ಪುಟ:ಮಿಂಚು.pdf/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 251

   “ಸರಿಯಾಗಿ ನೋಡು.. ನಿಧಾನವಾಗಿ, ಒಂದರ ಮೇಲೊಂದು ತೆವಳುತ್ತ,

ಚಲಿಸುತ್ತಿರುವ ಘಟಸರ್ಪಗಳು.”

    ಪುಟ್ಟವ್ವ ಮತ್ತೂ ನೋಡಿದಳು. ಚಲನೆ ಗೋಚರವಾಯಿತು.
    “ಅಬ್ಬ! ಅವು ಈಚೆಗೆ ಬರೋದಿಲ್ಲವ?”
    “ಇಲ್ಲ ಅವು ಆ ಗಿಡಗಳ ಸಮ್ಮೊಹನಕ್ಕೆ ಒಳಗಾಗಿವೆ. ನಾವು ಹೋಗಿ 

ಅವುಗಳ ಬಾಯಿ ತೆರೆದು ವಿಷ ಹಿಂಡಿ ತರೈಡ್ತೀವೆ.”

    "ವಿಷ ?”
    “ಹೌದು. ಅಮೃತ ತಯಾರಿಸೋದಕ್ಕೆ ಅದು ಬೇಕು.”
    “ಅಮೃತ ?”
    “ವಿಷದಿಂದ ಅಮೃತ, ವಿಷಾಮೃತ. ದಿನವೂಛ್ದೊಂದು ತೋಟ್ಟು

ನೆಕ್ಕಿದರೆ ಅಮರತ್ವ ಪ್ರಾಪ್ತವಾಗ್ತಧಂತೆ."

    “ಇಷ್ಟರತನಕ ಯಾರಿಗೆ ಆಗಿದೆ ?”
    “ಯಾರಿಗೂ ಇಲ್ಲ, ಧರ್ಮೇಂದರ್ ಬಾಬಾ ಏನು ನಿರ್ಧಾರ ಮಾಡ್ತಾರೋ 

ಗೊತ್ತಿಲ್ಲ. ಮೊದಲ ಬಿಂದು ಸಾವಿಗೆ ಕಾರಣ, ಸುಂದರ ಕನಸು ಕಾಣ್ತ ನಿದ್ದೆ ಹೋದಹಾಗೆ. ಮುಂದಿನ ಸೇವನೆಯಿಂದ ಎಶ್ಟೂ ದಿನಗಳಾದ ಮೇಲೆ, నిಧಾನ ವಾಗಿ. ಆ ಹಾವುಗಳು ಹರಿದಾಡುವ ಹಾಗೆ, ಎಚ್ಚರ."

   “ಅಮೃತವನ್ನು ಯಾವುದರಲ್ಲಿ ಇಡ್ತೀರಾ?”
   “ಹುಣಸೆಬೀಜವನ್ನು ಕೊರೆದು ಅದರಲ್ಲಿ ಒಂದೆರಡು ತೊಟ್ಟುಬಿಟ್ಟು ಮಯಣ
ದಿಂದ ಮುಚ್ತೀವಿ."
  “ನನಗೊಂದು ಕೊಡೇ."
  “ಅಪಾಯ! ಪ್ರಯೋಗ ಮಾಡೀಯ ಎಲ್ಲಾದರೂ!"
  “ಯಾರಲ್ಲಾ ಇಲ್ಲದ್ದು ನಮ್ಮಲ್ಲಿದ್ದರೆ ಅದರಿಂದ ಶುಭವಾಗ್ತದೆ.”
  “ಬಾಬಾಜಿಗೆ ಹೇಳಿದರೆ ನನ್ನಾಣೆ. ಬಾ. ಆ ಕೊಠಡಿಗೆ ಹೋಗೋಣ.”
  ಒಂದು ಕಾಯಿ ಕೊಟ್ಟಳು. ಇಶ್ಟು ದೀರ್ಘ ಸಮಯ ನನ್ನಲ್ಲಿ ಸುರಕ್ಷಿತವಾಗಿ 

ಅದು ಉಳಿಯಿತಲ್ಲ! ದಂತೇಶ್ವರಿಯ ಬೆನ್ನ ಹಿಂದೆ ಅದು ಅವಿತು ಕುಳಿತಿದೆ (ತಾನು ಬಚ್ಚಿಟ್ಟಿದ್ವೇನೆ.)

   ವಿಷಾಮೃತ ಪುರಾಣ ಸ್ವಾರಸ್ಯಕರವಾಗಿತ್ತು.  ಆ ಹುಡುಗಿ ಅಂದಳು : 

ಒಂದು ತೊಟ್ಟು ನಾಲಗೆಗೆ ಬಿದ್ದೋಡನೆ ಕಾಮನಬಿಲ್ಲಿನ ಬಣ್ಣಗಳು ಕಾಣಿಸುತ್ತವಂತೆ. ಹಲವು ವರ್ಣಗಳ ಪುಷ್ಪಗಳಿಂದ ಬರಿಯ ದೇಹವನ್ನು ಅಲಂಕರಿಸದಂತಾಗ್ರದಂತೆ, ಆಮೇಲೆ ದೇವೇಂದ್ರ ಲೋಕಕ್ಕೆ ಪಯಣ.. ಮುಂದೆ ಕ್ರಮೇಣ ಎಚ್ಚರ.