ಪುಟ:ಮಿಂಚು.pdf/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 241 ಧಕ್ಕೆಯಾಗದಂತೆ, ಕುಂದು ಬರದಂತೆ, ನಿವೃತ್ತರಾಗುತ್ತಿರುವ ನಾಯಕಿ ಹೊಸಬರ ಹೆಸರನ್ನು ಸೂಚಿಸಬೇಕು. ಸೌದಾಮಿನಿಜಿ, ವಿಶ್ವಂಭರರ ಹೆಸರನ್ನು ಸೂಚಿಸ್ತೀರಾ?"

     “ಸಂತೋಷದಿಂದ ಹೆಸರು ಸೂಚಿಸ್ತಾ,   ಐದು ನಿಮಿಷ    ವಿಶ್ವಂಭರರ ಗುಣ 

ಗಾನ ಮಾಡೋದಕ್ಕೆ ಅವಕಾಶ ಕೊಡಿ."

     “ಧಾರಾಳವಾಗಿ, ಐದಲ್ಲ ಹತ್ತು ನಿಮಿಷ ತಗೊಳ್ಳಿ." 
     ಪ್ರಚಂಡ ಚಪ್ಪಾಳೆಯ ನಡುವೆ  ಮುಗುಳುನಗುತ್ತಲೇ  ಸೌದಾಮಿನಿ  ಎದ್ದಳು; 

ಸರಿಗೊಳಿಸಿದ ಧ್ವನಿವರ್ಧಕದೆದುರು ನಿಂತಳು. ಮುಖಗಳನ್ನು ಹುಡುಕುತ್ತ ಹುಡುಕುತ್ತ ಕುಳಿತವರ ಮೇಲೆಲ್ಲ ಕಣ್ಣೋಡಿಸಿದಳು. ವೇದಿಕೆಯತ್ತ ತಿರುಗಿದಳು :

     “ರಾಷ್ಟ್ರದ ಹಿರಿಯ ನಾಯಕರಲ್ಲೊಬ್ಬರಾದ,   ದೀರ್ಘಕಾಲದ ನನ್ನ ಆತ್ಮೀಯ 

ಗೆಳೆಯರಾದ ಸನ್ಮಾನ್ಯ ನಕುಲದೇವ್ಜಿ,ಇದು ನನ್ನ ಪಾಲಿಗೆ ಅತ್ಯಂತ ಸಂತೋಷದ ಘಳಿಗೆ, ವಿಶ್ವಂಭರರು ನನ್ನ ಮಟ್ಟಿಗೆ ನಿಜವಾಗಿಯೂ ಅಪರಿಚಿತರು, ಆದರೆ ಅವರ ಚಟುವಟಿಕೆಯನ್ನು ಈಕ್ಷಿಸಿ ತೃಪ್ತಳಾಗಿದ್ದೇನೆ. ಅವರ ವಿಷಯದಲ್ಲಿ ನನಗೆ ವಾತ್ಯಲ್ಯ, ಮಮತೆ. ಅವರನ್ನು ನನ್ನ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಅಪೇಕ್ಷೆ ನನಗಿತ್ತು, ಆದರೆ ಏನೋ ಗಾಳಿ ಬೀಸಿ, ರಾಜ್ಯ ಪುರುಷನ ಕೂದಲು ಕೆದರಿತು.

     “ಪ್ರೀತಿಯ ಸಹೋದ್ಯೋಗಿ ವಿಶ್ವಂಭರರು ಒಂದೆರಡು ತಿಂಗಳ ಹಿಂದೆ ನನ್ನ 

ಬಗ್ಗೆ ಒಂದು ಪುಸ್ತಕ ಬರೆದಿದ್ದರು. ಬಹಳ ಸ್ವಾರಸ್ಯ ಉಳ್ಳ ಕಥೆ. ನನ್ನನ್ನು ಕೇಳಿ ದ್ದರೆ ಇನ್ನಷ್ಟು ಮಾಹಿತಿ ಕೊಡ್ತಿದ್ದೆ. ಓದುವುದಕ್ಕೆ ಪುಸ್ತಕ ಇನ್ನೂ ಹೆಚ್ಚು ಖುಶಿ ನೀಡ್ತಿತ್ತು. ಒಬ್ಬ ಶಾಸಕ ಮುಖ್ಯಮಂತ್ರಿಯ ಜೀವನಕಥೆ ಬರೆದದ್ದು ಎಲ್ಲಿಯಾ ದರೂ ಉಂಟಾ ? ನಕುಲದೇವ್ಜಿ ಇಂಗ್ಲಿಷಿನಲ್ಲಿ ಆ ಪುಸ್ತಕದ ಸಾರಾಂಶ ಮಾತ್ರ ಓದಿದ್ದಾರೆ, ಪಧಾನಿಯೂ ಓದಿದ್ದಾರೆ.

     "ಹಿಂದೆ ರಾಷ್ಟ್ರಸಭಾ ಪಕ್ಷದಲ್ಲಿದ್ದ  ಮುಖಂಡನೊಬ್ಬ 'ಅವಳನ್ನು  ಕೋರ್ಟಿನ

ಕಟ್ಟೆ ಹತ್ತಿಸ್ತೀನಿ, ಬೆತ್ತಲೆ ಮಾಡ್ತೀನಿ' ಅಂತ ಗುಟ್ಟಿನಲ್ಲಿ ಅಂದರಂತೆ. ಆ ಕ್ಷಣಕ್ಕಾಗಿ ನನ್ನ ಸೀರೆ ಕಾಯ್ತಾ ಇದೆ ! (ವಿಶ್ವಂಭರನೂ ನಕುಲದೇವನೂ ಪಿಸುಮಾತನಾಡಿ ದರು, ನಿಲ್ಲಿಸಬೇಕಲ್ಲ ಇವಳ ಪ್ರವರ ? ನಕುಲದೇವ : 'ಸೌದಾಮಿನಿಜಿ, ಚುಟುಕು ಮಾಡಿ') ಮೊಟಕು ಮಾಡಿದರೆ ಮಜಾ ಇರೋದಿಲ್ಲ-ನಿಮಗೆ ಗೊತ್ತಿಲ್ವ ನಕುಲಣ್ಣ ? ನೀವೇ ದಯಪಾಲಿಸಿದ ಕಾಲಾವಕಾಶವನ್ನಾದರೂ ಕೊಡಿ. (ಗದ್ದಲ : “ಅವರು ಮಾತಾಡಲಿ ! ಮಾತಾಡಲಿ !” “ಬೇಡ ! ಬೇಡ !” ಸದ್ದು ಎಡದಿಂದಲೋ ? ಬಲದಿಂದಲೋ ? ಯಾವ ಸದ್ದು ಎಲ್ಲಿಂದ?) ಸ್ವತಂತ್ರ ಭಾರತ ದಲ್ಲಿ ಬಡಪ್ರಾಣಿಗೂ ಹುಲ್ಲು ಮೇಯುವ, ಉಸಿರಾಡುವ ಹಕ್ಕಿದೆ. ನನಗಿಲ್ಲವಾ ? ಮಾತು ಬರ್ತದೆ. ಅದನ್ನು ಆಡುವಂತಿಲ್ಲವಾ ? ಕಿಷ್ಕಿಂಧೆಯ ಮುಖ್ಯಮಂತ್ರಿ ಯಾದ ನಾನು ಒಂದು ಕಾಲದಲ್ಲಿ ಪುಟ್ಟವ್ವನಾಗಿದ್ದೆ -ಅನಾಥಾಶ್ರಮ ನಡೆಸ್ತಿದ್ದ ಸಮಾಜ ಸೇವಿಕೆ ಪುಟ್ಟವ್ವ ! (“ನಿಲ್ಲಿಸಿ! ನಿಲ್ಲಿಸಿ!” “ಮಾತಾಡಿ! ಮಾತಾಡಿ!") 16