  ನನ್ನ 
ಪಕ್ಷದ ಬಹುಸಂಖ್ಯಾಕ   ಶಾಸಕರು  ನನಗೇ ಬೆಂಬಲ ಕೊಡ್ತಾರೆ ಅನ್ನೋ ಭರವಸೆ 
ನನಗಿದೆ.   ರಾಜ್ಯದ ಏಳ್ಗೆಗೆ,  ರಾಷ್ಟ್ರದ ಏಳ್ಗೆಗೆ ಬೇಕಾಗಿರುವುದು ಅರ್ಪಿತ ದುಡಿಮೆ, 
ಆಚಲ ನಿಷ್ಠೆ,  ಕಿಪ್ಕಿಂಧೆಯ  ದರಿದ್ರ  ಕೋಟೆಯನ್ನು ಕಂಡಾಗ  ನನ್ನ ಹೃದಯ ಕರಗಿ 
ನೀರಾಗ್ತದೆ. ನನ್ನ ಕಡೆಯವರು ಆತ್ಮಾಭಿಮಾನಿಗಳು.  ದಯವಿಟ್ಟು  ಒಂದು ವಿಷಯ 
ನೆನಪಿಡಿ : ವಿಶ್ವಂಭರ ಹೊಸಬರು.  ನಾನು  ಅನುಭವಿ   (ಒಂದು ಧ್ವನಿ :'ಮೊದಲು 
ನೀವೂ ಹೊಸಬರಾಗಿದ್ರಿ') ಸಾರಿ ಹೇಳ್ತೇನೆ : ಈಗ ಹಳಬಳಾಗಿಲ್ಲ. ನನ್ನ ಪರಮ 
ವಿಶ್ವಾಸಕ್ಕೆ ನೀವೆಲ್ಲರೂ ಪಾತ್ರರು ಅನ್ನೋದನ್ನು ತೋರಿಸಿಕೊಡಿ."
      -ಇದು ಸೌದಾಮಿನಿ ಆಡಿದ ಮಾತಿನ ಸಾರ 
      ನಕುಲದೇವರ ಎದುರು ಸಭಾಂಗಣದಲ್ಲಿ ಮೌನ ಹೆಪ್ಪುಗಟ್ಟಿತು.