ಪುಟ:ಮಿಂಚು.pdf/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

250 ಚುಚ್ಚಲೆ ಅವನ್ನು ? ಕೆಡು ರಕ್ತವಿದ್ದರೆ ಹೊರಕ್ಕೆ ಹರಿದೀತು, ಪುಟ್ಬಾ ಸೌದಾ,

ಮಿನಿ...ಛೆ! ಏನೂ ಆಗಿಲ್ಲ. ಹಗಲು ನಡೆದ ಕುರುಕ್ಷೇತ್ರದ ರಣಭೂಮಿಗೆ 

ಸಿಂಗರಿಸಿಕೋಳ್ಳದೆಯೇ ನಾನು ಹೋದೆ, ಲಕ್ಸನಿಂದ ಮುಖಮಾರ್ಜನ. ಸುವಾ

ಸನೆಯ ಕೊಬರಿ ಎಣ್ಣೆ ಕೇಶರಾಶಿಗೆ. ಹಣಿಗೆಯಿಂದ ನಿಧಾನವಾಗಿ. ಅವಸರವಿಲ್ಲ, 

ಯಾತರ ಅವಸರ ? ಹಣಿಗೆಯಲ್ಲಿ ಸಿಕ್ಕಿಕೊಳ್ಳುತ್ತಿರುವ ಬಿಳಿ ಕೂದಲು. ಉದುರಿವೆ ಕೆಲವು. ಬಿಳಿಯಾಗುತ್ತಿರುವುದಂತೂ ಖಂಡಿತ: ಸ್ಣೋ ಪೌಡರ್, ತುಟಿಗಳಿಗೂ

ಇರಲಿ ಒಂದಿಷ್ಟು ಕಾಂತಿ. ಬಿಳಿ ರೇಷ್ಮೆ ಸೀರೆ. ಒಂದೆಳೆ ಮುತ್ತಿನ ಸರ....
       ....ವಿರೋರಾಭಜನೆ ಮುಗಿಯಿತು. ಕರಕರಕರ. ಭಕ್ತಾದಿಗಳು ಚೆದರುತ್ತಿದ್ದಾರೆ. ನಿಲ್ಲಿಸಿದಳು.
      ದಂತೇಶ್ವರಿಗೆ ಆ ಹಣ್ಣುಗಳನ್ನು ಅರ್ಪಿಸಬೇಕು: ತಾನು ತಿನ್ನಲು 

ಅಲ್ಲನೈವೇದ್ಯ.

      ದೇವಿಯ ಎದುರು ಸೌದಾಮಿನಿ ಪದ್ಮಾಸನ ಹಾಕಿ ಕುಳಿತಳು.
      ಅಲ್ಲಿ ಜಗದಲಪುರದಲ್ಲಿ. ಹಿರಿಯ ಯೋಗಿನಿ ಲೇಹ್ಯ ತಯಾರಿಯ ಮೇಲ್ವಿ ಚಾರಣೆಯಲ್ಲಿದ್ದಾಗ ಸೌದಾಮಿನಿ ಆ ಅಕ್ಕಾಜಿಯ ಜತೆ ಹೊತ್ತು ಕಳೆದಿದ್ದಳು. 

ಕಾನನದ ನೂರು ಪುಷ್ಪಗಳನ್ನು ನೂರು ಚಿಗುರುಗಳನ್ನು ತಂದು ಭಟ್ಟಿ ಇಳಿಸಿ ಯೌವನದ ಮಕರಂದವನ್ನು ಸೆರೆ ಹಿಡಿಯುವುದು ಎಂಥ ಅದ್ಭುತ!

   ಒಂದು ದಿನ ಆವರೆಗೆ ತಾನು ನೋಡದೆ ಇದ್ದ ఒಳಕೊಠಡಿಗೆ ಪುಟ್ಟವ್ವ
ಕಾಲಿಟ್ಟಳು. ಅಲ್ಲಿ ಒಬ್ಬಳು ಅರೆಯುತ್ತಿದ್ದಳು, ಮಣ್ಣಿನ ಹೂಜಿಯಿಂದ ಏನನ್ನೋ ತೊಟ್ಟತೊಟ್ಟಾಗಿ ಬಿಡುತ್ತಿದ್ದಳು. ಬಳಿಕ ಎಲ್ಲವನ್ನೂ ಕೆರೆದು ಬೆಣ್ಣೆ ಬೆರೆಸಿ ಮಣ್ಣಿನ ಪಾತ್ರೆಯಲ್ಲಿರಿಸಿ ಕುದಿಸುತ್ತಿದ್ದಳು.
    "ಅದು ಏನು ತಂಗಿ?"
    “ಶ್ ! ಬಾಬಾಜಿಗೆ ಗೊತ್ತಾದರೆ ಬಯ್ತಾರೆ.” 
    “ಹಾಗಾದರೆ ಅವರನ್ನೇ ಕೇಳ್ತೀನೆ.”
    “ಒಳಗೆ ಯಾಕೆ ಬಿಟ್ಟೆ ಅಂತ ಬಯ್ತಾರೆ.”
    “ಅವರನ್ನು ಕೇಳೋದೂ ಇಲ್ಲ, ಅವರಿಗೆ ಹೇಳೋದೂ ಇಲ್ಲ, ನಾನು

ಹೊರಗಿನವಳಲ್ಲ. ಲೇಹ್ಯ ಸೇವಿಸುತ್ತಿರುವ ಭಕ್ತಿ: ಗುಟ್ಟಿನಲ್ಲಿ ತಿಳಿಸು.” “ಹೊರಡು, ಹೊರಡಿಲ್ಲಿಂದ !"

   ಬೇರೋಂದು ದಿನ ಆ ಕಿರಿಯ ಯೋಗಿನಿ “ಬಾ" ಎಂದು ಪುಟ್ಟವ್ವವನ್ನು,

ಮಠದ ಹಿಂಭಾಗಕ್ಕೆ. “ನೋಡು, ಆ ಪೊದೆಗಳ ಬುಡದಲ್ಲಿ...” ఎంದಳು. - “ಏನೂ ಇಲ್ಲವಲ್ಲ."