ಪುಟ:ಮಿಂಚು.pdf/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

252

 “ದಂತೇಶ್ವರಿ, ಪ್ರಯೋಗ ಮಾಡಿನೋಡುವ ಆಸೆ ಅನಾದಿ ಕಾಲದ್ದು, ನನ್ನ

ಪೂರ್ವಜರದ್ದು. ಅಪ್ಪಣೆಯಾ?" ಎಂದು ಸೌದಾಮಿನಿ ಯಾಚಿಸಿದಳು ಕೈಜೋಡಿಸಿ.

  ಎಷ್ಟಾಯಿತು ಹೊತ್ತು? ಎದುರು ಕೊಠಡಿಯ ಗೋಡೆಯ ಮೇಲಿ ಗಡಿಯಾರದ

ಮುಳ್ಳುಗಳು ಚಲಿಸುತ್ತಿವೆ, ಟಿಕ್ ಟಿಕ್ ಸದ್ದು ಮಾಡುತ್ತ. ಎಷ್ಟು ಹೊತ್ತಾದರೆ ಏನೀಗ? ನಡುವಿರುಳು ದಾಟಿರಬಹುದು, ಒಂದೆರಡು ಗಂಟೆ ಆಗಿರಬಹುದು, ಡ್ರೈವರ್ ಬರುವುದು ನಾಲ್ಕೂವರೆ ಗಂಟೆಗಲ್ಲವೆ?

  ಈ ದಂತೇಶ್ವರಿಯನ್ನು ಇಲ್ಲಿಂದೆತ್ತಿ ದೇವರ ಪೆಟ್ಟಿಗೆಯಲ್ಲಿಡಬೇಕು. ಈ 

ದೇವಿಯ ಹಿಂಬದಿಯಲ್ಲಿದೆ ಆ ನಿಗೂಢ ಹುಣಸೇಬೀಜ.

  ದೇವರನ್ನು ಪೆಟ್ಟಿಗೆಯಲ್ಲಿಟ್ಟಳು. ಪೆಟ್ಟಿಗೆ ಶಯಾಗೃಹ ಸೇರಿತು. ಬೀಜ 

ಮೇಜಿನ ಮೇಲೆ ಕುಳಿತಿತು. ಧರ್ಮೇಂದರ್ ಬಾಬಾರಲ್ಲೇ ತಾನು ಉಳಿದಿದ್ದರೆ ಅಮರತ್ವದ ಪ್ರಯೋಗಕ್ಕೆ ಅವರು ತನ್ನನ್ನೇ ఆరిಸುತ್ತಿದ್ದ ರೇನೋ.

   ಮೂತ್ರಕೋಶ ಕಟ್ಟಿಕೊಂಡಿತ್ತು. ಒಳ ಕೊಠಡಿಗೆ ಹೋಗಿ ಬಂದ ಮೇಲೆ

ಹಾಯಿನಿಸಿತು. ದೀಪ ಆರಿಸಿ,ಮೂಲೆಯು ಮ೦ದ ದೀಪವನ್ನು ಉರಿಸಿ, ಹುಣಸೇ ಬೀಜದ ಮಯణ ಮುಚ್ಚಳವನ್ನು ತೆಗೆದು, ಕಿಟಿಕಿಯ బళి ನಿಂತು, ಹೊರಗಿನ ಗಾಳಿ ಯನ್ನು ಎದೆಗೂಡల్లి ತುಂಬಿ ಬಿಟ್ಟು, ಕಾಯಿಯನ್ನು ನಾಲಗೆಯ ಮೇಲೆ ಹಿಡಿದರೆ,

ಏನೂ ಹೊರಬರುತ್ತಿಲ್ಲವಲ್ಲ? ಆವಿಯಾಗಿದೆಯೇನೊ ಎಂಬ ಸಂದೇಹ ಹುಟ್ಟಿತು. 

ಮತ್ತೂ ಒಂದು ನಿಮಿಷ ಹಾಗೆಯೇ ಹಿಡಿದಳು. ಬಂತು! ಶೀತಲವಾದುದೇನೊ ನಾಲಗೆಯನ್ನು ಸ್ಪರ್ಶಿಸಿತು. ಸೌದಾಮಿನಿ ಬರಿದು ತೊಗಟೆಯನ್ನು ಕಿಟಿಕಿಯ ಮೂಲಕ ಉದಾನಕ್ಕೆಸೆದಳು. ಹಾಸಿಗೆಯ ಮೇಲೆ ಒರಗಿ ಇನ್ನೇನಾಗುವುದೊ ಎಂದು ಅಚ್ಚರಿಪಟ್ಟಳ್ಳು.

 ಮುಂಜಾವದಲ್ಲಿ ನಾಲ್ಕು ಗಂಟೆಗೆ ಪರಶುರಾಮನಿಗೆ ಎಚ್ಚರವಾಯಿತು.

ಪ್ರಯಾಣಕ್ಕೆ ಸಿದ್ಧರಾಗಲು ಮಾತಾಜಿಗೆ ಅರ್ಧ ಗಂಟೆ ಬೇಕು, ಹಿಂದಿನ ಬಾಗಿಲಿ ನಿಂದ ಪರಶುರಾಮ ಒಳ ಬಂದ . ಟಕ್ ಟಕ್ ಮಾಡಿದ. ತನ್ನಲ್ಲಿದ್ದ ಬೀಗದ ಕೈಯನ್ನು ಶಯಾಗೃಹದ ಬಾಗಿಲಿಗೆ ತುರುಕಿಸಿ ತಿರುಗಿಸಿದ. ಪುನಃ “ಮಾತಾಜಿ ! ಮಾತಾజి !" ಎಂದು ಗಟ್ಟಿಯಾಗಿ ಕರೆದ. ಸ್ವಲ್ಪ ಗಾಬರಿಯಾಗಿ, ಸ್ವಿಚ್ ಹಾಕಿದ. ದೀಪ ಢಾಳಾಗಿ ಉರಿಯಿತು. ಗಾಢನಿದ್ರೆಯಲ್ಲಿದ್ದಳು ಸೌದಾಮಿನಿ, ಮೈಮುಟ್ಟಿ ಎಬ್ಬಿಸಬಹುದೊ ಬಾರದೊ ಎಂದು ಅನುಮಾನಿಸಿ, ತಪ್ಪಲ್ಲ ಎಂದು ತೀರ್ಮಾನಿಸಿ ಮೆಲ್ಲನೆ ತೋಳನ್ನು ಮುಟ್ಟಿದ. ಊಹೂಂ.. ತಣ್ಣಗಿದೆಯಲ್ಲ ಮೈ ? ಜ್ವರ ಬಂದು ಈಗ ಬಿಟ್ಟಿದೆಯೊ? ವಕ್ಷಸ್ಥಲದ ಏರಿಳಿತ ಇರಲಿಲ್ಲ. ಅರೇ ! ಉಸಿರಾಟ? ತನ್ನ