ಪುಟ:ಮಿಂಚು.pdf/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ




ಮಿಂಚು 243 ಲೆಂದೇ ಅವು ಅಲ್ಲಿದ್ದುವು. ಬಹಳ ದೊಡ್ಡ ಹಾರವನ್ನು ಧನಂಜಯಕುಮಾರತಂದಿದ್ದ. ಹೊರ ಕೊಠಡಿಯಲ್ಲಿ ಪರಶುರಾಮ ಕಣ್ಣೀರು ಒರೆಸಿಕೊಳ್ಳುತ್ತಿದ್ದುದನ್ನು ಕ೦ಡು, ಅವನ ಮುಖ ಕಪ್ಪಿಟ್ಟಿತು, “ಸೋತು ಹೋದ್ರಾ?” ಎಂದು ಕೇಳಿದ. ಆಗ ಯಾರೋ ಓಡಿ ಬಂದು ಸಾಹುಕಾರನ ಕೈಯಿಂದ ಹಾರವನ್ನೆಳೆದುಕೊಂಡು ಸೌದಾಮಿನಿಯ ಬಳಿಗೆ ಓಡಿ ಆಕೆಗೆ ಅದನ್ನು ಹಾಕಿದರು. ಬೇರೆಯೂ ಕೆಲ ಹಾರಗಳು ಆಕೆಯ ಎದೆಯನ್ನು ಮುಚ್ಚಿದುವು.

          ಪರಶುರಾಮ ಬಂದು ಮಾತಾಜಿಗೆ ನುಡಿದ :
          “ನಕುಲದೇವ್   ಹೇಳಿದ್ರು,   ರಾಜಭವನಕ್ಕೆ   ನೀವು   ಬರಬೇಕಂತೆ.   ಇನ್ನು 

ಅರ್ಧ ಗಂಟೆಯಲ್ಲಿ ಹೊಸ ಮುಖ್ಯಮಂತ್ರಿಗೆ ರಹಸ್ಯಾ ಪ್ರತಿಜ್ಣ್ನೆ ಬೋಧನೆಯಂತೆ.

          "ಅವಳೆಂದಳು : 
          “ಧನಂಜಯರ  ಕಾರು  ಬಂದಿದೆಯಾ ?       ಎಕ್ಸ್ಪ್ರೆಸ್ ಏಜನ್ಸೀದು?    ನಾನು 

ಇನ್ನು ಸರಕಾರೀ ಕಾರು ಬಳಸೋದಿಲ್ಲ, ನಿವಾಸಕ್ಕೆ ಹೋಗೋಣ,” -

          ಸೌದಾಮಿನಿಯನ್ನು  ಹಿಂಬಾಲಿಸಿ   ಬಹಳ   ಜನ   ಬಂದರು.ಇನ್ನೆಷ್ಟೋ  ಜನ 

ರಾಜಭವನಕ್ಕೆ ನಡೆದರು.

          .... ಸೌದಾಮಿನಿ ಅಷ್ಟರ ತನಕ ಹಾಗೆಯೇ ಇದ್ದ ಹಾರವನ್ನು ತೆಗೆದು ಸೋಫಾದ 

ಮೇಲೆ ಎಸೆದಳು.

          “ಪರಶುರಾಮ, ಮನೆಯಲ್ಲಿ ಯಾರಿಗಾದರೂ ಹೇಳಿ ಕಾಫಿ ಮಾಡಿಸಿ ಫ್ಲಾಸ್ಕಿನಲ್ಲಿ 

ತಾರೋ, ಇನ್ನು ನಾನು ಸರಕಾರೀ ಲೆಕ್ಕದಲ್ಲಿ ಕಾಫಿ ಕುಡಿಯೋದಿಲ್ಲ.”

          ಆತ ಮನೆಗೆ ಓಡಿದ.
          “ಮುಗಿಯಿತೋ ನಿಮ್ಮ ಹಾರಾಟ ?    ಕಾಫಿಗೇನಂತೆ?     ಮಾಡ್ಕೊಡ್ತೀವಿ.... 

ನೆಸ್ಕೆಫೇನೆ ಇದೆ.”

          ....ಬಿಸಿ ಕಾಫಿ ರುಚಿಯಾಗಿತ್ತು.
          “ಯಾರು ಮಾಡಿದ್ದು -ಹರಿಣಾಕ್ಷಿನೊ ? ಇನ್ನೊಬ್ಳೊ?"
          “ಇಬ್ರು ಸೇರಿ ಮಾಡಿದ್ರು, ಮಾತಾಜಿ."
          “ಧನಂಜಯ   ಅಲ್ಲಿದ್ರೆ    ಅವನಿಗೆ  ಹೇಳು.  ಎಕ್ಸ್ಪ್ರೆಸ್  ಟ್ರಾವೆಲ್   ಏಜನ್ಸಿಗೆ 

ಹಣ ನಾನ್ಕೊಡ್ತೀನಿ. ನಾಳೆ ನಸುಕಿನಲ್ಲಿ ಕಾವೇರಿಗೆ ಹೋಗಿ ಸ್ನಾನ ಮಾಡಿ ಹೊಸ ಜೀವನ ಆರಂಭಿಸ್ಬೇಕು. ಬೇರೆ ಮನೆ ಹುಡುಕ್ಬೇಕು. ನಮ್ಮ ಅನಾಥಾಶ್ರಮದಲ್ಲಿ ಅತಿಥಿಗೃಹದಲ್ಲಿ ನಾನು ಹತ್ತು ದಿವಸ ಇರಬಹುದೇನೊ ಕೇಳು. ಉತ್ಕಲಮಠಕ್ಕೆ ಹೋಗಿ ಬರೋ ವಿಚಾರ ಒಂದಿದೆ, ಶಾಸಕಾಂಗ ಪಕ್ಷದ ವಿಶೇಷ ಸಭೆ ಏನಾದರೂ ಈ ಮಧ್ಯೆ ಕರೆದರೆ ವಾಪಸು ಬಂದ್ಬಿಡ್ತೀನಿ." ಕಾಫಿ ಕುಡಿದು, ಇತರರು ತನ್ನನ್ನು ಹಿಂಬಾಲಿಸುವುದಕ್ಕೆ ಮೊದಲೇ ಸೌದಾಮಿನಿ